ನಮ್ಮದೇ ಆಗಿರೋ ಸ್ವಂತ ಸೂರು ನಿರ್ಮಾಣ ಮಾಡಿಕೊಳ್ಳಬೇಕು ಅಂದ್ರೆ ಅದಕ್ಕೆ ಸಾಕಷ್ಟು ಹಣ ವೆಚ್ಚ ಆಗುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಈಗ ನಮಗೆ ಸುಲಭವಾಗಿ ಗೃಹ ಸಾಲ ಸಿಗುತ್ತೆ. ಯಾವುದೇ ಬ್ಯಾಂಕ್ ನಲ್ಲಿ ಬೇಕಾದ್ರೂ ಗೃಹ ಸಾಲಕ್ಕೆ ಅಪ್ಲೈ ಮಾಡಬಹುದು. ಬೇರೆ ಬೇರೆ ಬ್ಯಾಂಕ್ಗಳಲ್ಲಿ ಬೇರೆ ಬೇರೆ ಬಡ್ಡಿ ದರದಲ್ಲಿ ಗೃಹ ಸಾಲಗಳನ್ನು ಕೊಡಲಾಗುತ್ತೆ.
ಗೃಹ ಸಾಲ ತೆಗೆದುಕೊಳ್ಳುವ ಮೊದಲು ಯೋಚಿಸಿ!
ಗೃಹ ಸಾಲವನ್ನು ಸುಲಭವಾಗಿ ತೆಗೆದುಕೊಳ್ಳಬಹುದು. ಆದರೆ ಅಸಲು ಮತ್ತು ಬಡ್ಡಿಯನ್ನು ಹಿಂತಿರುಗಿಸುವುದು ಹೇಗೆ ಎನ್ನುವ ಯೋಚನೆ ಎಲ್ಲರಿಗೂ ಇದ್ದೆ ಇರುತ್ತೆ. ಎಷ್ಟೋ ಸಲ ಬಡ್ಡಿಯಿಂದಾಗಿ ನಾವು ತೆಗೆದುಕೊಂಡ ಸಾಲಕ್ಕಿಂತ ಮೂರು ಪಟ್ಟು ಹೆಚ್ಚಿನ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತೆ. ಆದರೆ ನೀವು ಸ್ವಲ್ಪ ಸ್ಮಾರ್ಟ್ ಆಗಿ ವ್ಯವಹಾರ ಮಾಡ್ತೀರಿ ಅನ್ಕೊಳ್ಳಿ, ಆಗ ಸುಲಭವಾಗಿ ಅಸಲು ಬಡ್ಡಿಯನ್ನು ತೀರಿಸಬಹುದು.
ಗೃಹ ಸಾಲಕ್ಕೆ ನಿಜಕ್ಕೂ ಎಷ್ಟು ಬಡ್ಡಿ ಇರುತ್ತೆ ಗೊತ್ತಾ?
ಉದಾಹರಣೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ(State Bank of India) ನೀವು 30 ಲಕ್ಷ ರೂಪಾಯಿ ತೆಗೆದುಕೊಂಡಿದ್ದೀರಿ ಎಂದು ಭಾವಿಸಿ. ಅದಕ್ಕೆ 9.55% ಬಡ್ಡಿ ಆಗುತ್ತೆ. ಈ ಬಡ್ಡಿ ತರದ ಆಧಾರದ ಮೇಲೆ 25 ವರ್ಷಗಳಿಗೆ 78,94,574 ರೂಪಾಯಿಯನ್ನು ನೀವು ಮರುಪಾವತಿ ಮಾಡಬೇಕು. ಅಂದರೆ ಇಲ್ಲಿ ನೀವು ಪಾವತಿಸಬೇಕಾಗಿರುವ ಬಡ್ಡಿ ಸರಿ ಸುಮಾರು 48,94,574 ರೂಪಾಯಿಗಳು.
ಸಾಲ ಮರುಪಾವತಿ ಮಾಡಲು ಹೂಡಿಕೆ!
ನೀವು ಪ್ರತಿ ತಿಂಗಳು ಇಎಂಐ (EMI )ಕಟ್ಟಿ ಗೃಹ ಸಾಲವನ್ನು(Home Loan) ಹಿಂತಿರುಗಿಸಬೇಕಾಗುತ್ತದೆ. ಆದರೆ ನೀವು ನಿಮ್ಮ ನ 25% ರಷ್ಟು ಅಂದರೆ Rs.7,015 ಎಸ್ಐಪಿ (SIP) ಎಲ್ಲಿ ಹೂಡಿಕೆ ಮಾಡುತ್ತಾ ಬಂದರೆ ನೀವು ಪಾವತಿಸುವ ಗೃಹ ಸಾಲಕ್ಕಿಂತ ಹೆಚ್ಚಿನ ಮೊತ್ತವನ್ನು ಸೇವ್ ಮಾಡಬಹುದು. ಉದಾಹರಣೆಗೆ ನೀವು ಪ್ರತಿ ತಿಂಗಳು 30 ಲಕ್ಷ ರೂಪಾಯಿಗಳ ಸಾಲಕ್ಕೆ 28,062 ರೂಪಾಯಿ ಇಎಂಐ ಪಾವತಿಸುತ್ತೀರಿ ಎಂದು ಭಾವಿಸಿ. ಅಲ್ಲಿಗೆ 20 ವರ್ಷಗಳಿಗೆ 67,34,871 ರೂಪಾಯಿಗಳನ್ನು ಹಿಂತಿರುಗಿಸುತ್ತೀರಿ.
ಈಗ ನೀವು ಪಾವತಿಸುವ ಇಎಂಐ ಮೊತ್ತದ ರಿಂದ 25% (Rs 7015) ನಷ್ಟು ಎಸ್ಐಪಿ ಹೂಡಿಕೆಯನ್ನು ಆರಂಭಿಸಿ. 12% ಬಡ್ಡಿ ದರದಲ್ಲಿ 20 ವರ್ಷಗಳ ಅವಧಿಗೆ ನಿಮಗೆ ಸಿಗುವ ಮೊತ್ತ 70,09,023 ರೂಪಾಯಿಗಳು. ಅಂದರೆ ನಿಮ್ಮ ಗೃಹ ಸಾಲಕ್ಕಿಂತ ಹೆಚ್ಚಿನ ಹಣವನ್ನು ನೀವು ಸೇವ್ ಮಾಡಿರುತ್ತೀರಿ. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯವಾಗಿರುವ ಅಂಶ ಏನೆಂದರೆ, ನೀವು ಗೃಹ ಸಾಲವನ್ನು ಯಾವಾಗ ತೆಗೆದುಕೊಳ್ಳುತ್ತೀರೋ ಅಂದಿನಿಂದಲೇ SIP ಹೂಡಿಕೆಯನ್ನು ಆರಂಭಿಸಬೇಕು. SIPಯಲ್ಲಿ ಹೂಡಿಕೆ ಮಾಡುವುದಕ್ಕೂ ಮೊದಲು ತಜ್ಞರಿಂದ ಸಲಹೆ ಪಡೆದುಕೊಳ್ಳುವುದು ಸೂಕ್ತ