Appu-Shivanna: ಅಪ್ಪು ಮಾಡಬೇಕಿದ್ದ ಈ ಸಿನಿಮಾದಲ್ಲಿ ಶಿವಣ್ಣ ಸೂಪರ್ ಹಿಟ್ ಆದ ಸ್ಟೋರಿ ಇಲ್ಲಿದೆ.

Advertisement
ನಮ್ಮ ಕನ್ನಡ ಚಿತ್ರರಂಗದ (KFI) ಮೇರುನಟ ಡಾ ರಾಜ್‌ಕುಮಾರ್ (Rajkumar) ಅವರ ಕುಟುಂಬ ಈ ಹಿಂದಿನಿಂದಲೂ ಸಹ ಚಿತ್ರರಂಗಕ್ಕೆ (Film Industry) ಸಕಲಕಲೆ ಬಲ್ಲಂತಹ ನಟರನ್ನು ನೀಡುತ್ತಾ ಬಂದಿದ್ದು ರಾಜ್ ಕುಟುಂಬದ ಕುಡಿಗಳು ಫ್ಯಾಮಿಲಿ ಬ್ಯಾಕ್‌ಗ್ರೌಂಡ್‌ನಿಂದ (Family Background) ಚಿತ್ರರಂಗ ಪ್ರವೇಶಿಸಿದರೂ ಸಹ ತಮ್ಮದೇ ಆದ ಸ್ವಂತ ಕಲೆಯಿಂದ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆನಿಂತರು ಹಾಗೂ ಸ್ಟಾರ್ ನಟರಾದರು. ನಟ ಶಿವ ರಾಜ್‌ಕುಮಾರ್ (Shivarajkumar) ಹಾಗೂ ಪುನೀತ್ ರಾಜ್‌ಕುಮಾರ್ (Puneeth Rajkumar) ಚಿತ್ರರಂಗವನ್ನು ಸಾಲು ಸಾಲು ಹಿಟ್ ಚಿತ್ರಗಳ ಮೂಲಕವಾಗಿ ಆಳಿದ ಬಳಿಕ ಮುಂದೆ ರಾಜ್ ಕುಟುಂಬದ ಯಾವ ನಟ ಚಿತ್ರರಂಗದಲ್ಲಿ ದೊಡ್ಡ ನಟನಾಗಿ ರಾಜ್ ಕುಟುಂಬದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬಹುದು ಎಂಬ ಪ್ರಶ್ನೆ ಇದೆ ಹಾಗೂ ಈ ಕುರಿತಾಗಿ ಚರ್ಚೆಗಳೂ ಕೂಡ ನಡೆಯುತ್ತಾ ಇರುತ್ತವೆ.
Advertisement
ಅದರಲ್ಲೂ ಸಹ ಚಿತ್ರರಂಗದ ಅತಿ ಯಶಸ್ವಿ ನಟ ಪುನೀತ್ ರಾಜ್‌ಕುಮಾರ್ ಅಕಾಲಿಕ ಅಗಲಿಕೆಯ ನಂತರ ರಾಘವೇಂದ್ರ ರಾಜ್‌ಕುಮಾರ್ (Ragavendra Rajkumar) ಮಗ ಅಪ್ಪು ಸ್ಥಾನವನ್ನು ತುಂಬಬಲ್ಲ ನಟ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೌದು ಅಪ್ಪು ರೀತಿಯೇ ಹೆಜ್ಜೆ ಹಾಕುವ ಸ್ಟಂಟ್ ಮಾಡುವ ಕಲೆಯನ್ನು ಈಗಾಗಲೇ ಕರಗತ ಮಾಡಿಕೊಂಡಿರುವ ಯುವ ರಾಜ್‌ಕುಮಾರ್ (Yuva Rajkumar) ಮೇಲೆ ರಾಜ್‌ವಂಶದ ಅಭಿಮಾನಿಗಳಿಗೆ ಅಪಾರವಾದ ನಂಬಿಕೆ ಇದ್ದೆ. ಸದ್ಯ ಈ ಬೆನ್ನಲ್ಲೆ ಇಂಟ್ರೆಸ್ಟಿಂಗ್ ವಿಚಾರ ಹೊರ ಬಂದಿದ್ದು ಶಿವರಾಜಕುಮಾರ್ ಮಾಡಬೇಕಿದ್ದಂತಹ ಆ ಒಂದು ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಅಭಿನಯಿಸಿ ಬಹುದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಾರೆ. ಹೌದು ಅಷ್ಟಕ್ಕೂ ಆ ಸಿನಿಮಾ ಯಾವುದು? ಅದನ್ನು ಶಿವಣ್ಣ ರವರು ಬಿಟ್ಟುಕೊಟ್ಟಿದ್ದಾದರು ಯಾಕೆ? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಲೇಖನಿಯನ್ನು ಸಂಪೂರ್ಣವಾಗಿ ಓದಿ.
ನಟ ಶಿವರಾಜ್ ಕುಮಾರ್ ಆಗಷ್ಟೇ ಬಣ್ಣದ ಬದುಕಿಗೆ ಎಂಟ್ರಿಕೊಟ್ಟು ಒಂದು ಮಟ್ಟದಲ್ಲಿ ಯಶಸ್ಸು ಕಂಡಿದ್ದರು . ಇದಾದ ನಂತರ ಶಿವರಾಜ್ ಕುಮಾರ್ ಅವರಿಗೆ ಮೂರು ನಿರ್ದೇಶಕರಿಂದ ಒಳ್ಳೊಳ್ಳೆ ಆಫರ್ ಗಳು ಬಂದಿದ್ದವು. ಇನ್ನು ಮೂರು ಸಿನಿಮಾಗಳ ಕಥೆಯನ್ನು ಕೇಳಿದಂತಹ ಶಿವಣ್ಣ ಅವರಿಗೆ ಅಪ್ಪು (Appu) ಸಿನಿಮಾದ ನಾಯಕನಾಗುವಂತಹ ಅವಕಾಶ ಬಂದಿರುತ್ತದೆ. ಹೌದು ಆದರೆ ಈ ಸಿನಿಮಾದಲ್ಲಿ ನನಗಿಂತ ನನ್ನ ತಮ್ಮ ಅಭಿನಯಿಸಿದರೆ ಬಹಳ ಚೆನ್ನಾಗಿರುತ್ತದೆ ಎಂದು ಶಿವಣ್ಣನಿಗೆ ಅನ್ನಿಸಿದೊಡನೆ ತಮ್ಮ ತಂದೆ ತಾಯಿ ಹಾಗೂ ವರದಪ್ಪನವರೊಂದಿಗೆ ಕುಳಿತು ಮಾತನಾಡಿ ಮತ್ತು ಚರ್ಚಿಸಿ ಆನಂತರ ಅಪ್ಪು ಸಿನಿಮಾ ಪುನೀತ್ ರಾಜಕುಮಾರ್ ಅವರೇ ಮಾಡುತ್ತಾರೆ ಎಂಬ ಮಾಹಿತಿಯನ್ನು ಹೊರಡಿಸುತ್ತಾರೆ.ಈ ರೀತಿಯಾಗಿ ಪುನೀತ್ ರಾಜಕುಮಾರ್ ಅಪ್ಪು ಸಿನಿಮಾದ ಮೂಲಕ ಎಲ್ಲರ ಪ್ರೀತಿಯ ಅಪ್ಪುವಾಗಿ ಹೊರಹೊಮ್ಮಿದರು. ನಿಮ್ಮ ಪ್ರಕಾರ ಈ ಸಿನಿಮಾದಲ್ಲಿ ಶಿವಣ್ಣ ಅಭಿನಯಿಸಿದರೆ ಹೇಗಿರುತ್ತಿತ್ತು? ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.
Advertisement