ಆರ್ ಬಿ ಐ(RBI) 2,000 ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿ ತಿಂಗಳುಗಳು ಕಳೆದಿವೆ.ಇನ್ನು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಬ್ಯಾಂಕಿಗೆ ನೀಡಲು ಠೇವಣಿ ಮಾಡಲು ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿರುತ್ತದೆ.ಭಾರತದಲ್ಲಿ ನೋಟು ಅಮಾನೀಕರಣವಾದ ಸಂದರ್ಭದಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನೋಟುಗಳನ್ನು ಪರಿಚಯಿಸಿತ್ತು. ಅದರಲ್ಲಿ ಗುಲಾಬಿ ಬಣ್ಣದ ಎರಡು ಸಾವಿರ ಮುಖಬೆಲೆಯ ನೋಟು ಕೂಡ ಒಂದು.ಈ ಮೊದಲು ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ರದ್ದು ಮಾಡಿದ ನಂತರ ಅದರ ಬದಲಾಗಿ ಈ ನೋಟನ್ನು ಪರಿಚಯಿಸಲಾಯಿತು.
ಆದರೆ ವಿವಿಧ ಕಾರಣಗಳನ್ನು ನೀಡಿ ಆರ್‌ಬಿಐ ಈ ನೋಟನ್ನು ಮತ್ತೆ ವಾಪಸ್ ಪಡೆಯುತ್ತಿದೆ.ಕಳೆದ ಮೇ 19ರಂದು ಹಿಂಪಡೆದಿದ್ದ ₹2000 ಮುಖಬೆಲೆಯ ನೋಟುಗಳಲ್ಲಿ ಆ. 31ರವರೆಗೆ ಶೇ 93ರಷ್ಟು ಬ್ಯಾಂಕುಗಳಿಗೆ ಮರಳಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.ವಿವಿಧ ಬ್ಯಾಂಕುಗಳ ಮಾಹಿತಿ ಅನ್ವಯ ₹2 ಸಾವಿರ ಮುಖಬೆಲೆಯ ₹3.32 ಲಕ್ಷ ಕೋಟಿ ಮೊತ್ತದ ನೋಟುಗಳ ಬ್ಯಾಂಕುಗಳಿಗೆ ಸಲ್ಲಿಕೆಯಾಗಿವೆ.ಆ. 31ರಂದು ₹24 ಸಾವಿರ ಕೋಟಿ ಮೌಲ್ಯದ ನೋಟುಗಳು ಬ್ಯಾಂಕ್‌ಗಳಿಗೆ ಸಲ್ಲಿಕೆಯಾಗಿವೆ ಎಂದು ಆರ್‌ಬಿಐ ಹೇಳಿದೆ.
ಈವರೆಗೂ ಬ್ಯಾಂಕುಗಳಿಗೆ ಮರಳಿರುವ ನೋಟುಗಳಲ್ಲಿ ಶೇ 87ರಷ್ಟು ಠೇವಣಿ ರೂಪದಲ್ಲಿ ಸಲ್ಲಿಕೆಯಾಗಿವೆ. ಶೇ 13ರಷ್ಟು ವಿವಿಧ ಮುಖಬೆಲೆಯ ನೋಟುಗಳಿಗೆ ವಿನಿಮಯಗೊಂಡಿವೆ ಎಂಬ ಮಾಹಿತಿ ಹೊರಬಿದ್ದಿದೆ.ಅಲ್ಲದೆ ಆರ್‌ಬಿಐ ಈ ಕುರಿತಂತೆ ಅಧಿಕೃತ ಆದೇಶ ಹೊರಡಿಸುವ ಮುಂಚೆಯೂ ಕೂಡ ಯಾವುದೇ ಎಟಿಎಂಗಳಲ್ಲಿ 2000 ಮುಖಬೆಲೆಯ ನೋಟುಗಳು ಸಿಗುತ್ತಿರಲಿಲ್ಲ.ಅಲ್ಲದೆ 2023ರ ಮಾರ್ಚ್ 31ರವರೆಗೂ ₹3.62 ಲಕ್ಷ ಕೋಟಿಯಷ್ಟು ₹2 ಸಾವಿರ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು.ಮೇ 19ರ ಹೊತ್ತಿಗೆ ಇದು ₹3.56 ಲಕ್ಷ ಕೋಟಿಗೆ ಕುಸಿಯಿತು.
₹2 ಸಾವಿರ ಮುಖಬೆಲೆಯ ನೋಟುಗಳನ್ನು ಬ್ಯಾಂಕುಗಳಿಗೆ ಹಿಂದಿರುಗಿಸಿ ಅದೇ ಮೌಲ್ಯದ ಇತರ ಮುಖಬೆಲೆಯ ನೋಟುಗಳನ್ನು ಪಡೆಯಲು ಸೆ. 30ರವರೆಗೂ ಅವಕಾಶವಿದೆ ಎಂದು ಆರ್‌ಬಿಐ ಹೇಳಿದೆ.ನೀವು ಕೂಡ ನಿಮ್ಮ ಬಳಿ 2000 ಮುಖಬೆಲೆ ನೋಟು ಇದ್ದರೆ, ಅದನ್ನು ಠೇವಣಿ ಮಾಡಬಹುದು ಅಥವಾ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ನಿರ್ದಿಷ್ಟ ಬ್ಯಾಂಕಿಂಗೆ ಹೋಗಬೇಕು ಎನ್ನುವುದು ಇಲ್ಲ. ನಿಮ್ಮ ಖಾತೆ ಇರುವ ಬ್ಯಾಂಕಿಗೆ ತೆರಳಿ ನೀವು ಈ ಪ್ರಕ್ರಿಯೆಯನ್ನು ನಡೆಸಬಹುದು.