ಅಂಚೆ ಇಲಾಖೆಯಲ್ಲಿ ಕಡಿಮೆ ಹಣ ಹೂಡಿಕೆ ಮಾಡಿ ಹೆಚ್ಚು ಬಡ್ಡಿ ಪಡೆಯಬಹುದು, ಉಳಿತಾಯ ಯೋಜನೆ (Post Office Saving Schemes) ಬಹಳ ವಿಶೇಷವಾಗಿದ್ದು, ಪೋಸ್ಟ್ ಆಫೀಸ್ ಎಲ್ಲಾ ವಯಸ್ಸಿನ ಜನರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಗಳನ್ನು ನಡೆಸುತ್ತದೆ.
ಅಂಚೆ ಇಲಾಖೆಯಲ್ಲಿ ಬ್ಯಾಂಕ್ ಜೋಡಣೆ ಹೇಗೆ?
ಬ್ಯಾಂಕ್ ಖಾತೆಯ ಸಂದರ್ಭದಲ್ಲಿ ಖಾತೆದಾರರು ಇಸಿಎಸ್-1 ನಮೂನೆಯನ್ನು ಹೊಂದಿ ರದ್ದಾದ ಚೆಕ್ ಅಥವಾ ಬಡ್ಡಿ ಮೊತ್ತವನ್ನು ಯಾವ ಬ್ಯಾಂಕ್ಗೆ ಕ್ರೆಡಿಟ್ ಆಗಲಿ ಎಂದು ಬಯಸುತ್ತಾರೋ ಆ ಬ್ಯಾಂಕ್ ಖಾತೆಯ ಪಾಸ್‌ಬುಕ್‌ನ ನಕಲು ಪ್ರತಿಯೊಂದಿಗೆ ಅರ್ಜಿ ಸಲ್ಲಿಸಿ,ನೋಂದಣಿ ಮಾಡಿಕೊಳ್ಳಬೇಕು.
ಅಂಚೆ ಇಲಾಖೆಯಲ್ಲಿ ಖಾತೆದಾರರಿಗೆ ಆನ್ ಲೈನ್ ವಹಿವಾಟು ಸೌಲಭ್ಯ:
ಅಂಚೆ ಇಲಾಖೆ ಖಾತೆದಾರರು ಸ್ಮಾರ್ಟ್ ಫೋನ್‌ನಲ್ಲಿಯು ಅರ್ಜಿ ಸಲ್ಲಿಸಬಹುದು, ಪೋಸ್ಟ್ ಮೊಬೈಲ್ ಬ್ಯಾಕಿಂಗ್ (Post Mobile Banking) ಅಪ್ಲಿಕೇಶನ್ ನ್ನು ಡೌನ್‌ಲೋಡ್ ಮಾಡಿ, ಪಾಸ್‌ಬುಕ್‌ನಲ್ಲಿ ಲಭ್ಯವಿರುವ ಮಾಹಿತಿ ಫೈಲ್ ಮತ್ತು ಪರ್ಸನಲ್ ಐಡಿ ಮತ್ತು ಇಂಟರ್‌ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಪಿನ್ ಸಂಖ್ಯೆಯನ್ನು ಬಳಸಿಕೊಂಡು ನೋಂದಾವಣೆ ಮಾಡಿಕೊಳ್ಳಬೇಕು.
ಟೈಮ್ ಡೆಪಾಸಿಟ್ ಅಕೌಂಟ್:
ಇದು ಬ್ಯಾಂಕ್ ನಲ್ಲಿ ಫಿಕ್ಸಡ್ ಡೆಫಾಸಿಟ್ ಗೆ ಸರಿಸಮನಾದ ಯೋಜನೆ ರೀತಿಯಲ್ಲಿ ಅಂಚೆ ಕಚೇರಿಯಲ್ಲಿ ಬೇಕಾದ ಅವಧಿ ವರ್ಷಗಳ ಅವಧಿಗೆ ಡೆಫಾಸಿಟ್ ಖಾತೆ ತೆರೆಯಬಹುದು, ಗ್ರಾಹಕರಿಗೆ ಕಡಿಮೆ ಹಣ ಪಾವತಿಸಿ ಹೆಚ್ಚು ಆದಾಯ ಪಡೆಯಬಹುದು.
ಎಷ್ಟು ಹೂಡಿಕೆ ಮಾಡಬಹುದು?
ಅಂಚೇ ಇಲಾಖೆಯ ಈ ಯೋಜನೆಯಲ್ಲಿ , 1000 ರೂಪಾಯಿಯಿಂದ ಹೂಡಿಕೆ ಮಾಡಬಹುದು. ಈ ಯೋಜನೆ ಸುಮಾರು ಐದು ವರ್ಷದ್ದಾಗಿದ್ದು, ಇದರ ನಂತರ ಪ್ರತಿ ತಿಂಗಳು ಹಣವನ್ನು ಪಡೆಯಬಹುದು. ಪ್ರತಿ ತಿಂಗಳು 9000 ರೂಪಾಯಿ ಸಿಗುವ ಯೋಜನೆಯು ಇದೆ, ಈ ಯೋಜನೆಯಲ್ಲಿ 15 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿ ನೀವು ಪ್ರತಿ ತಿಂಗಳು 8,875 ರೂಪಾಯಿಗಳ ಅಂದರೆ 9000 ಸಾವಿರ ರೂಪಾಯಿಗಳ ಆದಾಯ ಗಳಿಸುತ್ತೀರಿ.
ಉಳಿತಾಯ ಖಾತೆ ಹೇಗೆ?
ಪೋಸ್ಟ್ ಆಫೀಸ್ ನಲ್ಲಿ ಕೇವಲ 20 ರೂ. ಜಮೆ ಮಾಡೋ ಮೂಲಕ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ 50ರೂ. ಇರುವಂತೆ ನಿರ್ವಹಣೆ ಮಾಡೋದು ಅಗತ್ಯ. ಈ ಖಾತೆಯಿಂದ ಆನ್ಲೈನ್ ಹಣ ವರ್ಗಾವಣೆಗೂ ಅವಕಾಶವಿದೆ ಎನ್ನಲಾಗಿದೆ. ಹೂಡಿಕೆದಾರರು ತಮ್ಮಲ್ಲಿರುವ ಮೊತ್ತವನ್ನು ಇಲ್ಲಿ ಹೂಡಿಕೆ ಮಾಡಬಹುದು. ಇದರಲ್ಲಿ ಹೂಡಿಕೆ ಮಾಡಲು ಗರಿಷ್ಠ ಮಿತಿ ಇಲ್ಲ ನೀವು ಎಷ್ಟು ಸಾಧ್ಯವೋ ಅಷ್ಟು ಹೂಡಿಕೆ ಮಾಡಿ ಬಡ್ಡಿ ಗಳಿಸಿ, ಅಂಚೆ ಇಲಾಖೆಯಲ್ಲಿ ಮಂತ್ಲಿ ಇನ್ ಕಮ್ ಸ್ಕೀಮ್ ಮೇಲೆ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಉತ್ತಮ ಬಡ್ಡಿ ಹಣವನ್ನು ಪಡೆಯಬಹುದು.
ಹಾಗಾದರೆ ಈ ಸ್ಕೀಂ ನ ಖಾತೆ ತೆರೆಯುವುದು ಹೇಗೆ..?
ಮೊಬೈಲ್ ಮೂಲಕವೂ ಖಾತೆ ತೆಗೆಯಬಹುದಾಗಿದ್ದು, 10 ವರ್ಷ ಮೇಲ್ಪಟ್ಟ ಮಕ್ಕಳ ಹೆಸರಲ್ಲೂ ಖಾತೆ ತೆರೆಯಬಹುದಾಗಿದೆ. ಐಪಿಬಿಪಿ ಮೊಬೈಲ್ ಬ್ಯಾಂಕಿಂಗ್ ಆಪ್ ಡೌನ್ ಲೋಡ್ ಮಾಡಿಕೊಂಡು , ನಿಮ್ಮ ಮಾಹಿತಿಗಳನ್ನು ನೀಡಿ ನೊಂದಣಿ ಗೊಳಿಸಿ.