ಭಾಕ್ಸ್ ಆಫೀಸ್ ನಲ್ಲಿ (Box Office) ಯಾವುದಾದರೂ ಸಿನಿಮಾ ಸೂಪರ್ ಡೂಪರ್ ಹಿಟ್ (Super Hit) ಆದರೆ ಅದರ ಮುಂದುವರೆದ ಭಾಗ ಬರುವುದು ಸಾಮಾನ್ಯವಾಗಿದೆ. ಅದರಲ್ಲೂ ಕೂಡ ಇದೀಗ ಪ್ಯಾನ್ ಇಂಡಿಯಾ (Pan India) ಜಮನಾ ನಡೆಯುತ್ತಿರು ಕಾರಣ ನಿರ್ದೇಶನ ನಿರ್ಮಾಪಕರು (Director & Producer) ಸಿನಿಮಾ ಮೊದಲ ಭಾಗದ ಅಂತ್ಯದಲ್ಲಿ ಎರಡನೇ ಭಾಗದ ಹಿಂಟ್ ಕೊಡುತ್ತಾರೆ. ಹೌದು ಈಗಾಗಲೇ ಬಾಹುಬಲಿ (Bahubali) ರೋಬೋ (Robo) ಕೆಜಿಎಫ್ (KGF) ನಂತಹ ಸೀಕ್ವಲ್ ಸಿನಿಮಾಗಳು ಸೂಪರ್ ಹಿಟ್ ಆಗಿದ್ದು ಈ ಬೆನ್ನಲ್ಲೆ ಕಾಂತಾರ(Kantara) ಪುಷ್ಪ(Pushpa) ಹಾಗೂ ಕಬ್ಜ(Kabza) ಸಿನಿಮಾಗಳು ಎರಡನೇ ಭಾಗದ ಸಿನಿಮಾಗೆ ತಯಾರಿ ನಡಿಸುತ್ತಿವೆ. ಇನ್ನು ಇದರೆಲ್ಲದರ ನಡುವೆ ಕೆಲವು ಸಿನಿಮಾಗಳ
ಚಿತ್ರಕಥೆಗೂ-ಶೀರ್ಷಿಕೆಗೂ ಅಷ್ಟಾಗಿ ಹೊಂದಾಣಿಕೆ ಆಗದೇ ಇದ್ದರೂ ಹಳೇ ಸಿನಿಮಾ ಶಿರ್ಷಿಕೆ ಇಟ್ಟು ಕೊಂಡೆ ಪಾರ್ಟ್ 2 ಮಾಡುತ್ತಾರೆ. ಉದಾಹರಣೆಗೆ ಮುಂಗಾರು ಮಳೆ 2(Mungaru Male 2) ಆಪ್ತಮಿತ್ರ 2 (Aptamithra 2) ಕೋಟಿಗೊಬ್ಬ 2 (Kotigobba 2) ಹೀಗೇ ಸಾಕಷ್ಟು ಸಿನಿಮಾಗಳು ತೆರೆಗೆ ಬಂದಿವೆ. ಈ ಸಿನಿಮಾಗಳಿ ಮೊದಲ ಭಾಗದ ಸಿನಿಮಾಗೂ ಯಾವುದೇ ಕನೆಕ್ಷನ್ ಇರುವುದಿಲ್ಲ. ಆದರೂ ಅದೇ ಶಿರ್ಷಿಕೆ ಬಳಸಿಕೊಳ್ಳಲಾಗಿದ್ದು ಕೆಲವು ಸಿನಿಮಾ ಹಿಟ್ ಲಿಸ್ಟ್ ಸೇರಿದರೆ ಇನ್ನು ಕೆಲವು ಪ್ಲಾಪ್ ಆಗಿವೆ.
ಹೀಗೆ ಚಿತ್ರಕಥೆಗೂ ಮತ್ತು ಶೀರ್ಷಿಕೆಗೂ ಅಷ್ಟಾಗಿ ಹೊಂದಾಣಿಕೆ ಆಗದೇ ಇದ್ದರೂ ಕೂಡ 2001 ರಲ್ಲಿ ತೆರೆಕಂಡಿದ್ದ ಡಾ.ವಿಷ್ಣುವರ್ಧನ್ (Vishnuvaedhan) ಅಭಿನಯದ ಬ್ಲಾಕ್ ಬಸ್ಟರ್ ಕೋಟಿಗೊಬ್ಬ (Kotigobba) ಚಿತ್ರದ ಮುಂದುವರಿದ ಭಾಗ ಅಲ್ಲದೇಯಿದ್ದರೂ ಸುದೀಪ್ (Sudeepa) ಅಭಿನಯದ ಕೆ.ಎಸ್.ರವಿಕುಮಾರ್ ನಿರ್ದೇಶನದ ಚಿತ್ರಕ್ಕೆ ಕೋಟಿಗೊಬ್ಬ-2 ಅಂತ ಹೆಸರಿಡಲಾಗಿತ್ತು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು ಕೂಡ. ಇನ್ನು ಶೀರ್ಷಿಕೆಯಲ್ಲಿ ಪವರ್ ಇದೆ. ಅದಕ್ಕಾಗಿ ಅದೇ ಟೈಟಲ್ ಇಡಲಾಗಿದೆ ಎಂದು ಸ್ವತಃ ಕಿಚ್ಚ ಸುದೀಪ್ ಕೂಡ ಒಪ್ಪಿಕೊಂಡಿದ್ದರು.
ಇನ್ನು ಹದಿನಾಲ್ಕು ವರ್ಷಗಳ ಹಿಂದೆ, ಅಂದ್ರೆ 2002ರಲ್ಲಿ ತೆರೆಕಂಡಿದ್ದ ಡಾ.ವಿಷ್ಣುವರ್ಧನ್ ಅಭಿನಯಿಸಿದ್ದ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ್ದ ಸಿನಿಮಾ ಸಿಂಹಾದ್ರಿಯ ಸಿಂಹ (Simhadriya Simha). ಕಲಾಸಾಮ್ರಾಟ್ ಎಸ್.ನಾರಾಯಣ್ ನಿರ್ದೇಶಿಸಿದ್ದ ಸಿಂಹಾದ್ರಿಯ ಸಿಂಹ ಚಿತ್ರದ ಎರಡನೇ ಸರಣಿ ಅರ್ಥಾತ್ ಸಿಂಹಾದ್ರಿಯ ಸಿಂಹ-2 ಬರಲು ಸಜ್ಜಾಗಿದ್ದು ಚಿತ್ರದಲ್ಲಿ ನಾಯಕರಾಗಿ ನಟಿಸುವ ಅವಕಾಶ ಈಗ ಸುದೀಪ್ ಪಾಲಾಗಿದೆ ಎನ್ನಲಾಗುತ್ತು.
ಆದರೆ ಸಿನಿಮಾ ನಿಂತು ಹೋಗಲು ಕಾರಣವೇನು ಗೊತ್ತಾ? ಸಿಂಹಾದ್ರಿಯ ಸಿಂಹ ಭಾಗ 2 (Simhadriya simha part 2) ಅಭಿನಯಿಸಲು ವಿಷ್ಣುವರ್ಧನ್ ರವರು ಬದುಕಿದ್ದಾಗಲೇ ಪ್ರಯತ್ನಿಸಲಾಯಿತು. ಹೌದು ಈ ಮೂಲಕವಾಗಿ ಆ ಪ್ರಯತ್ನ ಈಡೇರುವ ಮೊದಲೇ ನಟ ಡಾ ವಿಷ್ಣುವರ್ಧನ್ ರವರು ಇಹಲೋಕ ತ್ಯಜಿಸಿದರು. ಈ ಮೂಲಕವಾಗಿ ನಂತರದ ತಲೆಮಾರಿಗೆ ಈ ಚಿತ್ರ ಒಪ್ಪಿಸಲು ಮುಂದಾಗಲಾಯ್ತು. ಆಗ ನೆನಪಾಗಿದ್ದು ಕಿಚ್ಚ ಸುದೀಪ್ ಅವರು. ಹೌದು ಈ ರೀತಿಯಾಗಿ ಕತೆ ಸಿದ್ಧ ಮಾಡಿ ಅದನ್ನು ಎಸ್ ನಾರಾಯಣ್ ಅವರು ಕಿಚ್ಚ ಸುದೀಪ್ ಅವರಿಗೆ ತಿಳಿಸಿದ್ದು ಇನ್ನೆನೂ ಶೂಟಿಂಗ್ ಆರಂಭಿಸಬೇಕು ಅನ್ನುವ ಹೊತ್ತಿಗೆ ಎಲ್ಲ ತಲೆಕೆಳಗಾಯಿತು.
ಹೌದು ನಿರ್ಮಾಪಕರಾದ ವಿಜಯ್ ಕುಮಾರ್ ಅಗಲಿದ ಬಳಿಕ ಈ ಸಿನೆಮಾ ವಿಚಾರ ಕಂಪ್ಲೀಟ್ ಆಗಿ ನಿಂತು ಹೋಯಿತು. ಸದ್ಯ ಸಿನೆಮಾ ಸೆಟ್ ಏರಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಕೆಲವರ ಅಭಿಪ್ರಾಯದಿಂದ ಮುಂದಿನ ದಿನದಲ್ಲಿ ಈ ಸಿನೆಮಾ ಬರುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ. ನಿಮಗೂ ಕೂಡ ಸಿಂಹಾದ್ರಿಯ ಸಿಂಹ ಸಿನಿಮಾದಲ್ಲಿ ಕಿಚ್ಚನನ್ನು ನೋಡುವ ಆಸೆ ಇದ್ದರೆ ಕಮೆಂಟ್ ಮೂಲಕ ನಿಮ್ಮ ಅನಿಸಿಕೆ ತಿಳಿಸಿ.