Currency: ಯಾಕೆ ಯಾವ ದೇಶವು ಕೂಡ ಹೆಚ್ಚು ಹಣ ಪ್ರಿಂಟ್ ಮಾಡುವುದಿಲ್ಲ ಗೊತ್ತಾ? ಇಲ್ಲಿದೆ ನೋಡಿ ಆ ಪ್ರಶ್ನೆಗೆ ಸರಿಯಾದ ಉತ್ತರ.

Advertisement
ಸಾಮಾನ್ಯವಾಗಿ ಚಿಕ್ಕ ವಯಸ್ಸಿನಲ್ಲಿ ಇರಬೇಕಾದ ನಮಗೆ ಈ ವಿಚಾರದ ಕುರಿತಂತೆ ಆಲೋಚನೆ ಬಂದಿರಬಹುದು. ಯಾಕೆ ನಮ್ಮ ದೇಶ ಒಂದೇ ಸಮನೆ ದೊಡ್ಡ ಮತದ ಹಣ (Currency) ವನ್ನು ಪ್ರಿಂಟ್ (Print) ಮಾಡಿ ಬಡವರಿಗೆ ನೀಡಿ ಅದರಿಂದ ಅವರು ಯಾವುದೇ ವಸ್ತುವನ್ನು ಬೇಕಾದರೂ ಕೂಡ ಖರೀದಿಸುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿ ಶ್ರೀಮಂತ ಆಗಬಾರದು ಎನ್ನುವುದು. ಇದಕ್ಕಾಗಿ ದೊಡ್ಡ ಮಟ್ಟದ ಹಣವನ್ನು ಕೂಡ ಪ್ರಿಂಟ್ ಮಾಡಿ ಜನರಿಗೆ ಸರ್ಕಾರ ಆ ಹಣವನ್ನು ಇಡಬೇಕು ಎನ್ನುವುದಾಗಿ ಆಲೋಚಿಸಿದ್ದು ಕೂಡ ಉಂಟು. ಆದರೆ ಇದರ ಹಿಂದಿನ ನಿಜವಾದ ಸ್ವಾರಸ್ಯಕರ ವಿಚಾರವನ್ನು ನಾವೆಲ್ಲರೂ ತಿಳಿದುಕೊಳ್ಳಲೇಬೇಕಾಗಿದೆ ಬನ್ನಿ.
ಒಂದು ವೇಳೆ ಈ ರೀತಿ ಮಾಡಿ ಜನಸಾಮಾನ್ಯರಿಗೂ ಕೂಡ ಸರ್ಕಾರ ಹಣ ಪ್ರಿಂಟ್ ಮಾಡಿ ಕೊಟ್ಟರೆ ಒಂದು ವೇಳೆ ಉದಾಹರಣೆಗೆ ಅವರು ಒಂದು ಐದು ಲಕ್ಷ ರೂಪಾಯಿ ಕಾರ್ ಅನ್ನು ಖರೀದಿಸಲು ಹೊರಟರೆ ಪ್ರತಿಯೊಬ್ಬರ ಬಳಿ ಕೂಡ ದುಡ್ಡಿರುವ ಕಾರಣದಿಂದಾಗಿ ಕಾರಿನ ಸಪ್ಲೈ ಕಡಿಮೆಯಾಗುತ್ತದೆ ಹಾಗೂ ಬೇಡಿಕೆ ಜಾಸ್ತಿಯಾಗುತ್ತದೆ. ಈ ಸಂದರ್ಭದಲ್ಲಿ ಕಾರ್ ಸಂಸ್ಥೆಯವರು ಕಾರಿನ ಬೆಲೆಯನ್ನು ಐದು ಲಕ್ಷದಿಂದ 10 ಲಕ್ಷ ರೂಪಾಯಿ ಹೆಚ್ಚಿಗೆ ಮಾಡುತ್ತಾರೆ ಆದರೆ ಹಣದ ಮೌಲ್ಯ ಮಾತ್ರ ಕಡಿಮೆಯಾಗುತ್ತದೆ. ಇದನ್ನೇ ಹಣದುಬ್ಬರ (Inflation) ಎಂದು ಕರೆಯುತ್ತಾರೆ.
ಈಗ ಈ ರೀತಿ ನೋಡುವುದಾದರೆ ನಮ್ಮ ಬಳಿ ಹಣ ಹೆಚ್ಚಾಯಿತು ಹೊರತು ಅದಕ್ಕೆ ಸಿಗುವಂತಹ ವಸ್ತುಗಳ ಸಂಖ್ಯೆ ಮಾತ್ರ ಹೆಚ್ಚಾಗಲಿಲ್ಲ. ಇದೇ ಕಾರಣಕ್ಕಾಗಿ ಪ್ರಪಂಚದಲ್ಲಿ ಯಾವ ದೇಶಗಳು ಕೂಡ ಹೆಚ್ಚಿನ ಹಣವನ್ನು ಪ್ರಿಂಟ್ ಮಾಡಿ ಜನರಿಗೆ ನೀಡುವ ಕೆಲಸವನ್ನು ಯಾವತ್ತೂ ಕೂಡ ಮಾಡುವುದಿಲ್ಲ. ಇನ್ನು ಈ ಹಣದುಬ್ಬರಕ್ಕೆ ಅತಿಯಾದ ಹೆಚ್ಚು ನೋಟ್ ಗಳನ್ನು ಪ್ರಿಂಟ್ ಮಾಡಿ ಆಹಾರವಾದ ದೇಶ ಅಂದ್ರೆ ಜಿಂಬಾಬ್ವೆ. ಅತಿಯಾದ ಹೆಚ್ಚು ನೋಟ್ ಪ್ರಿಂಟ್ ಮಾಡುವ ಮೂಲಕ ಈ ದೇಶದಲ್ಲಿ ಹಣ ದುಬ್ಬರ ಎಷ್ಟು ಜಾಸ್ತಿ ಆಯ್ತು ಅಂದ್ರೆ ಒಂದು ಮಟ್ಟಿಗೆ ಒಂದು ಬಿಲಿಯನ್ ಜಿಂಬಾಬ್ವೆ ಡಾಲರ್ (Zimbabwean dollar) ಅನ್ನು ನೀಡಿ ಖರೀದಿಸಬೇಕಾದಂತಹ ಪರಿಸ್ಥಿತಿ ಎದುರಾಗಿತ್ತು. ಹೀಗಾಗಿ ಹಣವನ್ನು ಹೆಚ್ಚಾಗಿ ಪ್ರಿಂಟ್ ಮಾಡುವುದರಿಂದ ಏನಾಗುತ್ತದೆ ಎನ್ನುವ ಸಂಪೂರ್ಣ ವಿವರ ನಿಮಗೆ ಸಿಕ್ಕಿರಬಹುದು ಎಂಬುದಾಗಿ ಭಾವಿಸುತ್ತೇವೆ.