17 ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳ ನೋಂದಣಿ ಪ್ರಮಾಣ ಪತ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್(Reserve Bank), ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಕ್ಟ್ 1934 ಸೆಕ್ಷನ್ 45-IA (6) ಅಡಿಯಲ್ಲಿ ರದ್ದುಗೊಳಿಸಿದೆ. ಎನ್ ಬಿ ಎಫ್ (NBF)ಸಿಗಳ ಕೊಆರ್ ನ್ನು ಅಂದರೆ ನೋಂದಣಿ ಪ್ರಮಾಣ ಪತ್ರವನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಬ್ಯಾಂಕ್ ಮಾಹಿತಿ ನೀಡಿದೆ.
“ಈ ಕೆಳಗೆ ಹೆಸರಿಸಲಾದ 17 ಬ್ಯಾಂಕಿಂಗ್ ಸೆಕ್ಟರ್ ಅಲ್ಲದ ಹಣಕಾಸು ಕಂಪನಿಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಅವರಿಗೆ ನೀಡಲಾದ ನೊಂದಣಿ ಪ್ರಮಾಣ ಪತ್ರವನ್ನು ರದ್ದು ಮಾಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ 45, 1934 ಎ ಐ (6) ಅಡಿಯಲ್ಲಿ ಅಧಿಕಾರಿಗಳ ಪರಿಶೀಲನೆಯಲ್ಲಿ ಕೊ ಆರ್ ರದ್ದುಪಡಿಸಲಾಗಿದೆ”. ಎಂಬುದಾಗಿ ಆರ್ ಬಿ ಐ ಬರೆದುಕೊಂಡಿದೆ.
ಅಂದ ಹಾಗೆ ಆರ್ ಬಿ ಐ ಹತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆಗಳ ಪಟ್ಟಿ ಮಾಡಿದ್ದು ಅವುಗಳ ಜೊತೆಗೆ ಇನ್ನು ಮುಂದೆ ಯಾವುದೇ ವ್ಯವಹಾರ ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ರ್‌ಬಿಐ ಪಟ್ಟಿ ಮಾಡಿರುವ 10 ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆಗಳ ಹೆಸರು ಈ ರೀತಿ ಇವೆ.
ಧನ್‌ಬಾದ್ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್
ಸೂರ್ಯ ವಾಣಿಜ್ಯ & ಇನ್ವೆಸ್ಟ್‌ಮೆಂಟ್ ಲಿಮಿಟೆಡ್
ಸಿನ್ ಪ್ಯಾಕ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್
ಬಿ ಡಿ ವಾಣಿಜ್ಯ ಉದ್ಯೋಗ್ ಪ್ರೈವೇಟ್ ಲಿಮಿಟೆಡ್
ಜಯಮ್ ವ್ಯಾಪಾರ್ ಪ್ರೈವೇಟ್ ಲಿಮಿಟೆಡ್, ಮತ್ತು ಜೆಎಂ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್
ಜೈನೆಕ್ಸ್ ಇಂಡಿಯಾ ಲಿಮಿಟೆಡ್
ಜಯಮ್ ವ್ಯಾಪಾರ್ ಪ್ರೈವೇಟ್ ಲಿಮಿಟೆಡ್, ಮತ್ತು ಜೆಎಂ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್
ವೈಡ್ ರೇಂಜ್ ಸೇಲ್ಸ್ ಪ್ರೈ. ಲಿಮಿಟೆಡ್
ಕ್ವೆನ್ಸಿ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್
ಎಸ್ ಜಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್
ಅದೇ ರೀತಿಯಾಗಿ ನೋಂದಾಯಿಸದೆ ಇರುವ ಇನ್ನೂ ಎರಡು ಕೋರ್ ಹೂಡಿಕೆ ಕಂಪನಿಗಳು ನ್ಯೂ ಏಜ್ ಇಂಪೋರ್ಟ್ ಪ್ರೈವೇಟ್ ಲಿಮಿಟೆಡ್, ಹಾಗೂ ಜುಂಬಿಲ್ಯಂಟ್ ಸೆಕ್ಯೂರಿಟಿ ಪ್ರೈವೇಟ್ ಲಿಮಿಟೆಡ್ ಕೂಡ ತಮ್ಮ ನೋಂದಣಿ ಕಳೆದುಕೊಂಡಿದೆ. ಇದರ ಹೊರತಾಗಿ, ಐದು ಎನ್ ಬಿ ಎಫ್ ಸಿ(NBFC) ಗಳು, ಸ್ವಯಂಘೋಷಿತ ಸ್ಟ್ರೈಕ್ ವಿಲಿನ ಮೊದಲಾದ ಕಾರಣಕ್ಕೆ ಸ್ಥಗಿತಗೊಂಡಿವೆ. ಅ ಐದು ಸಂಸ್ಥೆಗಳು ಈ ರೀತಿ ಇದೆ.
ಶ್ರೀರಾಮ್ ಸಿಟಿ ಯೂನಿಯನ್ ಫೈನಾನ್ಸ್ ಲಿಮಿಟೆಡ್
ಶ್ರೀರಾಮ್ ಕ್ಯಾಪಿಟಲ್ ಲಿಮಿಟೆಡ್
ಡಿಆರ್‌ಪಿ ಟ್ರೇಡಿಂಗ್ & ಇನ್ವೆಸ್ಟ್‌ಮೆಂಟ್ ಪ್ರೈವೇಟ್ ಲಿಮಿಟೆಡ್
ಜಲಸಾಗರ್ ಸೇಲ್ಸ್ ಏಜೆನ್ಸಿ ಪ್ರೈವೇಟ್ ಲಿಮಿಟೆಡ್
ಆಂಟ್ರಿಕ್ಷ್ ಕಾಮರ್ಸ್ ಪ್ರೈವೇಟ್ ಲಿಮಿಟೆಡ್
ಕಳೆದ ವರ್ಷ 3 nbfc ಗಳಿಂದ ಅವರ ನೋಂದಣಿ ಪ್ರಮಾಣ ಪತ್ರವನ್ನು ಆರ್‌ಬಿಐ(RBI) ಹಿಂತೆಗೆದುಕೊಂಡಿತ್ತು. ಇದರ ಜೊತೆಗೆ ಇತರ ಐದು ಸಹಕಾರಿ ಬ್ಯಾಂಕ್ ಗಳು ಆರ್ಥಿಕ ಸ್ಥಿತಿ ಹದರಿಟ್ಟಿರುವ ಹಿನ್ನೆಲೆಯಲ್ಲಿ ಕೆಲವು ನಿರ್ಬಂಧಗಳನ್ನು ಆರ್‌ಬಿಐ ಹೇರಿದ್ದು ಆರು ತಿಂಗಳ ವರೆಗೆ ಈ ನಿರ್ಬಂಧಗಳು ಜಾರಿಯಲ್ಲಿ ಇರುತ್ತವೆ ಎಂದು ಆರ್‌ಬಿಐ ತಿಳಿಸಿದೆ.
ನಿರ್ಬಂಧ ಪಾಲನೆ ಮಾತ್ರವಲ್ಲದೆ ಆ ಐದು ಬ್ಯಾಂಕುಗಳು ಆರ್‌ಬಿಐ ನ ಅನುಮತಿ ಇಲ್ಲದೆ ಗ್ರಾಹಕರಿಗೆ ಸಾಲ ನೀಡುವುದು ಹೂಡಿಕೆ ಮಾಡಿಸಿಕೊಳ್ಳುವುದು ಅಥವಾ ಯಾವುದಾದರೂ ಆಸ್ತಿಯನ್ನು ವರ್ಗಾಯಿಸುವುದು ಅಥವಾ ವಿಲೇವಾರಿ ಮಾಡುವುದು ಇವುಗಳನ್ನು ಮಾಡುವಂತಿಲ್ಲ. ಯು ಆರ್ ಬಿ ಐ ಇಂದ ನಿರ್ಬಂಧನೆಗೆ ಒಳಗಾಗಿ ಆರು ತಿಂಗಳ ನಿರ್ಬಂಧ ಹೊಂದಿರುವ ಸಂಸ್ಥೆಗಳಲ್ಲಿ ಕರ್ನಾಟಕದ ಒಂದು ಕಂಪನಿಯೂ ಸೇರಿದೆ. ಅವುಗಳೆಂದರೆ,
HCBL ಸಹಕಾರಿ ಬ್ಯಾಂಕ್ ಲಕ್ನೋ (ಉತ್ತರ ಪ್ರದೇಶ)
ಆದರ್ಶ ಮಹಿಳಾ ನಗರಿ ಸಹಕಾರಿ ಬ್ಯಾಂಕ್ ಲಿಮಿಟೆಡ್, ಔರಂಗಾಬಾದ್ (ಮಹಾರಾಷ್ಟ್ರ)
ಶಿಂಷಾ ಸಹಕಾರ ಬ್ಯಾಂಕ್ ನಿಯಮಿತ, ಮದ್ದೂರು
ಉರವಕೊಂಡ ಕೋ-ಆಪರೇಟಿವ್ ಟೌನ್ ಬ್ಯಾಂಕ್, ಉರವಕೊಂಡ, (ಅನಂತಪುರ ಜಿಲ್ಲೆ, ಆಂಧ್ರಪ್ರದೇಶ)
ಶಂಕರರಾವ್ ಮೋಹಿತೆ ಪಾಟೀಲ್ ಕೋ-ಆಪರೇಟಿವ್ ಬ್ಯಾಂಕ್, ಅಕ್ಲುಜ್ (ಮಹಾರಾಷ್ಟ್ರ)
ಗ್ರಾಹಕರು ಈ ಬ್ಯಾಂಕ್ ಗಳಲ್ಲಿ ರೂ.5,000 ರೂಗಳವರೆಗೆ ಹಣ (ಬ್ಯಾಂಕ್ ಖಾತೆಯಲ್ಲಿ ಇದ್ದರೆ) ಹಿಂಪಡೆಯಬಹುದು. ಇನ್ನು ಆರ್‌ಬಿಐ ಈ 5 ಸಹಕಾರಿ ಬ್ಯಾಂಕ್‌ಗಳ ಮೇಲೆ ನಿರ್ಬಂಧ ಹೇರಿಕೆಯಿಂದಾಗಿ, ಗ್ರಾಹಕರ ಹಣದ ಬಗ್ಗೆ ಏನು ತೀರ್ಮಾನ ಕೈಗೊಳ್ಳುತ್ತೆ ಕಾದು ನೋಡಬೇಕು