ATM Card Rules: ಎಲ್ಲಾ ATM ಕಾರ್ಡ್ ಬಳಕೆದಾರರಿಗೆ ಊಹಿಸಲಾಗದ ಹೊಡೆತ, ಕೇಂದ್ರ ಸರ್ಕಾರದ ಹೊಸ ನಿಯಮ
ಮೊದಲು ಎಟಿಎಂ(ATM) ಅನ್ನು ಕೇವಲ ಹಣವನ್ನು ಖಾತೆಯಿಂದ ನಮ್ಮ ಕೈಗೆ ಹಣದ ರೂಪದಲ್ಲಿ ಪಡೆಯಲು ಬಳಸುತ್ತಿದ್ದೆವು ಆದರೆ ಈಗ ಒಂದು ವೇಳೆ ನೀವು ಎಟಿಎಂ ಮಷೀನ್ ನಿಂದ ಹಣವನ್ನು ತೆಗೆಯುವಾಗ ಟ್ರಾನ್ಸಾಕ್ಷನ್ ಫೈಲ್ ಆದರೆ ಅದಕ್ಕೆ ಶುಲ್ಕವನ್ನು ಕೂಡ ನೀಡಬೇಕಾಗಿ ಬಂದಿದೆ. ಮೊದಲೇ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆ ನಡುವೆ ಈಗ ನಮ್ಮದೇ ಹಣವನ್ನು ನಾವು ತೆಗೆಯುವುದಕ್ಕೂ ಎಕ್ಸ್ಟ್ರಾ ಹಣ ನೀಡಬೇಕು ಅಂದ್ರೆ ಖಂಡಿತವಾಗಿ ಪ್ರತಿಯೊಬ್ಬರಲ್ಲಿ ಕೂಡ ಬೇಸರ ಮೂಡಿ ಬರುತ್ತದೆ. ಹಾಗಿದ್ದರೆ ಇದು ಯಾವ ಬ್ಯಾಂಕಿನ ಎಟಿಎಂ ನಲ್ಲಿ ನಡೆಯುತ್ತಿದೆ ಎಂಬುದನ್ನು ತಿಳಿಯೋಣ.
ಪಂಜಾಬ್ ನ್ಯಾಷನಲ್ ಬ್ಯಾಂಕ್(PNB) ತನ್ನ ಅಧಿಕೃತ ವೆಬ್ ಸೈಟಿನಲ್ಲಿ ಮೇ 1ರಿಂದ ಈ ಕಾನೂನು ಜಾರಿಗೆ ಆಗಲಿದ್ದು ಪ್ರತಿಯೊಂದು Failed Transaction ನಿಂದ ಗ್ರಾಹಕರ ಹತ್ತು ರೂಪಾಯಿ ಶುಲ್ಕವನ್ನು ಜಿಎಸ್‌ಟಿ(GST) ರೂಪದಲ್ಲಿ ಪಡೆಯಲಿದೆ ಎಂಬುದಾಗಿ ಅಧಿಕೃತವಾಗಿ ಹೇಳಿದೆ. ಕೇವಲ ಎಷ್ಟೇ ಮಾತ್ರವಲ್ಲದೇ ಇನ್ನೂ ಸಾಕಷ್ಟು ಅಧಿನಿಯಮಗಳನ್ನು ಇತ್ತೀಚಿಗಷ್ಟೇ ಬಿಡುಗಡೆ ಮಾಡಿದ್ದು ಸಂಪೂರ್ಣ ವಿವರವಾಗಿ ಪ್ರತಿಯೊಂದು ಅರಿತುಕೊಳ್ಳೋಣ ಬನ್ನಿ. ಮೊದಲಿಗೆ ಡೆಬಿಟ್ ಕಾರ್ಡ್ ಹಾಗೂ ಪ್ರಿಪೇಡ್ ಕಾರ್ಡಿನ ವಾರ್ಷಿಕ ಶುಲ್ಕವನ್ನು ಕೂಡ ಜಾರಿಗೆ ತರಲಾಗಿದೆ. ಎರಡನೇದಾಗಿ ಡೆಬಿಟ್ ಕಾರ್ಡ್(Debit Card) ಮೂಲಕ Pos ಹಾಗೂ e ಕಾಮರ್ಸ್ ನಲ್ಲಿ ಮಾಡಿರುವಂತಹ ವ್ಯವಹಾರದಲ್ಲಿ ಕೂಡ ಶುಲ್ಕವನ್ನು ಮೇ ಬಂದರಿಂದ ಪ್ರಾರಂಭ ಮಾಡುವ ಸಾಧ್ಯತೆ ಇದೆ.
ಸದ್ಯಕ್ಕೆ PNB ಬ್ಯಾಂಕ್ ಡೆಬಿಟ್ ಕಾರ್ಡ್ ಅನ್ನು ನೀಡಲು ಹಾಗು ಅದರ ವಾರ್ಷಿಕ ಮೈಂಟೇನೆನ್ಸ್ ಚಾರ್ಜ್ ಅನ್ನು ಪಡೆದುಕೊಳ್ಳಲಿದ್ದು ಬೇರೆ ಬೇರೆ ವಿಧದ ಡೆಬಿಟ್ ಕಾರ್ಡ್ ಗಳಲ್ಲಿ ಬೇರೆ-ಬೇರೆ ವಿಧದ ಶುಲ್ಕ ಲಗತ್ತಿಸಲಾಗಿದೆ. ATM ಕಾರ್ಡ್ ಟ್ರಾನ್ಸ್ಯಾಕ್ಷನ್ ವಿಚಾರಕ್ಕೆ ಬಂದರೆ PNB ಬ್ಯಾಂಕಿನ ಎಟಿಎಂ ಮಷೀನ್ ನಲ್ಲಿ ತಿಂಗಳಿಗೆ 5 ಟ್ರಾನ್ಸಾಕ್ಷನ್ ಮಾಡುವ ಅವಕಾಶವನ್ನು ನೀಡುತ್ತದೆ ಹಾಗೂ ಇದಕ್ಕಿಂತ ಹೆಚ್ಚಿಗೆ ಟ್ರಾನ್ಸಾಕ್ಷನ್ ಮಾಡಿದರೆ 10 ರೂಪಾಯಿ ಶುಲ್ಕ ಬೀಳುತ್ತದೆ. ಬೇರೆ ಬ್ಯಾಂಕಿನ ಎಟಿಎಂ ಮಷೀನ್‌ಗಳನ್ನು ಉಪಯೋಗಿಸಲು ತಿಂಗಳಿಗೆ ಮೂರರಿಂದ ಐದು ಅವಕಾಶಗಳು ದೊರಕುತ್ತವೆ. ಇಲ್ಲಿ ಕೂಡ ತಿಂಗಳಿನ ಅವಧಿ ಒಳಗೆ ಹೆಚ್ಚಾಗಿ ಟ್ರಾನ್ಸಾಕ್ಷನ್ ಮಾಡಿದರೆ 21 ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತದೆ.