ಷೇರು ಮಾರುಕಟ್ಟೆಯಲ್ಲಿ ಆಗಾಗ ಬದಲಾವಣೆಯಾಗೋದು ತೀರ ಸಾಮಾನ್ಯ , ಈಗ ಬ್ಯಾಂಕಿನ ದೈನಿಕ ವ್ಯವಹಾರ ಕೂಡ ಶೇರು ಮಾರುಕಟ್ಟೆಯ ವ್ಯವಹಾರ ಆಧಾರದಲ್ಲಿನಿಂತಿದ್ದು ಸದ್ಯ ಎಸ್ (Yes Bank) ಬ್ಯಾಂಕಿನ ಸ್ಥಿತಿಯೂ ಷೇರು ಮಾರುಕಟ್ಟೆಯಲ್ಲಿ ಯೆಸ್ ಬ್ಯಾಂಕ್ ಶೂಚನೀಯವಾಗಿದೆ ಎನ್ನಬಹುದು. ಮಾ.13ರಂದು ಬೆಳಗ್ಗೆ ಷೇರು ಮಾರುಕಟ್ಟೆಯಲ್ಲಿ ಖಾಸಗಿ ಬ್ಯಾಂಕ್ ಷೇರುಗಳು ಶೇ.10.35ರಷ್ಟು ಕುಸಿದವು. ಅದರ ನಂತರ ಕಂಪನಿಯ ಷೇರಿನ ಬೆಲೆ ಬಿಎಸ್‌ಇಯಲ್ಲಿ ರೂ 14.81 ರ ಮಟ್ಟಕ್ಕೆ ಕುಸಿಯಿತು ಹೀಗಾಗಿ ಎಸ್ ಬ್ಯಾಂಕಿನ ವ್ಯವಹಾರಕ್ಕೆ ಈ ಬೆಳವಣಿಗೆ ಕೆಟ್ಟ ಪ್ರಭಾವ ಬೀರಲಿದೆ ಎನ್ನಲಾಗಿದೆ.
3 ವರ್ಷಗಳ ಲಾಕ್-ಇನ್ ಅವಧಿ ಮಾ. 13 ರಂದು ಕೊನೆಗೊಳ್ಳುತ್ತಿದ್ದು ಇದೇ ಕಾರಣಕ್ಕೆ ಬೆಳಗ್ಗೆ ಯೆಸ್ ಬ್ಯಾಂಕ್ ಷೇರುಗಳಲ್ಲಿ ಭಾರಿ ಕುಸಿತವಾಗಿದೆ.
ಯಾವೆಲ್ಲ ಬ್ಯಾಂಕ್‌ಗಳು ಹಣ ಹೂಡಿಕೆ ಮಾಡಿವೆ:
ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಫೆಡರಲ್ ಬ್ಯಾಂಕ್ ಇತ್ಯಾದಿಗಳು 3 ವರ್ಷಗಳ ಹಿಂದೆ ಯೆಸ್ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿದ್ದವು. ಈ ಎಲ್ಲಾ ಹೂಡಿಕೆದಾರರ ಲಾಕ್-ಇನ್ ಅವಧಿಯು ಮಾರ್ಚ್ 13, 2023 ರಂದು ಕೊನೆಗೊಳ್ಳಲಿದೆ. ಈ ಎಲ್ಲಾ ಹೂಡಿಕೆದಾರರು ಯೆಸ್ ಬ್ಯಾಂಕ್‌ನಿಂದ ನಿರ್ಗಮಿಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ಬ್ಯಾಂಕುಗಳು ಯೆಸ್ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿದಾಗ, ಆಗ ಒಂದು ಷೇರಿನ ಬೆಲೆ ಸುಮಾರು 10 ರೂ. ಇತ್ತು ಈಗ ಅದರ ಬೆಲೆ 15 ರೂ. ಹಾಗೇ ಸಮೀಪಿಸಿದೆ. ಒಂದು ವೇಳೆ ಈ ಎಲ್ಲ ಬ್ಯಾಂಕುಗಳು ತಮ್ಮ ಷೇರನ್ನು ವಾಪಾಸ್ಸು ಪಡೆದರೆ ಎಸ್ ಬ್ಯಾಂಕ್ ಮೇಲೆ ಈ ನಿರ್ಧಾರಗಳು ವ್ಯತಿರಿಕ್ತವಾಗಿ ಪರಿಣಾಮ ಬೀರುವ ಸಾಧ್ಯತೆ ಸಹ ಇದೆ ಎನ್ನಲಾಗಿದೆ.
ಮೂರು ವರ್ಷಗಳ ಲಾಕ್-ಇನ್ ಅವಧಿಯ ಅಂತ್ಯದ ಪ್ರಶ್ನೆಗೆ, ಪ್ರಾಫಿಟ್ ಮಾರ್ಟ್ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ಅವಿನಾಶ್ ಗೋರಕ್ಷಕರ್ (Avinash Gorakshakar) ಸಷ್ಟನೆ ನೀಡಿದ್ದಾರೆ. “ಮೂರು ವರ್ಷಗಳ ಲಾಕ್-ಇನ್ ಅವಧಿಯ ಅಂತ್ಯವು ಷೇರು ಮಾರುಕಟ್ಟೆಯಲ್ಲಿ ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆ ಹೆಚ್ಚಿಸಲು ಸಹಕಾರಿಯಾಗಲಿದೆ. ಲಾಕ್-ಇನ್ ಅವಧಿಯ ಅಂತ್ಯದ ನಂತರ, ಈ ಎಲ್ಲಾ ಬ್ಯಾಂಕುಗಳು ಯೆಸ್ ಬ್ಯಾಂಕ್‌ನಿಂದ ತಮ್ಮ ಪಾಲನ್ನು ಕಡಿಮೆ ಮಾಡುತ್ತವೆ ಎಂದು ನಿರೀಕ್ಷಿಸಲಾಗಿದೆ.
ಆನಂದ್ ರಾಠಿ, ತಾಂತ್ರಿಕ ಸಂಶೋಧನಾ ವಿಭಾಗದ ಹಿರಿಯ ವ್ಯವಸ್ಥಾಪಕ ಗಣೇಶ್ ಡೋಂಗ್ರೆ ಹೇಳುವ ಪ್ರಕಾರ “ಈ ಷೇರುಗಳನ್ನು ಹೊಂದಿರುವ ಯಾವುದೇ ಹೂಡಿಕೆದಾರರು 15 ರೂಪಾಯಿಗಳ ಸ್ಟಾಕ್ ಲಾಸ್ ಅನ್ನು ಅಂದಾಜು ಷೇರೆಂದು ಅಂದುಕೊಂಡಿರುತ್ತಾರೆ. ಅದರ ವ್ಯವಹಾರದ ಆಧಾರ ಮೇಲೆ ಬ್ಯಾಂಕಿನ ವಹಿವಾಟುಗಳು ನಿಂತಿರುತ್ತದೆ. ಮುಂದಿನ ದಿನದಲ್ಲಿ ಲಾಕ್ ಇನ್ ಅವಧಿಯನ್ನು ಬ್ಯಾಂಕುಗಳು ಮುಂದುವರೆಸಿದರೆ ಎಸ್ ಬ್ಯಾಂಕಿನ ವ್ಯವಹಾರ ಕೂಡ ಸುಗಮವಾಗುತ್ತದೆ.