HDFC ಹಿರಿಯ ನಾಗರಿಕರಿಗಾಗಿ ಹಿರಿಯ ನಾಗರಿಕರ FD ಅನ್ನು ಪ್ರಾರಂಭಿಸಿದೆ. ಎಚ್‌ಡಿಎಫ್‌ಸಿ (HDFC Bank) ಹಿರಿಯ ನಾಗರಿಕರ ಕಾಳಜಿ ಮಾಡುವ ಸಲುವಾಗಿ ವಿಶೇಷ ಯೋಜನೆ ಎಫ್‌ಡಿ ಅಂದರೆ ಸ್ಥಿರ ಠೇವಣಿ ತೆಗೆದಿದೆ. ಸಾಮಾನ್ಯವಾಗಿ ಯಾವುದೇ ಉಳಿತಾಯ ಯೋಜನೆಗಳಲ್ಲಿ ಎಫ್ ಡಿ ಪ್ರಮುಖವಾದ ಪಾತ್ರವಹಿಸುತ್ತದೆ. ಯಾಕೆಂದರೆ ಎಫ್ ಡಿ ಗೆ ಹೆಚ್ಚು ಬಡ್ಡಿ ದರವಿರುತ್ತದೆ ಮತ್ತು ಇದು ಹೆಚ್ಚಿನ ಲಾಭವನ್ನು ಕೊಡುತ್ತದೆ ಜೊತೆಗೆ ಹಣದ ಭದ್ರತೆಯನ್ನು ಕೂಡ ಕಾಯ್ದುಕೊಳ್ಳುತ್ತದೆ. ಹಾಗಾಗಿ ಎಫ್‌ಡಿ ಹೂಡಿಕೆ ಉಳಿತಾಯಕ್ಕಾಗಿ ಹೆಚ್ಚು ಆದ್ಯತೆಯ ಮತ್ತು ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ.
ಅಲ್ಲದೆ ನಾವು ಪ್ರಮುಖವಾಗಿ ಗಮನಿಸಬಹುದಾದ ವಿಷಯವೇನೆಂದರೆ, ಎಲ್ಲಾ ಬ್ಯಾಂಕುಗಳು ಕೂಡ ಹಿರಿಯ ನಾಗರಿಕರಿಗೆ ವಿಶೇಷವಾದ ಬಡ್ಡಿದರವನ್ನು ನೀಡುತ್ತದೆ. ಸಾಮಾನ್ಯ ಉಳಿತಾಯ ಖಾತೆ ಹಾಗೂ ವ್ಯಕ್ತಿಗಳಿಗೆ ಹೋಲಿಸಿದರೆ ಎಫ್ ಡಿ ಯಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ದರ ಸಿಗುತ್ತದೆ. ಕೋವಿಡ್ ಸಮಯದಲ್ಲಿ, ಅನೇಕ ಬ್ಯಾಂಕುಗಳು ಹಿರಿಯ ನಾಗರಿಕರು ಮತ್ತು ಹಿರಿಯ ಗ್ರಾಹಕರಿಗಾಗಿ ಅನೇಕ ವಿಶೇಷ ನಿಶ್ಚಿತ ಠೇವಣಿ ಯೋಜನೆಗಳನ್ನು ಪ್ರಾರಂಭಿಸಿದ್ದವು. ಈ ಯೋಜನೆಗಳಲ್ಲಿ, 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ FD ತೆರೆಯುವ ವಯಸ್ಸಾದ ಗ್ರಾಹಕರು ಹೆಚ್ಚಿನ ಬಡ್ಡಿಯ ಲಾಭವನ್ನು ಪಡೆಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಕೆಲವು ಬ್ಯಾಂಕ್‌ಗಳ ವಿಶೇಷ ನಿಶ್ಚಿತ ಠೇವಣಿ ಯೋಜನೆಗಳನ್ನು ನೋಡೋಣ.
HDFC ಹಿರಿಯ ನಾಗರಿಕರ ಆರೈಕೆ FD:
HDFC ಬ್ಯಾಂಕ್ ತನ್ನ ಹಿರಿಯ ಗ್ರಾಹಕರಿಗೆ 5 ವರ್ಷ 1 ದಿನದಿಂದ 10 ವರ್ಷಗಳವರೆಗೆ 25 bps ಹೆಚ್ಚುವರಿ ಪ್ರೀಮಿಯಂ ಅನ್ನು ನೀಡುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಹಿರಿಯ ನಾಗರಿಕರಿಗೆ 5 ವರ್ಷ ಮತ್ತು 1 ದಿನದಿಂದ 10 ವರ್ಷಗಳವರೆಗಿನ ಅವಧಿಗೆ 7.75% ಬಡ್ಡಿದರವನ್ನು ನೀಡುತ್ತದೆ. ಈ ಯೋಜನೆಯು 7 ನವೆಂಬರ್ 2023 ರವರೆಗೆ ಮಾನ್ಯವಾಗಿರುತ್ತದೆ.