Karnataka Times
Trending Stories, Viral News, Gossips & Everything in Kannada

Labour Card: ಲೇಬರ್ ಕಾರ್ಡ್ ನಿಂದ ಲಾಭ ಪಡೆದ ಎಲ್ಲರಿಗೂ ಕಹಿಸುದ್ದಿ ! ಬೆಳ್ಳಂಬೆಳಿಗ್ಗೆ ಸಿಎಂ ಕಠಿಣ ನಿರ್ಧಾರ

advertisement

Labour Social Security and Welfare Schemes: ಇಂದು ಬಡವರ್ಗದ ಜನತೆಗಾಗಿ ಸರಕಾರ ಹಲವು ರೀತಿಯ ಯೋಜನೆಯನ್ನು ರೂಪಿಸುತ್ತಿದೆ. ಹೌದು ರೈತರಿಗಾಗಿ, ಮಹಿಳೆಯರಿಗಾಗಿ ಅದೇ ರೀತಿ ಕಾರ್ಮಿಕರಿಗಾಗಿ ಹಲವು ಯೋಜನೆಯನ್ನು ರೂಪಿಸುತ್ತಿದೆ.ಸರ್ಕಾರವು ದೇಶದ ಶ್ರಮಿಕ ವರ್ಗಕ್ಕೆ ಸೌಲಭ್ಯಗಳನ್ನು ಒದಗಿಸಲೆಂದು ಇದಕ್ಕಾಗಿ ಕಾರ್ಮಿಕ ಕಾರ್ಡ್‌(Labour Card) ಜಾರಿಗೊಳಿಸಿದೆ.ಇದರಿಂದ ಹಲವು ರೀತಿಯ ಸರಕಾರದ ಸೌಲಭ್ಯ ಗಳನ್ನು ಪಡೆಯಬಹುದಾಗಿದೆ.

ನೊಂದಣಿ ಮಾಡಿರಬೇಕು
ಕಟ್ಟಡ ಕಾರ್ಮಿಕರು ಆಗಿದ್ದಲ್ಲಿ ನೋಂದಾವಣೆ ಮಾಡಿದ ಕಾರ್ಮಿಕರಿಗೆ ಸರಕಾರದಿಂದ ಹಲವು ರೀತಿಯ ಸೌಲಭ್ಯಗಳನ್ನು ಕೂಡ ನೀಡಲಾಗುತ್ತಿದೆ. ಇದರಲ್ಲಿ ಸಾಲ ಸೌಲಭ್ಯದಿಂದ ಹಿಡಿದು ಮಕ್ಕಳ ಶೈಕ್ಷಣಿಕ ವೆಚ್ಚ, ಆರೋಗ್ಯ ಸೌಲಭ್ಯ, ಪಿಂಚಣಿವರೆಗೆ ಸರ್ಕಾರ ಆರ್ಥಿಕ ನೆರವು ನೀಡುತ್ತಿದೆ. ಆದರೆ ಇದರ ಪ್ರಯೋಜನ ಪಡೆದುಕೊಳ್ಳಲು ಇಂದು ಸುಳ್ಳು ದಾಖಲೆ ನೀಡಿ ಕಾರ್ಡ್ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಅಕ್ರಮ ಕಾರ್ಡ್
ಆರ್ಥಿಕವಾಗಿ ಸಧೃಡ ವಾಗಿ ಇದ್ದರೂ ಅಸಂಘಟಿತ ಕಾರ್ಮಿಕರಲ್ಲದವರೂ ಕೂಡ ಕಾರ್ಮಿಕ ಕಾರ್ಡ್‌ ಪಡೆದು ಸರಕಾರದ ಸೌಲಭ್ಯ ಗಳನ್ನು ಪಡೆದು ಕೊಳ್ಳುತ್ತಿದ್ದಾರೆ.ಇದರಿಂದ ಅರ್ಹರಿಗೆ ಸಿಗಬೇಕಾದ ಸೌಲಭ್ಯ ಗಳು ಸಿಗ್ತಾ ಇಲ್ಲ. ಅಕ್ರಮವಾಗಿ ಕಾರ್ಡ್ ಮಾಡಿಸಿ ಸೌಲಭ್ಯ ಪಡೆದುಕೊಳ್ಳುವ ಮಾಹಿತಿ ಬೆಳಕಿಗೆ ಬಂದಿದೆ.ಇದೀಗ ಅನರ್ಹರ ಕಾರ್ಡ್ ಪತ್ತೆಗಾಗಿ ಸರಕಾರ ಅಭಿಯಾನ ಆರಂಭ ಮಾಡಿದೆ. ಅರ್ಜಿ ಸಲ್ಲಿಸಿದ ಫಲಾನುಭವಿಗಳಲ್ಲಿ ಅನೇಕ ಬೋಗಸ್‌ ಕಾರ್ಡ್‌ಗಳು ಇರುವುದು ಪತ್ತೆಯಾಗಿದ್ದು ಈಗಾಗಲೇ ಹಲವು ಕಾರ್ಮಿಕರ ಬೋಗಸ್‌ ಕಾರ್ಡ್‌ ರದ್ದಾಗಿವೆ.

advertisement

ಈ ಬಗ್ಗೆ ಎಚ್ಚರಿಕೆ
ಈಗಾಗಲೇ ಕಾರ್ಮಿಕರಲ್ಲದೆ ಇದ್ದವರು ಕೂಡ ಈ ಕಾರ್ಡ್‌ಗಳನ್ನು ಹೊಂದಿದ್ದರೆ ಈ ಬಗ್ಗೆ ಕಾರ್ಮಿಕ ಇಲಾಖೆ ಎಚ್ಚರಿಕೆ ನೀಡಿದೆ. ಬೋಗಸ್‌ ಕಾರ್ಡ್‌ ಮಾಡಿಸಿ ಕೊಂಡವರು ಸ್ವ ಇಚ್ಛೆಯಿಂದ ಗುರುತಿನ ಚೀಟಿ ಹಿಂದಿರುಗಿಸಿದರೆ ಒಪ್ಪಿಗೆ ಪತ್ರ ಪಡೆದು ಕಾನೂನು ಕ್ರಮ ಕೈಬಿಡಲಾಗುತ್ತದೆ. ಪರಿಶೀಲನೆ ವೇಳೆ ಗೊತ್ತದ್ದಲಿ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

Image Source: India Tv News

ತಂಡ ರಚನೆ
ಕಾರ್ಮಿಕರ ನೋಂದಣಿಯಾದ ಸಂಖ್ಯೆಯಲ್ಲಿ ಹಲವು ಅನರ್ಹರು ಇರುವ ಶಂಕೆ ಇದ್ದ ಕಾರಣ ಅಧಿಕಾರಿಗಳ ತಂಡಗಳನ್ನು ರಚಿಸಿ ಜಿಲ್ಲಾದ್ಯಂತ ಪರಿಶೀಲಿಸ ಲಾಗುತ್ತಿದೆ.ಈಗಾಗಲೇ ಆಹಾರ ಇಲಾಖೆಯು ನಕಲಿ ಬಿಪಿಎಲ್ ಕಾರ್ಡ್ ರದ್ದು ಅದಂತೆಯೇ ಕಾರ್ಮಿಕ ಇಲಾಖೆ ಕೂಡ ನಕಲಿ ಕಾರ್ಮಿಕ ಕಾರ್ಡ್ ರದ್ದತಿ ಅಭಿಯಾನ ಶುರು ಮಾಡಿದೆ.

ಇವರಿಗೆ ಮಾತ್ರ ಅನ್ವಯ
ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ಈ ಕಾರ್ಡ್ ವಿತರಣೆ ಮಾಡಲಾಗುತ್ತಿದ್ದು ಒಂದು ವರ್ಷದ ಅವಧಿಯಲ್ಲಿ ಕನಿಷ್ಠ 90 ದಿನಗಳ ಕಾಲ ಯಾವುದೇ ಕಟ್ಟಡ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಕಾರ್ಮಿಕರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.ಸುಳ್ಳು ದಾಖಲೆ ನೀಡಿ ಅರ್ಜಿ ಸಲ್ಲಿಕೆ ಮಾಡುವಂತಿಲ್ಲ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.

advertisement

Leave A Reply

Your email address will not be published.