Karnataka Times
Trending Stories, Viral News, Gossips & Everything in Kannada

Gold: ಲಾಕರ್ ನಲ್ಲಿ ಚಿನ್ನ ಇಟ್ಟ ಎಲ್ಲರಿಗೂ ಹೊಸ ಸೂಚನೆ

ಪ್ರತಿಯೊಬ್ಬರೂ ಕೂಡ ಚಿನ್ನವನ್ನು ಆಪತ್ಕಾಲದ ಬಾಂಧವ ಎಂಬುದಾಗಿ ಭಾವಿಸಿಕೊಳ್ಳುತ್ತಾರೆ ಅದಕ್ಕಾಗಿಯೇ ಹಣ ಇದ್ದಾಗ ಪ್ರಮುಖವಾಗಿ ಮೊದಲಿಗೆ ಎಲ್ಲರೂ ಕೂಡ ಚಿನ್ನ ಖರೀದಿಸುತ್ತಾರೆ. ಚಿನ್ನ ಖರೀದಿಸುತ್ತಾರೆ ಎಂದ ಮಾತ್ರಕ್ಕೆ ಪ್ರತಿಯೊಬ್ಬರೂ ಕೂಡ ಚಿನ್ನವನ್ನು ಕಷ್ಟ ಕಾಲಕ್ಕೆ ಒಳ್ಳೆಯದಾಗಲಿ ಎಂಬ ಕಾರಣಕ್ಕಾಗಿ ಮಾತ್ರ ಖರೀದಿಸುವುದಿಲ್ಲ ಕೆಲವರು ಹಣ ಇದ್ದವರು ಪ್ರತಿಷ್ಠೆಯ ವಿಚಾರಕ್ಕಾಗಿ ಕೂಡ ಚಿನ್ನವನ್ನು ಖರೀದಿಸುತ್ತಾರೆ. ಒಟ್ಟಾರೆಯಾಗಿ ಖಂಡಿತವಾಗಿ ಯಾವುದೇ ಅನುಮಾನವಿಲ್ಲದೆ ಚಿನ್ನವನ್ನು ಒಂದೊಳ್ಳೆ ಹೂಡಿಕೆ (Gold Investment) ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಈಗ ಚಿನ್ನವನ್ನು ಎಲ್ಲಿ ಹೂಡಿಕೆ ಮಾಡಬೇಕು ಅನ್ನೋದರ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಿಮಗೆ ಹೇಳಲು ಹೊರಟಿದ್ದೇವೆ.

Advertisement

ಹೌದು ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಆಗಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಒಂದು ಒಳ್ಳೆಯ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬರು ಕೂಡ ತಮ್ಮ ಹಣವನ್ನು ಬ್ಯಾಂಕುಗಳಲ್ಲಿ ಫಿಕ್ಸಿಡ್ ಡೆಪಾಸಿಟ್ (Fixed Deposit) ಇಡುತ್ತಾರೆ ಯಾಕೆಂದರೆ ಒಂದು ನಿಶ್ಚಿತವಾದ ಹಣ ನಮಗೆ ಸಿಗುತ್ತದೆ ಅದು ಕೂಡ ಸುರಕ್ಷಿತವಾಗಿ ಎಂಬುದಾಗಿ ಎಲ್ಲರ ಭಾವನೆಯಾಗಿದೆ.

Advertisement

ಆದರೆ ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ಯೋಜನೆ (SBI New Scheme) ಯ ಪ್ರಕಾರ ಹಣದ ಬದಲು ಚಿನ್ನವನೇ ನೀವು ಫಿಕ್ಸೆಡ್ ಡೆಪಾಸಿಟ್ ರೂಪದಲ್ಲಿ ಬ್ಯಾಂಕಿನಲ್ಲಿ ಇಡಬಹುದಾಗಿದ್ದು ಅದಕ್ಕೆ ನೀವು ಹಣವನ್ನು ಕೂಡ ರಿಟರ್ನ್ ರೂಪದಲ್ಲಿ ಪಡೆದುಕೊಳ್ಳಲಿದ್ದೀರಿ. ಲಾಕರ್ ನಲ್ಲಿ ಇಡೋ ಬದ್ಲು ಈ ರೀತಿ ಫಿಕ್ಸೆಡ್ ಡೆಪಾಸಿಟ್ (Gold Deposit) ಮಾಡಿ ನಿಮ್ಮ ಚಿನ್ನವನ್ನು ಕೂಡ ಸುರಕ್ಷಿತವಾಗಿ ಇಡಬಹುದು ಹಾಗೂ ಅದರ ಮೇಲೆ ನೀವು ಬಡ್ಡಿದರವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯ ಹೆಸರನ್ನು R-GDS ಎಂಬುದಾಗಿ ನಾಮಕರಣ ಮಾಡಲಾಗಿದೆ. SBI Revamped Gold Deposit Scheme ಎನ್ನುವುದು ಇದರ ಫುಲ್ ಫಾರ್ಮ್ ಆಗಿದೆ.

Advertisement

ಒಂದು ವೇಳೆ ನೀವು ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದರೆ ಅದಕ್ಕಾಗಿ ನೀವು ಹೆಚ್ಚಿಗೆ ಎಂದರೆ ಎಷ್ಟು ಬೇಕಾದರೂ ಕೂಡ ಚಿನ್ನವನ್ನು ಹೂಡಿಕೆ (Gold Investment) ಮಾಡಬಹುದು ಆದರೆ ಕಡಿಮೆ ಎಂದರು 30 ಗ್ರಾಂ ಚಿನ್ನವನ್ನು ನೀವು ಫಿಕ್ಸಿಡ್ ಡೆಪಾಸಿಟ್ ಮಾಡಿಸಿಕೊಡಬೇಕು. ಅದಾದ ನಂತರ ಬೇಕಾದರೆ ನೀವು ಸಿಂಗಲ್ ಅಥವಾ ಜಾಯಿಂಟ್ ಅಕೌಂಟ್ (Single or Joint Account) ಅನ್ನು ಕೂಡ ಇದರಲ್ಲಿ ಮಾಡಬಹುದಾಗಿದೆ. ಇದರಲ್ಲಿ ಮೂರು ರೀತಿಯ ಸಮಯದ ಅವಧಿ ಇದೆ. ಮೊದಲನೆಯದು ಶಾರ್ಟ್ ಟರ್ಮ್ 1ರಿಂದ 3 ವರ್ಷ. ಎರಡನೆಯದ್ದು ಮೀಡಿಯಂ ಟರ್ಮ್ 5 ರಿಂದ 7 ವರ್ಷ ಮೂರನೆಯದ್ದು ಲಾಂಗ್ ಟರ್ಮ್ 12 ರಿಂದ 15 ವರ್ಷ.

Advertisement

ಶಾರ್ಟ್ ಟರ್ಮ್ (Short Term Investment) ನಲ್ಲಿ ಒಂದರಿಂದ ಎರಡು ವರ್ಷ 0.55% ಹಾಗೂ ಎರಡರಿಂದ ಮೂರು ವರ್ಷ ಇಟ್ಟರೆ 0.60% ಬಡ್ಡಿ ಸಿಗುತ್ತದೆ. ಮೀಡಿಯಂ ಟರ್ಮ್ ವಿಚಾರಕ್ಕೆ ಬಂದ್ರೆ 2.25 ಪ್ರತಿಶತ ಬಡ್ಡಿ ದರ ದೊರಕುತ್ತದೆ. ಲಾಂಗ್ ಟರ್ಮ್ (Long Term Investment) ನಲ್ಲಿ 2.50% ಬಡ್ಡಿ ದರವನ್ನು ಬ್ಯಾಂಕ್ ನಿಮಗೆ ನೀಡುತ್ತದೆ. ಇದಕ್ಕಾಗಿ ನೀವು ಹತ್ತಿರದ SBI ಬ್ಯಾಂಕಿಗೆ ಹೋಗಿ ನಿಮ್ಮ ಚಿನ್ನವನ್ನು ಈ ಯೋಜನೆ ಅಡಿಯಲ್ಲಿ ಜಮಾ ಮಾಡಬಹುದಾಗಿದೆ ಇದಕ್ಕಾಗಿ ನೀವು ನಿಮ್ಮ ಖಾತೆಯನ್ನು KYC ಕೂಡ ಮಾಡಿಸಬೇಕಾಗಿರುತ್ತದೆ.

ನಿಮ್ಮ ಗುರುತು ಪತ್ರ ಹಾಗೂ ವಿಳಾಸ ಪತ್ರವನ್ನು ಕೂಡ ನೀಡಬೇಕಾಗಿರುತ್ತದೆ. ಅದಕ್ಕೆ ಸಂಬಂಧಪಟ್ಟಂತಹ ಫಾರ್ಮ್ ಅನ್ನು ಧರಿಸಿ ಬ್ಯಾಂಕಿನವರಿಗೆ ನೀಡಿದರೆ ಸಾಕು ನಿಮ್ಮ ಚಿನ್ನವನ್ನು ನಿರ್ದಿಷ್ಟ ಸಮಯದವರೆಗೆ ಸುರಕ್ಷಿತವಾಗಿ ಇರಿಸಲಾಗುತ್ತದೆ ಹಾಗೂ ಅದರ ಮೇಲೆ ಬಡ್ಡಿದರವನ್ನು ಕೂಡ ನಿಮಗೆ ಪಾವತಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ ಗೆ ನೀವು ಭೇಟಿ ನೀಡಬಹುದಾಗಿದೆ.

New notice to all those who kept gold in the locker

Also Read: Gold: ಮನೆಯಲ್ಲಿ ಅಲ್ಪ ಸ್ವಲ್ಪ ಬಂಗಾರ ಇದ್ದವರಿಗೆ ಕೇಂದ್ರದ ಹೊಸ ರೂಲ್ಸ್!

Leave A Reply

Your email address will not be published.