Bank Loan: ಬ್ಯಾಂಕ್ ಸಾಲ ಕಟ್ಟಲಾಗದೆ ನೋಟಿಸ್ ಬಂದ್ರೆ ಹೀಗೆ ಮಾಡಿ, ಹೊಸ ನಿಯಮ

Advertisement
ಬ್ಯಾಂಕಿನಿಂದ ಸಾಲ ಪಡೆದ ಬಳಿಕ ಅದರ ನಿಜವಾದ ರೂಪ ಬಹುತೇಕರಿಗೆ ಅರಿವಾಗುತ್ತದೆ ಎಂದರೂ ತಪ್ಪಾಗಲಾರದು. ಇಂದು ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಬ್ಯಾಂಕುಗಳು ಸಾಲ (Bank Loan) ನೀಡಲು ಕೆಲವೆ ದಾಖಲಾತಿ ಸಾಕೆಂದು ಬಹುಬೇಗನೆ ಸಾಲ ನೀಡಿ ಬಿಡುತ್ತದೆ. ಆದರೆ ಸಾಲ ಮರುಪಾವತಿಗೆ ಬಂದಾಗ ದೊಡ್ಡ ಸಂಕಷ್ಟಕ್ಕೂ ಗ್ರಾಹಕರನ್ನು ಎಡೆಮಾಡುತ್ತದೆ. ಈ ಮೂಲಕ ಮನೆ ಬಾಗಿಲಿಗೆ ಒಮ್ಮಿಂದೊಮ್ಮೆಲೆ ನೋಟೀಸ್ (Notice) ಬಂದರೆ ಏನು ಮಾಡುವುದು ಎಂಬುದೆ ಭಯ ಹಾಗಾದರೆ ಆ ಸಂದರ್ಭದಲ್ಲಿ ನೀವು ಏನು ಮಾಡಿದರೆ ಒಳಿತು ಬ್ಯಾಂಕಿನ ಸಾಲದ ರೂಪಗಳಾವುವು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಈ ವಿಚಾರದ ಬಗ್ಗೆ ಖಾಸಗಿ ವಾಹಿನಿಯೊಂದರ ಯೂಟ್ಯೂಬ್ ಚಾನೆಲ್ ನಲ್ಲಿ ಸವಿವರವಾದ ಮಾಹಿಯಿಯನ್ನು ನೀಡಲಾಗಿದ್ದು ಸದ್ಯ ಆ ವೀಡಿಯೋ (Video) ಎಲ್ಲೆಡೆ ವೈರಲ್ ಆಗುತ್ತಿದೆ. ಹಣಕಾಸಿನ ವ್ಯವಹಾರದ ಕುರಿತಾಗಿ ಪರಿಣಿತಿಹೊಂದಿರುವ ವಕೀಲ ಎಂ. ಎ. ರಾಜೇಂದ್ರ (M. A. Rajendra) ಅವರು ಈ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದ್ದಾರೆ.
ಮನೆಗೆ ನೋಟೀಸ್ ಬಂದರೆ ಏನು ಮಾಡಬೇಕು?
- ಈ ಬಗ್ಗೆ ಮಾತಾಡಿದ್ದ ಅವರು ಬ್ಯಾಂಕಿನ ವ್ಯವಹಾರದ ಆಡಳಿತ ಸುಸ್ಥಿತಿ ಕಾಪಾಡಲು 2002ರಲ್ಲಿ ಸರ್ಫೇಸ್ ಆ್ಯಕ್ಟ್ (Surface Act) ಬಿಡುಗಡೆ ಮಾಡಿ ಬಳಿಕ 2004, 2016ರಲ್ಲಿ ಈ ಕಾಯ್ದೆ ಯನ್ನು ಬಹುತೇಕ ಬಾರಿ ತಿದ್ದುಪಡಿ ಮಾಡಲಾಯಿತು. ಇದರ ಮುಖ್ಯ ಉದ್ದೇಶ ಬ್ಯಾಂಕಿನ ಸಾಲ ಮರುಪಾವತಿಗೆ ಸಂಬಂಧಿಸಿದ ಅವಧಿ ಎಷ್ಟರ ವರೆಗೆ ಹಾಗೂ ಈ ಅವಧಿಯಲ್ಲಿ ಬ್ಯಾಂಕಿನ ಕಾರ್ಯವೈಕರಿಯನ್ನು ಇದರಲ್ಲಿ ತಿಳಿಸಲಾಗುತ್ತದೆ.
- ಗ್ರಾಹಕನು ತಾನು ಪಡೆದ ಸಾಲಕ್ಕೆ ಬಡ್ಡಿಯನ್ನು ಪಾವತಿಸದೇ ಅಸಲನ್ನು ನೀಡದಿದ್ದಾಗ ಈ ಆ್ಯಕ್ಟ್ ಪ್ರಕಾರ ಬ್ಯಾಂಕಿನ ಕಾರ್ಯವೈಕರಿ ಸಾಗುತ್ತದೆ. ಈ ಮೂಲಕ ಮೊದಲು ಸಾಲ ಪಡೆದವರಿಗೆ ನೋಟೀಸ್ ಹೋಗುತ್ತದೆ ಹಾಗೆಂದು ಗಾಭರಿ ಬೀಳುವ ಅಗತ್ಯ ಇಲ್ಲ, ಅದೇ ರೀತಿ ತೀರಾ ಅಸಡ್ಡೆಯಾಗಿ ನೋಟೀಸ್ ಗಳನ್ನು ಕಡೆಗಣಿಸದಿರುವುದು ಸಹ ತಪ್ಪೆ. ನೀವು ನಿಮ್ಮ ಸಾಲದ ಮೊತ್ತದ ಅವಧಿ ಗೆ ಅನುಗುಣವಾಗಿ ಮಾತನಾಡಬಹುದು.
- ಅಡಿಶನಲ್ ಲೋನ್ ಅನ್ನು ಕಡಿಮೆ ಬಡ್ಡಿಗೆ ನೀಡುವಂತೆ ಕೇಳಬೇಕು. ಇದರ ನೋಟೀಸ್ ಬ್ಯಾಂಕಿಗೆ ಹೋಗಿ ನಿಗಧಿತ ಅವದಿಯೊಳಗೆ ರಿಪ್ಲೈ ಬರದಿದ್ದರೆ ನೀವು ಕಾನೂನಿನ ಮೊರೆ ಹೋಗಬಹುದು. ಡಿಮ್ಯಾಂಡ್ ನೋಟೀಸ್ ಬಂದಾಗ ನೀವು ಮಾಡಬೇಕಾದ ಪ್ರಮುಖ ಕಾರ್ಯ ಇದಕ್ಕೆ ಕಾನೂನಿನ 13(a)ನಲ್ಲಿ ಸಹ ಉಲ್ಲೇಖವಿದೆ. ಈ ಮೂಲಕ ಅರ್ಜಿ ಸಲ್ಲಿಸ ಬಹುದು.
- ಒಟ್ಟಾರೆಯಾಗಿ ಈ ಒಂದು ಮಾಹಿತಿಯೂ ಕೋವಿಡ್ ಅವಧಿಯಲ್ಲಿ ಸಾಕಷ್ಟು ಜನರಿಗೆ ನೆರವಾಗಿದ್ದು ಬ್ಯಾಂಕಿನ ಸಾಲ ಕಾಟದಿಂದ ತತ್ತರಿಸಿದ ಜನತೆಗೆ ಅನುಕೂಲವಾಗುವ ಮಾಹಿತಿ ದೊರೆತಿತ್ತು ಎಂದರೂ ತಪ್ಪಾಗಲಾರದು.