UPI Payments Rules: Paytm ಮೂಲಕ ಹಣ ಕಳುಹಿಸುವವರಿಗೆ ದೇಶಾದ್ಯಂತ ಹೊಸ ರೂಲ್.

Advertisement
NPCI ಸಂಸ್ಥೆ ಈಗಾಗಲೇ 2000ಕ್ಕೂ ಅಧಿಕ ಯುಪಿಐ ಟ್ರಾನ್ಸಾಕ್ಷನ್ ಮೇಲೆ 1.1% ಶುಲ್ಕವನ್ನು ವಿಧಿಸಲಾಗುತ್ತದೆ ಎಂಬುದಾಗಿ ಘೋಷಣೆ ಮಾಡಿದ ಆದರೆ ಯಾವ ಟ್ರಾನ್ಸಾಕ್ಷನ್ ಮೇಲೆ ಹೇಗೆ ಶುಲ್ಕ ಎನ್ನುವ ಗೊಂದಲವನ್ನು ಇಂದಿನ ಲೇಖನಿಯಲ್ಲಿ ಸಂಪೂರ್ಣವಾಗಿ ಕ್ಲಿಯರ್ ಮಾಡಿಕೊಳ್ಳೋಣ ಬನ್ನಿ. ಇತ್ತೀಚೆಗೆ ಪರಿಚಯಿಸಲಾಗಿದ್ದ Interchange ಶುಲ್ಕದ ಅನ್ವಯ ಸಾಮಾನ್ಯವಾಗಿ UPI ಟ್ರಾನ್ಸಾಕ್ಷನ್ ಮಾಡುವಾಗ ಬ್ಯಾಂಕ್ ಟು ಬ್ಯಾಂಕ್ ಟ್ರಾನ್ಸಾಕ್ಷನ್ ಮಾಡಿದರೆ ಯಾವುದೇ ಶುಲ್ಕಗಳು ಕಡಿತವಾಗುವುದಿಲ್ಲ ಎಂಬುದಾಗಿ ಅಧಿಕೃತವಾಗಿ ಹೇಳಲಾಗಿದೆ.
ಇದೇ ಏಪ್ರಿಲ್ 1ರಿಂದ ಪ್ರಾರಂಭವಾಗಿ PPI ವ್ಯಾಲೆಟ್ ಅಥವಾ ಕಾರ್ಡ್ ಅನ್ನು ಬಳಸಿಕೊಂಡು ವ್ಯಾಪಾರ ಮಾಡುವ ವ್ಯಾಪಾರಿಗಳ UPI ವ್ಯಾಪಾರದ ಮೇಲೆ 1.1% ಶುಲ್ಕವನ್ನು ವಿಧಿಸಲಾಗುತ್ತದೆ. ಎರಡು ವ್ಯಾಲೆಟ್ ಗಳ ನಡುವಿನ ಇಂಟರ್ಚೇಂಜ್ ಶುಲ್ಕವನ್ನು ಸಮವಾಗಿಸಲೆಂದೇ NPCI ಈ ಕ್ರಮವನ್ನು ಜಾರಿಗೊಳಿಸಿದೆ ಎಂಬುದಾಗಿ ತಿಳಿದು ಬಂದಿದೆ. ಅಂದರೆ ನೀವು ಸಾಮಾನ್ಯವಾಗಿ ಫೋನ್ ಪೇ ಗೂಗಲ್ ಪೇ ನಿಂದ ಬ್ಯಾಂಕಿನ ಹಣವನ್ನು ವ್ಯಾಪಾರಿಯ QR ಕೋಡ್ ಸ್ಕ್ಯಾನ್ ಮಾಡಿ ಹಣವನ್ನು ವರ್ಗಾಯಿಸಿದಾಗ ಯಾವುದೇ ಶುಲ್ಕಗಳು ಕಡಿತುಕೊಳ್ಳುವುದಿಲ್ಲ ಬದಲಾಗಿ ನಿಮ್ಮ ವ್ಯಾಲೆಟ್ ನಲ್ಲಿ ಇರುವಂತಹ ಹಣವನ್ನು ಸ್ಕ್ಯಾನ್ ಮಾಡಿದಾಗ ಮಾತ್ರ ಆ ಶುಲ್ಕ ಜಾರಿಗೆ ಬರುತ್ತದೆ.
ಇದುವರೆಗೂ ಯಾವುದೇ UPI ಟ್ರಾನ್ಸಾಕ್ಷನ್ಗಳಲ್ಲಿ ಶುಲ್ಕ ಪಾವತಿ ಕ್ರಮ ಇರಲಿಲ್ಲ ಆದರೆ ಏಪ್ರಿಲ್ 1ರಿಂದ ಇದು ಪ್ರಾರಂಭವಾಗಿದೆ. UPI ಟ್ರಾನ್ಸಾಕ್ಷನ್ ಎನ್ನುವುದು ಡಿಜಿಟಲೀಕರಣದ ನಂತರ ಯಾವ ರೀತಿಯಲ್ಲಿ ಕ್ಷೀಪ್ರಗತಿಯನ್ನು ಪಡೆದುಕೊಂಡಿದೆ ಎಂದರೆ ವ್ಯವಹಾರಿಕಾ ಮೌಲ್ಯ 1700 ಕೋಟಿಯಿಂದ 12.98 ಲಕ್ಷ ಕೋಟಿಯನ್ನು ಅತ್ಯಂತ ವೇಗವಾಗಿ ಮೀರಿಸುತ್ತಿದೆ.
ಹೀಗಾಗಿ ಇದರಿಂದ ಆದಷ್ಟು ಆದಾಯವನ್ನು ಸೃಷ್ಟಿಸಿಕೊಳ್ಳುವಂತಹ ಕೆಲಸಕ್ಕೆ NPCI ಮುಂದಾಗಿದೆ ಎನ್ನುವುದನ್ನು ಮೇಲ್ಮೈ ನೋಟದ ಮೂಲಕ ಹೇಳಬಹುದಾಗಿದೆ. ಹೀಗಾಗಿ ನೀವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿರುವುದು ಏನೆಂದರೆ ಯುಪಿಐ ಟ್ರಾನ್ಸಾಕ್ಷನ್ ನಲ್ಲಿ ಬ್ಯಾಂಕಿನಿಂದ ಬ್ಯಾಂಕ್ ಗೆ ಮಾಡಲಾಗುವ ಹಣ ವರ್ಗಾವಣೆಯಲ್ಲಿ ಯಾವುದೇ ಶುಲ್ಕ ಇರುವುದಿಲ್ಲ. ವ್ಯಾಲೆಟ್ ನಿಂದ ವ್ಯಾಪಾರಿಯ ಯುಪಿಐ ಖಾತೆಗೆ ಹಣವನ್ನು ಟ್ರಾನ್ಸ್ಫರ್ ಮಾಡುವಾಗ ಶುಲ್ಕಗಳು ಲಗತ್ತಿಸಲಾಗುವುದು.