ಮಾರ್ಚ್ 17ರಂದು ಕಬ್ಜ ಸಿನಿಮಾ (Kabzaa Movie) ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಸಿನಿಮಾಗಾಗಿ ವಿಶ್ವಾದ್ಯಂತ ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ, ಬೆಂಗಳೂರಿನಲ್ಲಿ ಕಬ್ಜ ಪ್ರೀ-ರಿಲೀಸ್ ಇವೆಂಟ್ (Kabzaa Movie Pre-release Event) ನಡೆದಿದೆ. ಚಂದನವನದ ಅನೇಕ ಸ್ಟಾರ್ ಕಲಾವಿದರು ಇದರಲ್ಲಿ ಭಾಗಿ ಆಗಿದ್ದಾರೆ.
ಕಬ್ಜ ಮಲ್ಟಿಸ್ಟಾರರ್ ಸಿನಿಮಾ. ಉಪೇಂದ್ರ (Upendra) ಶಿವರಾಜ್ (Shivaraj) ಸುದೀಪ್ (Sudeep) ಚಿತ್ರದಲ್ಲಿ ನಟಿಸಿದ್ದಾರೆ. ಇವರ ಪಾತ್ರಗಳ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲ ಮೂಡಿದೆ. ಚಿತ್ರದ ಟ್ರೇಲರ್ ರಿಲೀಸ್ ಈಗಾಗಲೇ ಸದ್ದು ಮಾಡಿದೆ, ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಅದ್ದೂರಿಯಾಗಿ ಸಿನಿಮಾ ತೆರೆಗೆ ಬರಲು ಪ್ಲ್ಯಾನ್ ನಡೆದಿದೆ.
ಸುದೀಪ್ ರೋಲ್ ಕಬ್ಜ ಪಾರ್ಟ್ 2ಲ್ಲಿ ಮೈನ್ ರೋಲ್
ನಟ ಕಿಚ್ಚ ಸುದೀಪ್ ಅವರು ಸ್ಯಾಂಡಲ್‌ವುಡ್‌ನ(Sandalwood) ಬಹುಬೇಡಿಕೆಯ ನಟರಲ್ಲಿ ಒಬ್ಬರು. ಅವರಿಗೆ ಕನ್ನಡದಲ್ಲಿ ಮಾತ್ರವಲ್ಲ, ಹಿಂದಿ, ತೆಲುಗು, ತಮಿಳಿನಲ್ಲೂ ಬೇಡಿಕೆ ಇದೆ. ಆಗಾಗ ಕೆಲ ಸಿನಿಮಾಗಳಲ್ಲಿ ಅವರು ಅತಿಥಿ ಪಾತ್ರ, ವಿಶೇಷ ಪಾತ್ರಗಳನ್ನು ಮಾಡಿ ಸದ್ದು ಮಾಡುತ್ತಾ ಇರುತ್ತಾರೆ, ಕಬ್ಜದಲ್ಲಿ ಉಪೇಂದ್ರ ಸ್ವಾತಂತ್ರ್ಯ ಹೋರಾಟಗಾರ ಮತ್ತು ಭೂಗತ ಲೋಕದ ಡಾನ್ , ಪೊಲೀಸ್ ಡ್ರೆಸ್ಸಿನಲ್ಲೂ ಕಾಣಿಸ್ತಾರೆ. ಕಿಚ್ಚ ಸುದೀಪ್ ಅವರದ್ದು ಪೊಲೀಸ್ ಆಫೀಸರ್ ಪಾತ್ರ. ಪಾರ್ಟ್ 2 ರಲ್ಲಿ ಸುದೀಪ್ ಮೈನ್ ರೋಲ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸುದೀಪ್ ಏನಂದ್ರು
ಉಪೇಂದ್ರ ಕುರಿತಾಗಿ ಮಾತನಾಡಿದ ಕಿಚ್ಚ , ಉಪ್ಪಿ ಬಹಳ ಚೆನ್ನಾಗಿ ಆ್ಯಕ್ಟ್ ಮಾಡಿದ್ದಾರೆ, ಟೀಮ್ ವರ್ಕ್ ಬಹಳ ಚೆನ್ನಾಗಿದ್ದು , ನಿರ್ದೇಶಕರಿಗೆ ಥ್ಯಾಂಕ್ಸ್ ಹೇಳಲೇಬೇಕು ಅಂದಿದ್ದಾರೆ . ದಿನ ಕಳೆದಂತೆ ಒಂದೊಂದೇ ಅಪ್‌ಡೇಟ್ ಮೂಲಕ ಕಬ್ಜ ಭಾರಿ ಹವಾ ಕ್ರಿಯೇಟ್ ಮಾಡಿದೆ. ಈ ರೀತಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡೋದದ್ದು ಪಕ್ಕಾ ,ಉಪೇಂದ್ರ ಜೊತೆಗೆ ಶಿವಣ್ಣ, ಸುದೀಪ್ ಹೆಸರು ಯಾವಾಗ ಕೇಳಿಬಂತೋ, ಆಗ ಫ್ಯಾನ್ಸ್ ಥ್ರಿಲ್ ಆದರು. ಇವರ ಜೊತೆಗೆ ಇನ್ನೂ ಅನೇಕ ಕಲಾವಿದರು ಇದ್ದಾರೆ, ಬಹುಭಾಷಾ ನಟಿ ಶ್ರೀಯಾ ಶರಣ್(Shriya Sharan) ಅವರು ಕೂಡ ಇದ್ದಾರೆ.ಕಬ್ಜ ಯಾವ ರೀತಿ ಕಮಾಲ್ ಮಾಡುತ್ತೆ ಅನ್ನೋದನ್ನು ಕಾದು ನೋಡ್ಬೆಕು.