Bank Of Baroda: ಮನೆ ಕಟ್ಟುವವರಿಗೆ ಬ್ಯಾಂಕ್ ಆಫ್ ಬರೋಡ ನೀಡುತ್ತಿದೆ ಕಡಿಮೆ ಬಡ್ಡಿದರದಲ್ಲಿ ಸಾಲ
ತಾನು ತನ್ನ ಜೀವನದಲ್ಲಿ ಒಮ್ಮೆಯಾದರೂ ಒಂದು ಮನೆ ಕಟ್ಟಬೇಕು ಆ ಮನೆಯಲ್ಲಿ ತನ್ನ ಕುಟುಂಬದವರು ಸಂತೋಷವಾಗಿ ಇರುವುದನ್ನು ನೋಡಬೇಕು ಎನ್ನುವುದು ಹಲವರ ಕನಸು ಹಾಗೂ ಆಸೆ. ಎಲ್ಲರಿಗೂ ಇದನ್ನು ಈಡೇರಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ನೀವು ಕೆಲವು ಬ್ಯಾಂಕ್ಗಳಲ್ಲಿ ಸಾಲ ತೆಗೆದುಕೊಳ್ಳುವುದರ ಮೂಲಕ ನಿಮ್ಮ ಈ ಕನಸನ್ನು ಕೂಡ ಸುಲಭವಾಗಿ ನೆರವೇರಿಸಿಕೊಳ್ಳಬಹುದು. ನೀವು ಗೃಹ ಸಾಲ(Home Loan) ತೆಗೆದುಕೊಳ್ಳುವುದಕ್ಕೆ ಯೋಚನೆ ಮಾಡಿದರೆ ನಿಮಗೆ ಈ ಬ್ಯಾಂಕ್ ಸೂಕ್ತ ಸಾಲ ನೀಡಲಿದೆ.
ಅದುವೇ ಬ್ಯಾಂಕ್ ಆಫ್ ಬರೋಡ. ಬ್ಯಾಂಕ್ ಆಫ್ ಬರೋಡ ಗೃಹ ಸಾಲದ ಬಡ್ಡಿ ದರವನ್ನು 40 ಬೇಸಿಸ್ ಪಾಯಿಂಟ್ ಗಳಿಂದ 8.50 ಕ್ಕೇ ಇಳಿಸುವುದಾಗಿ ತಿಳಿಸಿದೆ. ಜೊತೆಗೆ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡ ತನ್ನ ಎಂಎಸ್ಎಂಇ ಸಾಲದ ಬಡ್ಡಿ ದರವನ್ನು ಕೂಡ ಶೇಕಡಾ 8.40ಕ್ಕೆ ಇಳಿಕೆ ಮಾಡಿದೆ. ಮಾರ್ಚ್ 5ರಿಂದ ಮಾರ್ಚ್ 31ರ ವರೆಗೆ ಈ ಹೊಸ ದರಗಳು ಅನ್ವಯ ಆಗಲಿವೆ ಎಂದು ಬ್ಯಾಂಕ್ ಆಫ್ ಬರೋಡ ತನ್ನ ಅಧಿಕೃತ ವೆಬ್ಸೈಟ್ನಲ್ಲಿ(Website) ಮಾಹಿತಿ ನೀಡಿದೆ.
ಬ್ಯಾಂಕ್ ಆಫ್ ಬರೋಡ ಸೀಮಿತಾವಧಿಗೆ ತನ್ನ ಗ್ರಹ ಸಾಲದ ಬಡ್ಡಿ ದರದಲ್ಲಿ ಇಳಿಕೆ ಮಾಡಿದೆ. ನೀವು ಸೀಮಿತ ಅವರಿಗೆ 8.50% ಬಡ್ಡಿ ದರದಲ್ಲಿ ಗ್ರಹ ಸಾಲವನ್ನು ಪಡೆದುಕೊಳ್ಳಬಹುದು. ರೆಪೋ ದೊರಗಳು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳ ಸಾಲಗಳು ಕೂಡ ದುಬಾರಿಯಾಗಿದೆ ಆದರೆ ಇದೀಗ ಸೀಮಿತ ಅವಧಿಗೆ ಬ್ಯಾಂಕ್ ಆಫ್ ಬರೋಡ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡಲು ಮುಂದಾಗಿದೆ.
ಇದಕ್ಕೆ ಮಾಹಿತಿ ನೀಡಿರುವ ಬ್ಯಾಂಕ್ ಆಫ್ ಬರೋಡದ ಕಾರ್ಯನಿರ್ವಾಹಕ ನಿರ್ದೇಶಕ ಅಜಯ್ ಕೆ ಕುರಾನ್(Ajay K Kuran) ಎಂಎಸ್ಎಂಇ(MSME) ವಲಯದಲ್ಲಿ ಬಡ್ಡಿ ದರಗಳಲ್ಲಿ ಕಡಿಮೆ ಮಾಡಿರುವುದು ಸಾಲವನ್ನು ಪಡೆಯಲು ಬಯಸುವ ಉದ್ಯಮಿಗಳಿಗೆ ಅನುಕೂಲವಾಗಲಿದೆ. ಬಡ್ಡಿದರ ಇಳಿಕೆಯ ಹೊರತಾಗಿ ಬ್ಯಾಂಕ್ ಗ್ರಾಹ ಸಾಲದ ಮೇಲೆ 100% ಚಾರ್ಜ್ ಮನ್ನಾ ಮಾಡಿದೆ. ಅಷ್ಟೇ ಅಲ್ಲ ಎಂ ಎಸ್ ಎಮ್ ಇ ಸಾಲದ ಮೇಲೆ 50% ಪ್ರೋಸೆಸಿಂಗ್ ಚಾರ್ಜ್ ಮನ್ನಾ ಮಾಡಲಾಗಿದೆ. ಜೊತೆಗೆ ಸಾಲದ ಮೇಲೆ ಯಾವುದೇ ಪೂರ್ವ ಪಾವತಿ ಅಥವಾ ಮೊದಲೇ ಪಾವತಿಸುವ ಶುಲ್ಕಗಳು ಈ ಅನ್ವಯ ಆಗುವುದಿಲ್ಲ. ಹೊಸ ಗೃಹ ಸಾಲ ಬ್ಯಾಲೆನ್ಸ್ ವರ್ಗಾವಣೆ ಹಾಗೂ ಮನೆ ನವೀಕರಣಕ್ಕಾಗಿ ಬಯಸುವವರು ಅರ್ಜಿ ಸಲ್ಲಿಸಿ ಈ ಹೊಸ ಯೋಜನೆಯ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವುದು ಹೇಗೆ?
ನೀವು ಕಡಿಮೆ ಬಡ್ಡಿ ದರದಲ್ಲಿ ಹೋಂ ಲೋನ್ ಪಡೆಯಲು ಬಯಸಿದರೆ ಡಿಜಿಟಲ್(Digital) ರೂಪದಲ್ಲಿ ಅಂದರೆ ಆನ್ಲೈನ್(Online) ಮೂಲಕವೇ ಅರ್ಜಿ ಸಲ್ಲಿಸಬಹುದು. ಬಿಒಬಿ ವರ್ಲ್ಡ್ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್(Application) ಮೂಲಕ ಅರ್ಜಿ ಸಲ್ಲಿಸಬಹುದು ಈ ಅಪ್ಲಿಕೇಶನ್ ಗೆ ಲಾಗಿನ್ ಆಗಿ ಅಥವಾ ಬ್ಯಾಂಕ್ ನಾ ಅಧಿಕೃತ ವೆಬ್ಸೈಟ್ ಗೆ ಲಾಗ್ ಇನ್(Log In) ಆಗಿ ಕೇವಲ 30 ನಿಮಿಷಗಳಲ್ಲಿ ನಿಮಗೆ ಸಾಲದ ಬಗ್ಗೆ ಅನುಮೋದನೆ ಸಿಗುತ್ತದೆ.
ಅಷ್ಟೇ ಅಲ್ಲದೆ ಗ್ರಾಹಕರು ದೇಶಾದ್ಯಂತ ಯಾವುದೇ ಬ್ಯಾಂಕ್ ಆಫ್ ಬರೋಡ ಶಾಖೆಗೆ ಭೇಟಿ ನೀಡಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.ಒಂದು ಕೋಟಿ ರೂಪಾಯಿಗಳ ಗೃಹ ಸಾಲವನ್ನು 360 ತಿಂಗಳು ಅಥವಾ 30 ವರ್ಷದ ಅವಧಿಗೆ ಪಡೆದುಕೊಳ್ಳಬಹುದು ಹೀಗೆ ಈ ಅವಧಿಯ ಸಾಲ ಪಡೆದರೆ ತಿಂಗಳಿಗೆ ಮಾಸಿಕ ಇಎಂಐ 76,891 ರೂಪಾಯಿಗಳಾಗುತ್ತವೆ.