S. S. Rajamouli: ರಾಜಮೌಳಿಯ ಮತ್ತೊಂದು ಮುಖ ಬಹಿರಂಗ, ಆಸ್ಕರ್ ಅಸಲಿ ಸತ್ಯ ಇಲ್ಲಿದೆ

Advertisement
ಸದ್ಯ ಆಸ್ಕರ್ ಪ್ರಶಸ್ತಿಗೆ(Oscar Award) ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಸದ್ಯ ಈ ಬೆನ್ನಲ್ಲೇ ಆರ್ ಆರ್ ಆರ್ (RRR) ತಂಡ ಅಮೆರಿಕಗೆ (America) ಹಾರಿದೆ. ಇನ್ನು ಕಳೆದ ಕೆಲವು ತಿಂಗಳಿಂದ ರಾಜಮೌಳಿ (S. S. Rajamouli) ಜೂ.ಎನ್‌ಟಿಆರ್ (J. NTR) ಹಾಗೂ ರಾಮ್ ಚರಣ್ ತೇಜಾ (Ram charan Teja) ಸೇರಿ ಇಡೀ ತಂಡ ಸಿನಿಮಾ ಬಗ್ಗೆ ಪ್ರಚಾರವನ್ನು ಮಾಡುತ್ತಿದೆ. ಹೌದು ಮಾರ್ಚ್ 12ರಂದು ನಡೆಯಲಿರೋ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ RRR’ ಚಿತ್ರದ ನಾಟು.. ನಾಟು (Naatu Naatu) ಸಾಂಗ್ ಪ್ರಶಸ್ತಿ ಗೆಲ್ಲುತ್ತಾ? ಅನ್ನೋ ಕುತೂಹಲ ಮೂಡಿದೆ. RRR ತಂಡ ಮಾತ್ರ ಆಸ್ಕರ್ ಪ್ರಶಸ್ತಿ ಗೆಲ್ಲಲು ಮಾಡಬೇಕಿರೋ ಎಲ್ಲಾ ಕಸರತ್ತುಗಳನ್ನು ಮಾಡುತ್ತಿದೆ. ಇನ್ನು ಇತ್ತೀಚೆಗೆ RRR ಸಿನಿಮಾವನ್ನು ಅಮೆರಿಕದ ಹಲವು ಭಾಗಗಳಲ್ಲಿ ಮರು ಬಿಡುಗಡೆಯನ್ನು ಮಾಡಲಾಗಿತ್ತು. ಇದೇ ಸಂಬಂಧ ತೆಲುಗು ಹಿರಿಯ ನಿರ್ದೇಶಕರೊಬ್ಬರು ರಾಜಮೌಳಿ ಹಾಗೂ ತಂಡದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಆಸ್ಕರ್ (Oscar) ಪ್ರಚಾರಕ್ಕೆ ಅಂತಲೇ ಮಾಡಿರುವ ಹಣದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
Advertisement
ಇನ್ನು ಎಸ್.ಎಸ್. ರಾಜಮೌಳಿ ನಿರ್ದೇಶಿಸಿದ್ದ ಆರ್ ಆರ್ ಆರ್ ವಿಶ್ವದ ಮೂಲೆ ಮೂಲೆಯಲ್ಲಿ ಸದ್ದು ಮಾಡಿತ್ತು. ಈಗ ಓರಿಜಿನಲ್ ಸಾಂಗ್ ಕ್ಯಾಟಗರಿಯಲ್ಲಿ ಈ ಸಿನಿಮಾದ ನಾಟು ನಾಟು ಸಾಂಗ್ ಪೈಪೋಟಿ ಮಾಡುತ್ತಿದೆ. ಮಾರ್ಚ್ 12ರಂದು ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಈ ಹಾಡು ಪ್ರಶಸ್ತಿ ಗೆದ್ದಿದೆಯಾ ಇಲ್ವಾ? ಅನ್ನೋ ರಿವೀಲ್ ಆಗಲಿದೆ. ಇನ್ನು ಈ ಬೆನ್ನಲ್ಲೇ ತೆಲುಗಿನ ಹಿರಿಯ ನಿರ್ದೇಶಕ ತಮ್ಮಾರೆಡ್ಡಿ ಭಾರತದ್ವಾಜ್ ಚಿತ್ರತಂಡದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಟಾಲಿವುಡ್‌ನ ಹಿರಿಯ ನಿರ್ದೇಶಕ RRR ಸಿನಿಮಾ ಬಗ್ಗೆ ಆಡಿದ ಮಾತುಗಳು ಯೂಟ್ಯೂಬ್‌ನಲ್ಲಿ ವೈರಲ್ ಆಗುತ್ತಿದ್ದು ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಇನ್ನು ಮೂರು ದಿನ ಬಾಕಿ ಇರುವಾಗಲೇ ಪ್ರಚಾರಕ್ಕೆ 80 ಕೋಟಿ ರೂ. ಹಣ ವಿನಿಯೋಗಿಸಿದ್ದಾರೆಂದು ಆರೋಪ ಮಾಡಿದ್ದಾರೆ. ಇದೇ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.
ಆಸ್ಕರ್ ಪ್ರಚಾರಕ್ಕೆ 80 ಕೋಟಿ ರೂ. ಖರ್ಚು ಮಾಡಿದ್ದು ಅಷ್ಟು ನಮಗೆ ಕೊಟ್ಟರೆ, 8 ಸಿನಿಮಾ ಮಾಡಿ ಅವರ ಮುಖದ ಮೇಲೆ ಎಸೆಯುತ್ತಿದ್ದೆವು. ಬರೀ ವಿಮಾನದ ಟಿಕೆಟ್‌ಗಳಿಗೆ ಕೋಟಿ ಕೋಟಿ ಖರ್ಚು ಮಾಡುತ್ತಿದ್ದಾರೆ. ಅದೆಲ್ಲ ಈಗ ಚರ್ಚೆ ಮಾಡೋ ಅವಶ್ಯಕತೆ ಇಲ್ಲ ಎಂದು ತೆಲುಗು ಹಿರಿಯ ನಿರ್ದೇಶಕ ತಮ್ಮಾರೆಡ್ಡಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಇನ್ನು ಆಸ್ಕರ್ ಗೆಲ್ಲಲು 80 ಕೋಟಿಯನ್ನ ಮೌಳಿ ಖರ್ಚು ಮಾಡಿದ್ರು ಅನ್ನೋದು ಈಗ ದೊಡ್ಡ ವಿಷಯ. ಹಾಗಾದ್ರೆ ಆಸ್ಕರ್ ಗೆದ್ರೆ ಎಷ್ಟು ದುಡ್ಡು ಸಿಗುತ್ತದೆ. ಆಸ್ಕರ್ ಪ್ರಶಸ್ತಿ ಮೌಲ್ಯ ಎಷ್ಟು ಅನ್ನೋ ಪ್ರಶ್ನೆಯೂ ಹುಟ್ಟುತ್ತದೆ. ಆಸ್ಕರ್ ಗೆದ್ದವರಿಗೆ ಪ್ರಶಸ್ತಿ ಬಿಟ್ರೆ ಮತ್ತಿನ್ನೇನು ಸಿಗಲ್ಲ. 13.5 ಇಂಚು ಎತ್ತರದ ಬಂಗಾರದ ಬಣ್ಣದ ಮೂರ್ತಿಯನ್ನ ಆಸ್ಕರ್ ಪ್ರಶಸ್ತಿಯಾಗಿ ಕೊಡ್ತಾರೆ. ಹೌದು ಅಮೇರಿಕಾದಲ್ಲಿ ಸಿದ್ಧವಾಗೋ ಈ ಪ್ರಶಸ್ತಿಗೆ ಬರೀ ಒಂದು ಡಾಲರ್ (Doller) ಅಂದ್ರೆ ಭಾರತೀಯ ಮೌಲ್ಯದಲ್ಲಿ 82 ರೂಪಾಯಿ ಮಾತ್ರ. ಆದ್ರೆ ಈ ಪ್ರಶಸ್ತಿಗೆ ವಿಶ್ವ ಮಟ್ಟದಲ್ಲಿ ಮನ್ನಣೆ ಇದೆ.
Advertisement