Kabzaa Movie: ಕಬ್ಜದಲ್ಲಿ ಸುದೀಪ್ ಮತ್ತು ಶಿವಣ್ಣ ರೊಲ್ ಏನು? ರಿವೀಲ್ ಮಾಡೇ ಬಿಟ್ರು ಉಪ್ಪಿ

Advertisement
ಕಬ್ಜ ಸಿನಿಮಾ ಈಗಾಗಲೇ ಸಖತ್ ಸುದ್ದಿ ಯಲ್ಲಿದೆ, ಚಿತ್ರದ ರಿಲೀಸ್ ಗೆ ಸಿನಿಪ್ರೀಯರು ಮೋಸ್ಟ್ ಥ್ರಿಲ್ ಆಗಿದ್ದಾರೆ, 2022ರಲ್ಲಿ ಕನ್ನಡದ ಅನೇಕ ಸಿನಿಮಾಗಳು ದೊಡ್ಡಮಟ್ಟದಲ್ಲಿ ಸದ್ದು ಮಾಡಿವೆ, ಅದರಲ್ಲೂ ಕಬ್ಜದ ಬಗ್ಗೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ, ಚಿತ್ರದಲ್ಲಿ ಉಪೇಂದ್ರ (Upendra) ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ, ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೇನು ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ, ಮುಕುಂದ ಮುರಾರಿ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು
ಉಪ್ಪಿ ಕಿಚ್ಚ ಜೊತೆ ಶಿವಣ್ಣ ನಟನೆ
ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಅಭಿನಯದ ಕಬ್ಜ ಸಿನಿಮಾ ಅಲೆ ಸದ್ಯ ಜೋರಾಗಿದೆ , ಬರೀ ಬೆಂಗಳೂರಿನಲ್ಲಷ್ಟೇ ಅಲ್ಲ, ದೂರದ ಮುಂಬೈನಲ್ಲೂ(Mumbai) ಆರ್ಭಟ ಜೋರಾಗಿದೆ, ಕಬ್ಜದಲ್ಲಿ ನಟ ಶಿವರಾಜ್ ಕುಮಾರ್(Shiva Raj Kumar) ಕೂಡ ನಟಿಸಲಿದ್ದಾರೆ, ಸದ್ಯ ಹರಿದಾಡುತ್ತಿರುವ ಮಾಹಿತಿಯಂತೆಯೇ, ಕಬ್ಜದಲ್ಲಿ ಶಿವಣ್ಣ ದೋಸ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಗಾಂಧಿ ನಗರದಲ್ಲಿ ಹರಿದಾಡುತ್ತಿವೆ. ಆದರೆ ಇದು ಹೌದು ಎಂದು ಕನ್ಫರ್ಮ್ ಮಾಡಲು ಸಿನಿಮಾ ಬಿಡುಗಡೆಯವರೆಗೆ ಕಾಯಲೇಬೇಕಿದೆ
ಕಿಚ್ಚ ಸುದೀಪ್ ಪಾತ್ರ ರಿವೀಲ್
Advertisement
ರಿಯಲ್ ಸ್ಟಾರ್ ಉಪೇಂದ್ರ, ಅಭಿನಯ ಚಕ್ರವರ್ತಿ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರ ಟ್ರೈಲರ್(Trailer) ಮೂಲಕ ಬೇರೆ ಲೆವಲ್‌ನ ಸಿನಿಮಾ ಅನಿಸುತ್ತಿದೆ, ಕಬ್ಜ ಸಿನಿಮಾದಲ್ಲಿ ಕಿಚ್ಚ ಸುದೀಪ್ ರೋಲ್ ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಆಗಿದೆ. ಕಿಚ್ಚ ಈ ಸಿನಿಮಾದಲ್ಲಿ ಪಾಸಿಟಿವ್ ಅಥವಾ ನೆಗೆಟಿವ್ ಯಾವ ಪಾತ್ರ ಮಾಡಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಕಬ್ಜ ಸಿನಿಮಾದಲ್ಲಿ ಯಾವ ಶೇಡ್ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಕಬ್ಜ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಹೀರೋ, ಸುದೀಪ್ ಅವ್ರದ್ದು ಗೆಸ್ಟ್ ರೋಲ್ ಸುದೀಪ್ ಅವ್ರು ಹದಿನೈದು ನಿಮಿಷ ಸ್ಕ್ರೀನ್ ಮೇಲೆ ಇರ್ತಾರೆ ಅಂತ ಹೇಳಲಾಗ್ತಿದೆ.
ಕಬ್ಜ 2 ಪಾರ್ಟ್ ನಲ್ಲಿ ಸುದೀಪ್ ಶಿವರಾಜ್ ಇರ್ತರಾ?
ಪ್ರಚಾರದ ಸಲುವಾಗಿ ಕಬ್ಜ ಚಿತ್ರತಂಡ ಮುಂಬೈಗೆ ತೆರಳಿತ್ತು. ಮುಂಬೈನಲ್ಲಿ ಕಬ್ ಸಿನಿಮಾದ ಪ್ರೀ-ರಿಲೀಸ್ ಈವೆಂಟ್(Pre Release Event) ನಡೆಯಿತು. ಈ ಬಗ್ಗೆ ಮಾತನಾಡಿದ ಉಪೇಂದ್ರ, ಮುಂಬೈನಲ್ಲಿ ಚಿತ್ರದ ಪ್ರಚಾರ ಮಾಡುತ್ತಿರುವುದಕ್ಕೆ ಖುಷಿ ಇದೆ. ಅಭಿಮಾನಿಗಳ ಈ ಪ್ರೀತಿ ನೋಡಿ ನನ್ನ ಕಣ್ತುಂಬಿ ಬಂದಿದೆ. ಚಿತ್ರವನ್ನು ಎಲ್ಲರೂ ನೋಡಿ ಹರಸಿ, ಹಾರೈಸಿ ಎಂದರು.
ಇನ್ನು ಶಿವರಾಜ್ ಕುಮಾರ್ ಪಾತ್ರದ ಬಗ್ಗೆ ಕೇಳಿದಕ್ಕೆ ಕಬ್ಜ ಪಾರ್ಟ್ 2 ರಲ್ಲಿ ಶಿವರಾಜ್ ಸುದೀಪ್ ಮುನ್ನಡಿಸಿಕೊಂಡು ಹೋಗುತ್ತಾರೆ ಎಂದು ರಿವೀಲ್ ಮಾಡಿದ್ದಾರೆ, ಈ ಬಗ್ಗೆ ಅಭಿಮಾನಿಗಳಲ್ಲಿ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ. ಮಾರ್ಚ್ 17ಕ್ಕೆ ಕಬ್ಜ ಸಿನಿಮಾ ಬಹುಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಸಿನಿಮಾ ಭರ್ಜರಿ ಪ್ರಚಾರ ಕೂಡ ನಡೆಯುತ್ತಿದೆ.
Advertisement