ಎಲ್ಐಸಿ ಎಲ್ಲಿ ಹೂಡಿಕೆ ಮಾಡುವುದು ಹೆಚ್ಚು ಲಾಭದಾಯಕವೂ ಹೌದು ಜೊತೆಗೆ ಸೇಫ್ ಕೂಡ ಹೌದು ಹಾಗಾಗಿ ಸಾಕಷ್ಟು ಜನ ಎಲ್ಐಸಿ ಮೂಲಕ ತಮ್ಮ ಉಳಿತಾಯ ಖಾತೆಯನ್ನು ಆರಂಭಿಸಿದ್ದಾರೆ ಭವಿಷ್ಯದ ಯೋಜನೆ ಇರುವವರು ಬಂಡವಾಳ ಹೂಡಿಕೆ ಮಾಡಿ ಹಣ ಉಳಿತಾಯ ಮಾಡುವುದು ಸಾಮಾನ್ಯ ಇದೀಗ ಎಲ್ಐಸಿ ಇನ್ನೊಂದು ಹೊಸ ಪಾಲಿಸಿ ಪರಿಚಯ ಮಾಡಿದ್ದು ಇದರಲ್ಲಿ ನೀವು ಕಡಿಮೆ ಹೂಡಿಕೆ ಮಾಡಿ ಹೆಚ್ಚು ಆದಾಯ ಗಳಿಸಿಕೊಳ್ಳಬಹುದು.
ಎಲ್ಐಸಿ ಪರಿಚಯ ಮಾಡಿರುವ ಹಲವು ಪಾಲಿಸಿಗಳಲ್ಲಿ ಎಲ್ ಐ ಸಿ ಬಿಮಾ ರತ್ನ ಪಾಲಿಸಿ ಇದೀಗ ಹೆಚ್ಚು ಪ್ರಚಲಿತದಲ್ಲಿದೆ. ಹೆಚ್ಚು ಸುರಕ್ಷತೆಯನ್ನು ಹೊಂದಿರುವ ಹಾಗೂ ಹೆಚ್ಚು ಹಣವನ್ನು ಹಿಂಪಡೆಯುವುದಕ್ಕೆ ಸಾಧ್ಯವಾಗುವ ಯೋಜನೆಗಳಲ್ಲಿ ಬಿಮಾ ರತ್ನ ಯೋಜನೆ ಕೂಡ ಒಂದು. ಎಲ್ಐಸಿ ಯಲ್ಲಿ ಎಲ್ಲಾ ವಯೋಮಾನದ ಜನರಿಗೆ ಹೊಂದಿಕೆಯಾಗುವಂತಹ ಪಾಲಿಸಿಗಳು ಲಭ್ಯವಿವೆ ಜೊತೆಗೆ ಎಷ್ಟು ಹಣವನ್ನು ಹೂಡಿಕೆ ಮಾಡುತ್ತೀರಿ ಎನ್ನುವುದರ ಮೇಲೆ ನೀವು ಹೆಚ್ಚಿನ ಮೊತ್ತದ ಹಣವನ್ನು ಹಿಂತಿರುಗಿ ಪಡೆಯಬಹುದು. ಇನ್ನು ಎಲ್ ಐ ಸಿ ಬಿಮಾ ರತ್ನ ಯೋಜನೆಯ ಬಗ್ಗೆ ಹೇಳುವುದಾದರೆ ಇದು ಪಕ್ಕಾ ಮನಿ ಬ್ಯಾಕ್ ಯೋಜನೆ ಆಗಿದೆ. 15 ವರ್ಷಗಳ ಅವಧಿಯ ಈ ಯೋಜನೆಯಲ್ಲಿ ಹೂಡಿಕೆದಾರರು ಠೇವಣಿಗಿಂತ 10 ಪಟ್ಟು ಹೆಚ್ಚಿನ ಲಾಭವನ್ನ ಪಡೆಯುತ್ತಾರೆ.
ಈ ಯೋಜನೆ 15 ವರ್ಷಗಳ ಅವಧಿಯದಾಗಿದ್ದು ಪಾಲಿಸಿದಾರರು 13 ಹಾಗೂ 14ನೇ ವರ್ಷದಲ್ಲಿ ತಮ್ಮ ಹೂಡಿಕೆಯ ಶೇಕಡ 25ರಷ್ಟನ್ನು ಹಿಂತಿರುಗಿ ಪಡೆಯುತ್ತಾರೆ. ಅದೇ 20 ವರ್ಷಕ್ಕೆ ಹೂಡಿಕೆ ಮಾಡಿದರೆ 18 ಹಾಗೂ 19ನೇ ವರ್ಷದಲ್ಲಿ ಶೇಕಡ 25ರಷ್ಟು ರಿಟರ್ನ್ ಪಡೆಯುತ್ತಾರೆ. 25 ವರ್ಷದ ಪಾಲಿಸಿ ಮಾಡಿಸಿದರೆ 23 ಹಾಗೂ 24ನೇ ವರ್ಷದಲ್ಲಿ 25% ರಷ್ಟು ಹಣವನ್ನು ಹಿಂಪಡೆಯಬಹುದು. ಮೊದಲ ಐದು ವರ್ಷಗಳ ಅವಧಿಗೆ ನೀವು ಹೂಡಿಕೆ ಮಾಡುವ ಪ್ರತಿ ಸಾವಿರ ರೂಪಾಯಿಗಳ ಮೇಲೆ 50 ರೂಪಾಯಿ ಬೋನಸ್ ಪಡೆಯುತ್ತೀರಿ. ಹೂಡಿಕೆಯ ತಿಂಗಳು ಹೆಚ್ಚಾದಂತೆ ಬೋನಸ್ ನ ಮೊತ್ತ ಕೂಡ ಜಾಸ್ತಿಯಾಗುತ್ತದೆ. ಆರರಿಂದ ಹತ್ತು ವರ್ಷಗಳ ಅವಧಿಯಲ್ಲಿ 50 ರೂಪಾಯಿ ಇದ್ದ ಬೋನಸ್ 55ರೂ.ಕ್ಕೆ ಏರಿಕೆ ಆಗುತ್ತದೆ. ಈ ಬೋನಸ್ ಹಣ ಮೆಚುರಿಟಿ ಅವಧಿಗೆ 60 ರೂಪಾಯಿ ಆಗಿರುತ್ತದೆ.
ಯಾರು ಹೂಡಿಕೆ ಮಾಡಬಹುದು?
ಇನ್ನು ಈ ಯೋಜನೆಯಲ್ಲಿ 90 ದಿನಗಳ ಮಗುವಿನಿಂದ ಹಿಡಿದು 55 ವರ್ಷಗಳ ವರೆಗಿನ ವ್ಯಕ್ತಿ ಹೂಡಿಕೆ ಮಾಡಬಹುದು ಕನಿಷ್ಠ 5 ಲಕ್ಷ ಹೂಡಿಕೆ ಮಾಡಬೇಕು. ತಿಂಗಳಿಗೆ ಅಥವಾ ಮೂರು ತಿಂಗಳಿಗೆ ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ನೀವು ಪಾಲಿಸಿ ಪ್ರೀಮಿಯಂ ಕಟ್ಟಬಹುದು.
50 ಲಕ್ಷ ರೂಪಾಯಿ ಹೇಗೆ ಸಿಗುತ್ತೆ ಗೊತ್ತಾ?
ಸುಮಾರು 30 ವರ್ಷ ವಯಸ್ಸಿನ ವ್ಯಕ್ತಿ ಈ ಯೋಜನೆಯಲ್ಲಿ 15 ವರ್ಷಗಳ ಅವಧಿಗೆ 5 ಲಕ್ಷಗಳನ್ನು ಹೂಡಿಕೆ ಮಾಡಿದ್ದಾನೆ ಎಂದು ಭಾವಿಸಿ. ಆತ ಪ್ರತಿ ತಿಂಗಳು ಪ್ರೀಮಿಯಂ ಪಾವತಿಸುತ್ತಾನೆ. 13 ರಿಂದ 14ನೇ ವರ್ಷದಲ್ಲಿ ಆತ ತನ್ನ ಹೂಡಿಕೆಯ ಶೇಕಡ 25 ರಷ್ಟು ರಿಟರ್ನ್ ಪಡೆಯುತ್ತಾನೆ. ಇದರ ಜೊತೆಗೆ ಸಾವಿರ ರೂಪಾಯಿಗಳಿಗೆ ರೂ. 50 ಗಳಷ್ಟು ಬೋನಸ್ ಕೂಡ ಸಿಗುತ್ತದೆ. ಪಾಲಿಸಿ ಮೆಚ್ಯೂರ್ ಆಗುವ ಸಮಯದಲ್ಲಿ ಈ ಹಣ 60 ರೂಪಾಯಿಗೆ ಏರಿಕೆ ಆಗಿರುತ್ತದೆ. ಅಲ್ಲಿಗೆ ತಾನು ಪ್ರಾರಂಭಿಸಿದ ಠೇವಣಿಯ ಹತ್ತು ಪಟ್ಟು ಹೆಚ್ಚು ಅಂದರೆ ಐದು ಲಕ್ಷಕ್ಕೆ 50 ಲಕ್ಷ ರೂಪಾಯಿಗಳನ್ನು ಠೇವಣಿದಾರ ಪಡೆದುಕೊಳ್ಳುತ್ತಾನೆ