Karnataka Times
Trending Stories, Viral News, Gossips & Everything in Kannada

Rishab Shetty: ರಾಜಕೀಯ ಸೇರುತ್ತಿರುವ ಬಗ್ಗೆ ಸ್ಪಷ್ಟ ನಿರ್ಧಾರ ತಿಳಿಸಿದ ನಟ ರಿಷಬ್ ಶೆಟ್ಟಿ

Advertisement

ನಟ, ನಿರ್ದೇಶಕ ರಿಷಬ್​ ಶೆಟ್ಟಿ (Rishab Shetty) ಅವರು ದೇಶಾದ್ಯಂತ ಖ್ಯಾತಿ ಗಳಿಸಿದ್ದಾರೆ, ಕಾಂತಾರ ಚಿತ್ರದ ಮೂಲಕ ಕರ್ನಾಟಕದ ಸಂಸ್ಕೃತಿ, ಚಂದ ನವನದ ಅದ್ಭುತ ಸಾಮರ್ಥ್ಯ ವನ್ನು ದೇಶ ವಿದೇಶ ದಲ್ಲಿ ಮತ್ತೊಮ್ಮೆ ನಿರೂಪಿಸಿದ ನಟ ರಿಷಭ್‌ ಶೆಟ್ಟಿ, ಈಗಾಗಲೇ ಅನೇಕ ಸ್ಟಾರ್ಸ್ ಕಾಂತಾರ (Kantara) ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಇದೀಗ ರಿಷಭ್ ರಾಜಕೀಯ ಬರ್ತಾರೆ ಅನ್ನು ವ ಸುದ್ದಿ ಹೊರಬಿದ್ದಿದೆ

ರಾಜಕೀಯಕ್ಕೆ ಬರಲಿದ್ದೀರಾ :

2023 ಕರ್ನಾಟಕದ ಸಾರ್ವತ್ರಿಕ ಚುನಾವಣೆ ಘೋಷಣೆ ಮಾಡಿದ್ದಾರೆ. ಮೇ 10ರಂದು ಎಲೆಕ್ಷನ್ ಘೋಷಣೆಯಾಗಿದೆ. ಪ್ರತಿಯೊಬ್ಬರು ವೋಟ್ ಮಾಡಿ ಎಂದು ನಟ ರಿಷಬ್ ಶೆಟ್ಟಿ ಟ್ವೀಟ್ (Tweet) ಮಾಡಿದ್ದಾರೆ, ಕೆಲ ಮೂಲಗಳ ಪ್ರಕಾರ ಬಿಜೆಪಿಯಿಂದಲೇ (BJP) ರಿಷಬ್‌ ಸ್ಪರ್ಧಿಸಲಿದ್ದಾರೆ ಎಂದೂ ಹೇಳಲಾಗಿತ್ತು, ಒಂದು ವೇಳೆ ಇದು ನಿಜವೇ ಆದರೆ, ಹುಟ್ಟೂರಿನಿಂದಲೆ ಚುನಾವಣೆಗೆ ಸ್ಪರ್ಧಿಸಲಿದ್ದಾರಂತೆ ಅನ್ನಲಾಗಿತ್ತು,ಅದರೆ ರಿಷಭ್ ಇದಕ್ಕೆ ಸೃಷ್ಟನೆ ನೀಡಿದ್ದಾರೆ

ಏನಂದ್ರು ರಿಷಭ್:

ಇತ್ತೀಚಿನ ಕೆಲ ತಿಂಗಳಿಂದ ರಾಷ್ಟ್ರವ್ಯಾಪಿ ಯಲ್ಲಿ ಸದ್ದು ಮಾಡುತ್ತಿರುವ ನಟ ರಿಷಬ್‌ ಶೆಟ್ಟಿ ಸಹ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂದೇ ಈ ಹಿಂದೆ ಸುದ್ದಿಯಾಗಿತ್ತು. ಅದರೆ ರಿಷಭ್ ಉತ್ತರ ನೀಡಿದ್ದಾರೆ , ಈಗಾಗಲೇ ಕೆಲವರು ನನ್ನನ್ನು ಒಂದು ಪಕ್ಷಕ್ಕೆ ಸೇರಿಸಿದ್ದಾರೆ. ನಾನು ರಾಜಕೀಯಕ್ಕೆ ಎಂದೂ ಹೋಗುವುದಿಲ್ಲ ಎಂದು ಸೃಷ್ಟನೆ ನೀಡಿದ್ದಾರೆ, ಸಿನಿಮಾ ಕ್ಷೇತ್ರ ವೊಂದೇ ನನಗೆ ಸಾಕು ಎಂಬ ಮಾಹಿತಿ ನೀಡಿದ್ದಾರೆ.

ಕಾಂತರ 2 ಚಿತ್ರಕ್ಕೆ ಸಿದ್ದತೆ:

ಕಾಂತಾರ ಸಿನಿಮಾದ ಯಶಸ್ಸಿನ ಬಳಿಕ ರಿಷಬ್​ ಶೆಟ್ಟಿ ಅವರು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸ್ಟಾರ್​ ಆಗಿದ್ದಾರೆ, ಅವರ ಕಾಂತಾರ 2 ಚಿತ್ರಕ್ಕೆ ಶೂಟಿಂಗ್​ ಆರಂಭ ವಾಗಲಿದೆ ಇದರ ಸಿದ್ದತೆ ಭರದಿಂದ ಸಾಗುತ್ತಿದೆ, ಅತೀ ಶೀಘ್ರದಲ್ಲಿಯೇ ಕಾಂತಾರ 2 ಚಿತ್ರದ ಚಿತ್ರೀಕರಣ ಕೂಡ ನಡೆಯಲಿದ್ದು ನಿರ್ದೇಶಕ ರಿಷಬ್ ಶೆಟ್ಟಿ ಚಿತ್ರದ ಕಥೆಯನ್ನು ಆಯ್ಕೆ ಮಾಡುತ್ತಿದ್ದಾರೆ, ಇದರ ಬಗ್ಗೆ ರಿಷಬ್ ಅವರು ಯುಗಾದಿ ಹಬ್ಬದಂದು ಈ ಸುದ್ಧಿಯನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದರು. ಇನ್ನೂ ಕಾಂತರ 2 ಯಾವ ರೀತಿ ಕಮಾಲ್ ಮಾಡುತ್ತೆ ಕಾದು ನೋಡ್ಬೆಕು.

Leave A Reply

Your email address will not be published.