ಭಾರತೀಯ ರಿಸರ್ವ್ ಬ್ಯಾಂಕ್ ಪ್ರತಿಯೊಬ್ಬ ಗ್ರಾಹಕರು ಬ್ಯಾಂಕ್ ನಲ್ಲಿ ತೆರೆದಿರುವ ಖಾತೆಯಲ್ಲಿ ಕನಿಷ್ಠ ಮೊತ್ತ (Minimum Balance) ಎಷ್ಟಿರಬೇಕು ಎನ್ನುವ ಬಗ್ಗೆ ಹೊಸ ನಿಯಮವನ್ನು ತಂದಿದೆ. ತಾವು ದುಡಿದ ಹಣ ಸೇಫ್ ಆಗಿರಲು ಸಾಮಾನ್ಯವಾಗಿ ಪ್ರತಿಯೊಬ್ಬರು ಬ್ಯಾಂಕ್ ನಲ್ಲಿ ಖಾತೆ ತೆರೆಯುವುದರ ಮೂಲಕ ಹಣ ಡೆಪಾಸಿಟ್ ಮಾಡುತ್ತಾರೆ. ಹೀಗೆ ಬ್ಯಾಂಕ್ ನಲ್ಲಿ ವ್ಯವಹಾರ ಮಾಡುವ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ಬ್ಯಾಂಕ್ ನ ನಿಯಮಗಳು ಅನ್ವಯವಾಗುತ್ತವೆ ಹಾಗೂ ಆರ್ಬಿಐ ರೂಲ್ಸ್ ನಂತೆ ಗ್ರಾಹಕರು ನಡೆದುಕೊಳ್ಳಬೇಕಾಗುತ್ತದೆ.
ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಬಗ್ಗೆ ಆರ್ಬಿಐ ನಿಯಮ
RBIನ ಕನಿಷ್ಠ ಬ್ಯಾಲೆನ್ಸ್ (Minimum Balance) ಹೊಸ ನಿಯಮ ಇದೆ ಬರುವ ಅಕ್ಟೋಬರ್ 15 2024ರಿಂದ ಜಾರಿಗೆ ಬರಲಿದೆ. ಈ ರೂಲ್ಸ್ ಪ್ರಕಾರ, ಒಂದು ಆರ್ಥಿಕ ವರ್ಷದಲ್ಲಿ ನಿಮ್ಮ ಖಾತೆಯಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡಿದರೆ ಬ್ಯಾಂಕ್ ನೊಂದಿಗೆ ಎಲ್ಲಾ ಮಾಹಿತಿಯನ್ನು ಶೇರ್ ಮಾಡಬೇಕಾಗುತ್ತದೆ. ಅಗತ್ಯ ಇರುವ ದಾಖಲೆಯನ್ನು ಬ್ಯಾಂಕಿಗೆ ಸಬ್ಮಿಟ್ ಮಾಡಬೇಕಾಗುತ್ತದೆ. ಆದರೆ ಹಿರಿಯ ನಾಗರಿಕರಿಗೆ ಸ್ವಲ್ಪ ವಿನಾಯಿತಿ ನೀಡಲಾಗುತ್ತಿದ್ದು 10 ಲಕ್ಷ ರೂಪಾಯಿಗಳ ವರೆಗೆ ಖಾತೆಯಲ್ಲಿ ಹಣ ಡೆಪಾಸಿಟ್ ಮಾಡಿದರೆ ಹೆಚ್ಚುವರಿ ಮಾಹಿತಿ ಕೊಡುವ ಅಗತ್ಯ ಇಲ್ಲ.
ಬ್ಯಾಂಕ್ ವಿನಾಕಾರಣ ಶುಲ್ಕ ವಿಧಿಸುವಂತಿಲ್ಲ
ಪ್ರತಿಯೊಂದು ಬ್ಯಾಂಕ್ ತನ್ನ ಗ್ರಾಹಕರಿಗೆ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳುವಂತೆ ಹೇಳುತ್ತದೆ. ಕೆಲವೊಂದು ಬ್ಯಾಂಕುಗಳು ಕನಿಷ್ಠ ಬ್ಯಾಲೆನ್ಸ್ ಇಲ್ಲದೆ ಇದ್ದಲ್ಲಿ ದಂಡವನ್ನು ವಿಧಿಸುತ್ತವೆ. 300 ರಿಂದ 600 ರೂಪಾಯಿಗಳವರೆಗೆ ದಂಡ ವಿಧಿಸಲಾಗುವುದು. ಆದರೆ ಈಗ ಆರ್ಬಿಐ ಹೊಸ ನಿಯಮದ ಪ್ರಕಾರ ಎರಡು ವರ್ಷಕ್ಕಿಂತ ಹೆಚ್ಚು ಕಾಲ ಯಾವುದೇ ವಹಿವಾಟು ನಡೆಸದ ಖಾತೆಯನ್ನು ಹೊಂದಿದ್ದರೆ ಕನಿಷ್ಠ ಬ್ಯಾಲೆನ್ಸ್ ಗಾಗಿ ಯಾವುದೇ ಬ್ಯಾಂಕ್ ಅಂತ ಖಾತೆದಾರನಿಗೆ ಶುಲ್ಕ ವಿಧಿಸುವಂತಿಲ್ಲ.
ಇನ್ನು ಭಾರತೀಯ ನಾಗರಿಕರು ಭಾರತದಲ್ಲಿ ಯಾವುದೇ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆಯಬಹುದು ಹಾಗೂ ಎಷ್ಟು ಖಾತೆಯನ್ನು ಬೇಕಾದರೂ ತೆರೆಯಬಹುದು ಎಂದು ಆರ್ಬಿಐ ತಿಳಿಸಿದೆ. ಆದರೆ ಯಾವ ಬ್ಯಾಂಕ್ ಖಾತೆಯನ್ನು ಹೆಚ್ಚಾಗಿ ಬಳಸುತ್ತಿರೋ ಅದನ್ನು ಪ್ರಾಥಮಿಕ ಖಾತೆಯಾಗಿ ಬಳಕೆ ಮಾಡಬೇಕು ಎಂದು ಆರ್ಬಿಐ ತಿಳಿಸಿದೆ. ಗ್ರಾಹಕರಿಗೆ ಬ್ಯಾಂಕ್ ವ್ಯವಹಾರದಲ್ಲಿ ಸಂಪೂರ್ಣ ಸ್ವಾತಂತ್ರವನ್ನು ನೀಡುವ ಸಲುವಾಗಿ ಈ ಹೊಸ ನಿಯಮವನ್ನು ಆರ್ಬಿಐ ಜಾರಿಗೆ ತರಲಿದೆ.