Repo Rate: ರೆಪೊ ದರ ಏರಿದರೂ ಸಾಲದ ಬಡ್ಡಿ ಕಡಿಮೆ ಮಾಡಿಲ್ಲ ಈ ಬ್ಯಾಂಕ್

Advertisement
ಎಸ್ ಅಂದಹಾಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂದರೆ (ಆರ್‌ಬಿಐ) ಈಗಾಗಲೇ ನಿರಂತರವಾಗಿ ಆರು ಬಾರಿ ರೆಪೋ ದರ (Repo Rate) ವನ್ನು ಹೆಚ್ಚಿಸಿತ್ತು. ಇದರ ಪರಿಣಾಮ ಪ್ರತಿ ಬಾರಿ ಆರ್‌ಬಿಐ ರೆಪೋ ದರ (RBI Repo Rate) ಏರಿಸಿದಾಗಲೂ ಬ್ಯಾಂಕುಗಳು ಕೂಡಾ ಸಾಲದ ಬಡ್ಡಿದರ ಅದರಲ್ಲೂ ಗೃಹ ಸಾಲದ ಬಡ್ಡಿದರವನ್ನು ಹೆಚ್ಚಿಸುತ್ತ ಬಂದಿದೆ. ಜೊತೆಗೆ ಎಫ್‌ಡಿ ಬಡ್ಡಿದರವನ್ನು ಕೂಡಾ ಏರಿಸಿದೆ.
Advertisement
ಇವುಗಳ ಮದ್ಯೆ ಇದೊಂದು ಬ್ಯಾಂಕ್ ಮಾತ್ರ ಸಾಲದ ಬಡ್ಡಿದರ (Interest Rate) ವನ್ನು ಇಳಿಸುವ ಮೂಲಕ ವಿಶೇಷತೆ ತೋರಿದೆ. ಈ ನಿಯಮ ಮಾರ್ಚ್ 13ರಿಂದ ಜಾರಿಗೆ ಬರುವಂತೆ ನಿರ್ದೇಶನ ಮಾಡಿದ್ದು, ಗೃಹ ಸಾಲದ ಬಡ್ಡಿದರವನ್ನು ಕಡಿಮೆ ಮಾಡಿದೆ.
ಗೃಹ ಸಾಲ ಮಾಡಿರುವವರು, ಹಾಗು ಗೃಹ ಸಾಲ ಮಾಡಿ ಮನೆ ಖರೀದಿ ಮಾಡಿರುವವರಿಗೆ ಬ್ಯಾಂಕ್ ಆಫ್ ಮಹಾರಾಷ್ಟ್ರ ಈ ವಿಧವಾಗಿ ಸಿಹಿಸುದ್ದಿಯನ್ನು ನೀಡಿದೆ. ಜೊತೆಗೆ ಬ್ಯಾಂಕ್ ಗೃಹ ಸಾಲದ ಬಡ್ಡಿದರವನ್ನು ಶೇಕಡ 8.4ಕ್ಕೆ ಇಳಿಸಿದ್ದು, ಇದು ಬ್ಯಾಂಕಿಂಗ್ ವಲಯದಲ್ಲೇ ಅತೀ ಕಡಿಮೆ ಬಡ್ಡಿದರದ ಗೃಹಸಾಲವಾಗಿ ಆಯ್ಕೆಯಾಗಿದೆ. ಈ ವಿಚಾರ ಕುರಿತು ಬ್ಯಾಂಕ್ ಆಫ್ ಮಹಾರಾಷ್ಟ್ರ (Bank of Maharashtra) ಅಥವಾ ಬಿಒಎಂ ಹೇಳಿಕೆ ಮೂಲಕ ವರಧಿಮಾಡಿದೆ.
Advertisement