ಆರ್. ಚಂದ್ರು (R. Chandru) ನಿರ್ದೇಶನದ ಕಬ್ಜ. ಸಿನಿಮಾ ಹಲವು ಕಾರಣಗಳಿಂದಾಗಿ ನಿರೀಕ್ಷೆ ಮೂಡಿಸಿದೆ, ದಿನದಿಂದ ದಿನಕ್ಕೆ ಈ ಸಿನಿಮಾದ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ. ಕಬ್ಜ (Kabzaa)ಪ್ಯಾನ್ ಇಂಡಿಯಾ ಸಿನಿಮಾ(Pan India Movie), ಕನ್ನಡದ ಜೊತೆಗೆ ತೆಲುಗು, ಮಲಯಾಳಂ, ತಮಿಳು, ಹಿಂದಿ ಮುಂತಾದ ಭಾಷೆಗಳಲ್ಲಿ ಕೂಡ ಈ ಸಿನಿಮಾ ಬಿಡುಗಡೆ ಆಗಲಿದೆ. ಉಪೇಂದ್ರ. (Upendra) ಮತ್ತು ಕಿಚ್ಚ (Kiccha) ಶಿವರಾಜ್ ಕುಮಾರ್ (Shiva Raj Kumar) ಈಗಾಗಲೇ ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಮಾರ್ಚ್ 17 ರಂದು ಚಿತ್ರ ತೆರೆಗೆ ಬರಲು ರೆಡಿಯಾಗಿದೆ.
ಉಪೇಂದ್ರ UI ಚಿತ್ರದ ಬಗ್ಗೆ ಬಿಗ್ ಆಪ್ಡೆಟ್
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾಗಳೆಂದರೆ ಜನರಿಗೆ ಕ್ಯುರಾಸಿಟಿ ಆಸಕ್ತಿದಾಯಕವಾಗಿ ಇರುತ್ತವೆ, ಮೊನ್ನೆಯಷ್ಟೇ ಉಪೇಂದ್ರ ತಮ್ಮ ನಿರ್ದೇಶನದಲ್ಲಿ ಯುಐ ಎಂಬ ಸಿನಿಮಾ ಲಾಂಚ್ ಮಾಡಿದ್ದರು. ಇವರ ಸಿನಿಮಾ ವಿಭಿನ್ನವಾಗಿರುತ್ತದೆ, ಪ್ರತಿ ದೃಶ್ಯದಲ್ಲಿಯೂ ಆ ಕ್ರಿಯೇಟೆವಿಟಿ ಕಾಣುತ್ತದೆ, ಆದ್ರೀಗ ವಿಶ್ವದಾದ್ಯಂತ ಉಪ್ಪಿಯ ವಿಭಿನ್ನ ಸಿನಿಮಾ ಶೈಲಿ ಪರಿಚಯ ಆಗಲಿದೆ, ಹಲವು ವರ್ಷಗಳ ನಂತರ ಉಪೇಂದ್ರ ಮತ್ತೆ ನಿರ್ದೇಶನ ಮಾಡುತ್ತಿದ್ದು, ಅಪರೂಪದ ಕಥೆಯೊಂದನ್ನು ಈ ಚಿತ್ರಕ್ಕಾಗಿ ಹೆಣೆದಿದ್ದಾರೆ
UI ಬಗ್ಗೆ ಉಪ್ಪಿ ಏನಂದ್ರು
ಯುಐ ಸಿನಿಮಾ ಮೇಕಿಂಗ್ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ರಿಯಲ್ ಸ್ಟಾರ್ ಉಪೇಂದ್ರ ಆಕ್ಷನ್ ಕಟ್(Action Cut) ಹೇಳುತ್ತಿರೋ ಸಿನಿಮಾ ಯುಐ ಈ ಸಿನಿಮಾ ಈಗಾಗಲೇ ಅರ್ಧಕ್ಕಿಂತಲೂ ಹೆಚ್ಚು ಶೂಟಿಂಗ್ ಮಾಡಿ ಮುಗಿಸಿದೆ. ಉಪ್ಪಿನೇ ಡೈರೆಕ್ಟರ್ ಕ್ಯಾಪ್(Director Cap) ತೊಟ್ಟಿರೋದ್ರಿಂದ ಸಿನಿಪ್ರಿಯರ ನಿರೀಕ್ಷೆಯೇನು ಹೆಚ್ಚಾಗಿದೆ, ಈ ಕ್ರೇಜ್ ಆಪ್ಡೆಟ್ ಬಗ್ಗೆ ಹೇಳಿದ ಉಪ್ಪಿ ಚಿತ್ರ ಡಿಪರೆಂಟ್ ಆಗಿದೆ, ಲುಕ್ ಡಿಪ್ರೆಂಟ್ ಇದೆ ಎಂದು ಹೇಳಿದ್ದಾರೆ, ಯುಐ ಚಿತ್ರದ ಚಿತ್ರೀಕರಣ ಸದ್ದಿಲ್ಲದೇ ನಡೆಯುತ್ತಿದ್ದು, ಅನೇಕ ತಾರಾಗಣ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ, ಯಾವುದೇ ಪಾತ್ರವರ್ಗದ ಕುರಿತು ನಿರ್ಮಾಪಕರು ಮಾಹಿತಿ ಹೊರಬಿಟ್ಟಿಲ್ಲ.ಇನ್ನಷ್ಟೆ ಮಾಹಿತಿ ಸಿಗಬೇಕಾಗಿದೆ