Bank Cyber Crime: ದೇಶದ ಈ ಪ್ರತಿಷ್ಠಿತ ಬ್ಯಾಂಕಿನಲ್ಲಿ ಹಣ ಇಟ್ಟವರಿಗೆ ಆತಂಕ, ಇಲ್ಲಿದೆ ವರದಿ

Advertisement
ದೇಶದಲ್ಲಿ ಸೈಬರ್ ವಂಚನೆಯ(Cyber Crime) ಪ್ರಕರಣಗಳು ಹೆಚ್ಚಾಗುತ್ತದೆ. ಜನರಿಗೆ ತಮ್ಮ ದಾಖಲೆಗಳನ್ನು ಎಲ್ಲಿ ಸೇವ್ ಮಾಡಿ ಇಡಬೇಕು? ಎಲ್ಲಿ ಸುರಕ್ಷಿತವಾಗಿರುತ್ತೆ ಎನ್ನುವುದೇ ದೊಡ್ಡ ತಲೆ ನೋವಾಗಿದೆ. ಇದೀಗ ಈ ಸೈಬರ್ ಪ್ರಕರಣ ಹೆಚ್ ಡಿ ಎಫ್ ಸಿ ಬ್ಯಾಂಕ್(HDFC Bank) ವರೆಗೂ ತಲುಪಿದೆ. ನೀವು ಹೆಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ಈ ಸುದ್ದಿಯನ್ನು ಗಮನವಿಟ್ಟು ಓದಿ. ಹೆಚ್ ಡಿ ಎಫ್ ಸಿ ಬ್ಯಾಂಕ್ ತನ್ನ ಬ್ಯಾಂಕ್ ನಲ್ಲಿ ಇರುವ ಗ್ರಾಹಕರ ಖಾತೆಗಳ ಡಾಟಾ ಸೋರಿಕೆ ಆಗಿದೆ ಎಂದು ಮಾಹಿತಿ ನೀಡಿದೆ ಇದು ಹೆಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರನ್ನ ಕಂಗಾಲಾಗಿಸಿದೆ.
ಕಳೆದ ಕೆಲವು ದಿನಗಳಿಂದ ಡಾರ್ಕ್ ವೆಬ್ ನಲ್ಲಿ(Dark Web) ಬ್ಯಾಂಕಿನ ಆರು ಲಕ್ಷಕ್ಕೂ ಹೆಚ್ಚಿನ ಖಾತೆದಾರರ ಡಾಟಾ(Data) ಸೋರಿಕೆಯಾಗಿದೆ ಎಂಬುದಾಗಿ ವರದಿಯಾಗಿದೆ. ಸೈಬರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ನೀಡಿರುವ ಈ ಮಾಹಿತಿ ಗ್ರಾಹಕರನ್ನು ಯೋಜನೆಗೀಡು ಮಾಡಿದೆ. ಸೈಬರ್ ಕ್ರಿಮಿನಲ್ ಫೋರಂ ನಲ್ಲಿ ಗ್ರಾಹಕರ ಮಾಹಿತಿಯನ್ನು ಪೋಸ್ಟ್(Post) ಮಾಡಲಾಗಿದೆ ಇದಕ್ಕೆ ಸಂಬಂಧಿಸಿದ ವರದಿಗಳು ಹೊರಬೀಳುತ್ತಿದ್ದಂತೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೈಬರ್ ಅಪರಾಧ ಎಸಗುವವರು ಬ್ಯಾಂಕ್ ಖಾತೆದಾರರ ಹೆಸರು, ಇ-ಮೇಲ್ ಐಡಿ(E- Mail Id), ವಿಳಾಸ, ಮೊಬೈಲ್ ಸಂಖ್ಯೆ ಮೊದಲಾದ ಡಾಟಾವನ್ನು ಸೋರಿಕೆ ಮಾಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ ಬರೋಬ್ಬರಿ ಆರು ಲಕ್ಷ ಜನರ ಡಾಟಾ ಲೀಕ್ ಆಗಿದೆ ಎಂಬುದಾಗಿ ಡಾರ್ಕ್ ವೆಬ್ ನಲ್ಲಿ ಹೇಳಲಾಗಿದೆ.
Advertisement
ಈ ಬಗ್ಗೆ ಹೆಚ್ ಡಿ ಎಫ್ ಸಿ ಬ್ಯಾಂಕ್ ಹೇಳಿದ್ದೇನು?
ಈ ವಿಚಾರವಾಗಿ ಮಾಹಿತಿ ನೀಡಿರುವ ಹೆಚ್ ಡಿ ಎಫ್ ಸಿ ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್(Twitter) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಆದರೆ ಎಚ್ ಡಿ ಎಸ್ ಎಸ್ ಸಿ ಬ್ಯಾಂಕ್ ಹೇಳಿದ್ದೇನು ಗೊತ್ತಾ? ನಮ್ಮ ಗ್ರಾಹಕರ ಯಾವುದೇ ಡೇಟಾ ಸೋರಿಕೆಯಾಗಿಲ್ಲ ಎಂದು ಬ್ಯಾಂಕ್ ಸ್ಪಷ್ಟನೆ ನೀಡಿದೆ. ನಮ್ಮ ವ್ಯವಸ್ಥೆಯಲ್ಲಿ ಯಾವ ಅಕ್ರಮ ವ್ಯವಹಾರವು ನಡೆದಿಲ್ಲ ಯಾವ ಅಕ್ರಮ ಪ್ರವೇಶವು ಆಗಿಲ್ಲ ಎಂದು ಬ್ಯಾಂಕ್ ಖಡಾಖಂಡಿತವಾಗಿ ಈ ಮಾಹಿತಿಯನ್ನು ತಳ್ಳಿ ಹಾಕಿದೆ.
ಅಲ್ಲದೆ ಗ್ರಾಹಕರ ಡಾಟಾ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಬ್ಯಾಂಕಿಂಗ್ ಎಲ್ಲಾ ವ್ಯವಸ್ಥೆ ಸಂಪೂರ್ಣ ಮೇಲ್ವಿಚಾರಣೆಯಲ್ಲಿ ಸುರಕ್ಷಿತವಾಗಿದೆ ಎಂದು ಬ್ಯಾಂಕ್ ತಿಳಿಸಿದೆ. ಜೊತೆಗೆ ಗ್ರಾಹಕರ ಡೇಟಾ ಭದ್ರತೆ ನಮ್ಮ ಪ್ರಾಥಮಿಕ ಆದ್ಯತೆಯಾಗಿದೆ. ಹಾಗಾಗಿ ನಮ್ಮ ಬ್ಯಾಂಕ್ ನಲ್ಲಿ ಡಾಟಾ ಸೂರಿಕೆ ಆಗಿದೆ ಎನ್ನುವ ಸುದ್ದಿ ಸುಳ್ಳು ಎಂಬುದಾಗಿ ಹೆಚ್ ಡಿ ಎಫ್ ಸಿ ಬ್ಯಾಂಕ್ ತಿಳಿಸಿದೆ. ಇದರಿಂದ ಗ್ರಾಹಕರಿಗೆ ತುಸು ಸಮಾಧಾನ ಸಿಕ್ಕಂತಾಗಿದೆ.
Advertisement