Oscars 2023 Winner: ಆಸ್ಕರ್ ಅವಾರ್ಡ್ ಇತಿಹಾಸವನ್ನು ಸೃಷ್ಟಿಸಿದ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿ ‘ನಾಟು-ನಾಟು’ ಮುಡಿಗೆ!

Advertisement
ಭಾರತೀಯ ಚಿತ್ರರಂಗ ಹೆಮ್ಮೆ ಪಡುವಂತ ಸುದ್ದಿ ಒಂದಾಲ್ಲಾ ಒಂದು ನಮ್ಮ ಕಿವಿಗೆ ಬೀಳುತ್ತಿದೆ. ಈಗಾಗಲೇ ತಮಿಳು, ತೆಲುಗು, ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಸೌಂಡ್ ಮಾಡಿವೆ. ಇದೀಗ ಆಸ್ಕರ್ ಪ್ರಶಸ್ತಿ ಕೂಡ ಇಂಡಿಯನ್ ಸಿನಿಮಾಕ್ಕೆ ದೊರೆಯುತ್ತಿದ್ದು, ಚಿತ್ರರಂಗದಲ್ಲಿ ಹೊಸ ಭಾಷ್ಯ ಬರೆದಿವೆ. ಇಂಡಿಯಾ ಸಿನಿಮಾ ಆಗಿರುವ ಆರ್ ಆರ್ ಆರ್ ಸಿನಿಮಾದ ಹಾಡು ಬೆಸ್ಟ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಮೂಡಿಗೆರೆಸಿಕೊಂಡಿದ್ದು ಸಿನಿಮಾರಂಗದಲ್ಲಿ ಇತಿಹಾಸ ಸೃಷ್ಟಿಸಿದೆ. ಎಸ್ ಎಸ್ ರಾಜಮೌಳಿ ನಿರ್ದೇಶನದ, ಎಂ ಎಂ ಕಿರುವಾಣಿ ಸಂಗೀತ ಇರುವ ಹಾಡು ಇದಾಗಿದೆ. ಈ ಹಾಡಿಗೆ ನಟ ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ಜಬರ್ದಸ್ತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ನಾಟು ನಾಟು ಹಾಡು ಈ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಹಾಗೂ ಪ್ರಶಸ್ತಿ ಗೆದ್ದುಕೊಂಡ ಭಾರತದ ಮೊದಲ ಹಾಡು ಎನ್ನುವ ಖ್ಯಾತಿ ಗಳಿಸಿದೆ. ಈ ಹಾಡಿನಲ್ಲಿ ರಾಹುಲ್ ಸಿಂಪ್ಲಿಗಂಜ್ ಅವರ ಧ್ವನಿ ಮೋಡಿ ಮಾಡಿತ್ತು.
Advertisement
ಈ ಹಾಡು ಸ್ವಾತಂತ್ರ್ಯದ ಸಮಯದ ಚಿತ್ರೀಕರಣವನ್ನು ಕಣ್ಣು ಮುಂದೆ ತರುತ್ತದೆ ಒಂದು ದುರ್ಬಲ ಸಮುದಾಯ ನೃತ್ಯ ಮಾಡಿ ವಿದೇಶಿ ಶಕ್ತಿಯನ್ನು ಸೋಲಿಸುವಂತಹ ಹಾಡು ಇದು. ವಿದೇಶಿಯರು ತಾವೇ ಎಲ್ಲರಿಗಿಂತಲೂ ಹೆಚ್ಚು ಎಂದು ಭಾವಿಸುತ್ತಾರೆ ಈ ಹಿನ್ನೆಲೆಯಲ್ಲಿ ತಾವು ನೃತ್ಯದಲ್ಲಿ ಯಾರ ಮುಂದೆಯೂ ತಲೆಬಾಗುವುದಿಲ್ಲ ಎಂದು ಭಾವಿಸಿದ್ದವರಿಗೆ ಈ ಹಾಡಿನಲ್ಲಿ ನೃತ್ಯ ಮಾಡುವುದರ ಮೂಲಕ ಅವರಿಗೆ ಸೋಲಿನ ರುಚಿ ತೋರಿಸಲಾಗುತ್ತದೆ. ನಾಟು ನಾಟು ಹಾಡಿನ ಜೊತೆಗೆ ‘ಟೆಲ್ ಇಟ್ ಲೈಕ್ ಎ ವುಮನ್’ ಚಿತ್ರದ ‘ಚಪ್ಪಾಳೆ’ ಹಾಡು, ಟಾಪ್ ಗನ್ ಚಿತ್ರದ ಹೋಲ್ಡ್ ಮೈ ಹ್ಯಾಂಡ್ ಎನ್ನುವ ಸಂಗೀತ, ಲಿಫ್ಟ್ ಮಿ ಅಪ್ ಎನ್ನುವ ಬ್ಲ್ಯಾಕ್ ಪ್ಯಾಂಥರ್ ಚಿತ್ರದ ಹಾಡು ವಕಾಂಡ ಫಾರೆವರ್ ಅಂಡ್ ಎವೆರಿಥಿಂಗ್, ಎವೆರಿವೇರ್ ಆಲ್ ಅಟ್ ಒನ್ಸ್ ಆಫ್ ದಿಸ್ ಈಸ್ ಲೈಫ್ ಎಂಬ ಹಾಡುಗಳು ನಾಮನಿರ್ದೇಶನ ಗೊಂಡಿದ್ದವು.
ಅಂದ ಹಾಗೆ ಈ ಬಾರಿ ಆಸ್ಕರ್ ಪ್ರಶಸ್ತಿಗೆ ನಾಟು ನಾಟು ಹಾಡು ಮಾತ್ರವಲ್ಲ ಇನ್ನು ಎರಡು ಭಾರತೀಯ ಚಲನಚಿತ್ರಗಳು ಬೇರೆ ಬೇರೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿವೆ. ಅವುಗಳೆಂದರೆ ಶೌನಕ್ ಸೇನ್ ಅವರ ‘ಆಲ್ ದಟ್ ಬ್ರೀತ್ಸ್’ ಹಾಗೂ ಕಾರ್ತಿಕಿ ಗೊನ್ಸಾಲ್ವಿಸ್ ಅವರ ‘ದಿ ಎಲಿಫೆಂಟ್ ವಿಸ್ಪರ್ಸ್’. ದಿ ಎಲಿಫೆಂಟ್ ವಿಸ್ಪರ್ಸ್’ ಒಂದು ಕಿರು ಸಾಕ್ಷ್ಯಚಿತ್ರವಾಗಿದ್ದು. ಈ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
Advertisement