ರಾಜ್ಯ ಸಾರಿಗೆ ವ್ಯವಸ್ಥೆಯಲ್ಲಿ ಅಗ್ರ ಸ್ಥಾನ ಪಡೆದ ಕೆಎಸ್ಆರ್ಟಿಸಿ (KSRTC) ಇಂದು ಜನರ ನಿತ್ಯ ನೆಚ್ಚಿನ ಸೇವಕನಂತೆ ಕಾರ್ಯನಿರ್ವಹಿಸುತ್ತಿದೆ. ಖಾಸಗಿ ಬಸ್ , ಟ್ಯಾಕ್ಸಿ ಎಂದು ಹಣ ಹಾಳು ಮಾಡೊ ಬದಲು ಸರಕಾರಿ ಬಸ್ ಹೋಗೋದೆ ಉತ್ತಮ ಎಂದು ಜನರು ಹೆಚ್ಚಾಗಿ ಕೆಎಸ್ ಆರ್ಟಿಸಿ ಪ್ರಯಾಣ ಮಾಡಲು ಇಚ್ಛಿಸುತ್ತಿದ್ದಾರೆ. ಅದೇ ರೀತಿ ವರ್ಷದಿಂದ ವರ್ಷಕ್ಕೆ ಸರಕಾರಿ ಬಸ್ ಪ್ರಯಾಣಿಕರು ಹೆಚ್ಚಾದಂತೆ ಬಸ್ ಗಳ ಸಂಖ್ಯೆ ಸಹ ಹೆಚ್ಚಾಗಿದೆ ಅನ್ನಬಹುದು, ಹಾಗಾದರೆ ಪ್ರಸ್ತುತ ನಮ್ಮ ರಾಜ್ಯದಲ್ಲಿ ಎಷ್ಟು ಬಸ್‌ಗಳು ಕಾರ್ಯನಿರ್ವಹಿಸುತ್ತಿದೆ? ಇನ್ನು ಅನೇಕ ಪ್ರಶ್ನೆಗಳಿಗೆ ಈ ಲೇಖನದಿಂದ ಉತ್ತರ ಕಂಡುಕೊಳ್ಳಬಹುದು.
ಇಂದು ಸರಕಾರಿ ಬಸ್ ಪ್ರಯಾಣಿಕರ ಸಂಖ್ಯೆಯೂ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಾಗಿ ಇದೆ ಎನ್ನಬಹುದು. ಇಂದು ಸರಕಾರಿ ಬಸ್ ಸ್ಟ್ಯಾಂಡ್ ಹಾಗೂ ಬಸ್ ಸುಸಜ್ಜಿತವಾಗಿಡದ ಕಾರಣ ಹೆಚ್ಚಿನ ಪ್ರಯಾಣಿಕರು ಖಾಸಗಿ ಬಸ್ ಪ್ರಯಾಣದೆಡೆ ಒಲವು ತೋರುತ್ತಿದ್ದಾರೆ. ಅದೇ ರೀತಿ ಕೆಲವು ಹಳ್ಳಿ ಪ್ರದೇಶಕ್ಕೆ ಇನ್ನು ಕೂಡ ಸರಕಾರಿ ಬಸ್ ವ್ಯವಸ್ಥೆ ಕೂಡ ಬಂದಿಲ್ಲ, ಇಷ್ಟೇಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹಲವಾರು ಸುಧಾರಣಾ ಕ್ರಮವನ್ನು ಸರಕಾರ ಜಾರಿಗೆ ತರುತ್ತಿದ್ದು ಮುಂದಿನ ದಿನದಲ್ಲಿ ಈ ಸಮಸ್ಯೆ ಪರಿಹಾರವಾಗಬಹುದು.
ಎಷ್ಟು ಸರಕಾರಿ ಬಸ್ಸುಗಳಿವೆ?
ಸದ್ಯ ರಾಜ್ಯದಲ್ಲಿ ಒಟ್ಟು 24,400ಕ್ಕೂ ಹೆಚ್ಚು ಸರ್ಕಾರಿ ಬಸ್ ಗಳಿವೆ, ಇದರಲ್ಲಿ KSRTC ದ್ದೆ 8,600 ಬಸ್ ಗಳಿವೆ . ಹೊಸ ಬಸ್ ಗಳ ಸೇರ್ಪಡೆಯೊಂದಿಗೆ ಇದರ ಸಂಖ್ಯೆ ಬದಲಾಗುತ್ತದೆ ಎನ್ನಬಹುದು. ಕೆಎಸ್ಆರ್ಟಿಸಿ ಡೀಸೆಲ್ ಗಾಗಿ ಬರೋಬ್ಬರಿ 7 ಲಕ್ಷ ರೂ. ಹಣ ಖರ್ಚಾಗುತ್ತದೆ. ಈ ಮೂಲಕ ಸರಕಾರದ ಒಂದು ಆದಾಯ ಮೂಲವಾದ ಬಸ್ ವ್ಯವಸ್ಥೆ ಸುಸಜ್ಜಿತ ವಾಗಿಡಲು ಈ ಹಣ ಅನಿವಾರ್ಯವಾಗುತ್ತದೆ. ಈ ಮೂಲಕ ದಿನಕ್ಕೆ 9 ಲಕ್ಷ ಹಣ ಖರ್ಚನ್ನು ಕೆಎಸ್ ಆರ್ಟಿಸಿ ಮಾಡಿದರೂ 17 ಲಕ್ಷ ರೂ. ಆದಾಯ ಕೂಡ ಗಳಿಸುತ್ತಿದೆ ಎಂಬುದನ್ನು ಮರೆವಂತಿಲ್ಲ.