ನಟಿ ಸಾಯಿ ಪಲ್ಲವಿ (Sai Pallavi) ಯವರು ಇಡೀ ದಕ್ಷಿಣ ಭಾರತ (South Indian) ಚಿತ್ರರಂಗದಲ್ಲಿಯೇ ಖ್ಯಾತಿ ಹಾಗೂ ಜನಪ್ರಿಯತೆ ಗಳಿಸಿದ್ದು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹೌದು ತೆಲುಗು ಮತ್ತು ತಮಿಳು (Telugu & Tamil) ಸೇರಿದಂತೆ ಮಲಯಾಳಂ (Malyalam) ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಇನ್ನು ಈ ನಡುವೆ ಸಿನಿಮಾದ ಜೊತೆಗೆ ಸಂದರ್ಶನಗಳಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತಿರುತ್ತಿದ್ದು ಇದೀಗ ಸಂದರ್ಶನವೊಂದರಲ್ಲಿ(Interview) ಮೀಟೂ (MeToo)ಅಭಿಯಾನದ ಬಗ್ಗೆಯೂ ಕೂಡ ನೇರವಾಗಿ ಮಾತನಾಡಿದ್ದಾರೆ. ಸದ್ಯ ಮೀಟೂ ಪ್ರಕರಣ ನಮ್ಮ ರತೀಯ ಚಿತ್ರರಂಗದಲ್ಲಿ ಹೊಸದೇನಲ್ಲ ಬಿಡಿ. ಆಗಾಗ ಕೆಲ ನಟಿಯರುವ ತಮಗಾದ ಅನ್ಯಾಯವನ್ನು ನೇರವಾಗಿ ಹೇಳಿಕೊಂಡಿದ್ದಾರೆ. ಸದ್ಯ ಇದೀಗ ಈ ಮೀಟೂ ಬಗ್ಗೆಯೇ ನಟಿ ಸಾಯಿ ಪಲ್ಲವಿ (Sai Pallavi) ಮಾತನಾಡಿದ್ದಾರೆ.
ಹೌದು ಸೋನಿಲಿವ್(Sony) ಒಟಿಟಿಯಲ್ಲಿ (OTT) ಗಾಯಕಿ ಸ್ಮಿತಾ (Smitha) ನಡೆಸಿಕೊಡುತ್ತಿದ್ದ ನಿಜಂ (Nijam) ಎಂಬ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ನಟಿ ಸಾಯಿ ಪಲ್ಲವಿ ಈ ಕಾರ್ಯಕ್ರಮದಲ್ಲಿ ಮೀಟೂ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಹೌದು ದೈಹಿಕ ಹಿಂಸೆ ಮಾತ್ರವಲ್ಲದೆ ಮಾತಿನ ಹಿಂಸೆಯನ್ನೂ ಲಘುವಾಗಿ ಪರಿಗಣಿಸಬಾರದು ಎಂದಿದ್ದು
ಈ ಟಾಕ್ ಶೋನ (Talk Show) ಸಂಪೂರ್ಣ ಸಂಚಿಕೆ ಶೀಘ್ರದಲ್ಲೇ ಸೋನಿಲಿವ್‌ನಲ್ಲಿ ಸ್ಟ್ರೀಮಿಂಗ್ (streming)ಆಗಲಿದೆ. ಇನ್ನು ಅದರ ಪ್ರಮೋಷನಲ್ ವಿಡಿಯೋದಲ್ಲಿ ಮೀಟೂ ಚಳುವಳಿಯ ಬಗ್ಗೆ ಸಾಯಿ ಹೀಗೆ ಹೇಳಿದ್ದಾರೆ. ದೈಹಿಕ ಚಿತ್ರಹಿಂಸೆ ಮಾತ್ರವಲ್ಲ. ಮಾತಿನ ಚಿತ್ರಹಿಂಸೆಯೂ ಈ ವರ್ಗಕ್ಕೆ ಸೇರುತ್ತದೆ ಎಂದು ಸಾಯಿ ಪಲ್ಲವಿ ಹೇಳಿದ್ದು ಇದೇ ಶೋದಲ್ಲಿ ಸಾಯಿ ಪಲ್ಲವಿ ವೈದ್ಯಕೀಯ ವಿದ್ಯಾರ್ಥಿನಿಯಿಂದ ನಟಿಯಾಗುವವರೆಗಿನ ತಮ್ಮ ಪಯಣದ ಬಗ್ಗೆಯೂ ಕೂಡ ಮಾತನಾಡಿದ್ದಾರೆ.
ಇನ್ನು ಹಾಲಿವುಡ್ ನಲ್ಲಿ ನಿರ್ಮಾಪಕರೊಬ್ಬರು ದೈಹಿಕವಾಗಿ ಕಿರುಕುಳ ನೀಡಿದ ಆರೋಪವನ್ನು ಮುಕ್ತವಾಗಿ ಎಲ್ಲರ ಎದುರಿಗೆ ಕೆಲ ನಟಿಯರು ಹೇಳಿದ ನಂತರ ಭಾರತ ಸೇರಿದಂತೆ ಅನೇಕ ಕಡೆ ಮಿಟೂ ಪ್ರಕರಣದ ಬಗ್ಗೆ ಧ್ವನಿ ಹೊರಬಂದಿತ್ತು. ಹಿಂದಿಯ ನಿರ್ಮಾಪಕ ಸಾಜಿದ್ ರವರ ಮೇಲೆ ಅನೇಕ ನಟಿಯರು ಮಿಟೂ ಆರೋಪವನ್ನು ಮಾಡಿದ್ದು ಇದಲ್ಲದೇ ಕನ್ನಡದಲ್ಲೂ ಕೂಡ ಸಂಗೀತ ಭಟ್ ಶ್ರುತಿ ಹರಿಹರನ್ ಸಂಜನಾ ಗೆಲ್ರಾನಿ ಸೇರಿದಂತೆ ಹಲವು ನಟಿಯರು ಮಿಟೂ ಬಗ್ಗೆ ಮಾತನಾಡಿದ್ದರು.
ಹೀಗೆ 2018 ರಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿ ಬಂದ ಮಿಟೂ ಚಳುವಳಿ ಬಗ್ಗೆ ಇದೀಗ ನಟಿ ಸಾಯಿ ಪಲ್ಲವಿ ಮಾತನಾಡಿದ್ದಾರೆ.