Karnataka Times
Trending Stories, Viral News, Gossips & Everything in Kannada

Reserve Bank New Rule: ಬ್ಯಾನ್ ಆಗಿರುವ 500 1000 ನೋಟುಗಳ ಮೇಲೆ ರಿಸರ್ವ್ ಬ್ಯಾಂಕ್ ಹೊಸ ಆದೇಶ

Advertisement

ಬ್ಯಾನ್ ಆಗಿರುವ ಹಳೆಯ (Old) 500 1000 ರೂಪಾಯಿ ಕರೆನ್ಸಿ ನೋಟುಗಳನ್ನು(currency Notes) ಈಗ ಮತ್ತೆ ಬದಲಾವಣೆ (Exchange) ಮಾಡಬಹುದಾ? ಈ ಆಯ್ಕೆ ಇನ್ನು ಕೂಡ ಇದ್ಯಾ? ಏನಿದು ಸುದ್ದಿ ಎಂದು ಕನ್ಫೂಸ್​ (Confuse) ಆಗ್ಬೇಡಿ. ಕಂಡಿತ ನೀವು ಈ ವಿಚಾರವನ್ನು ತಿಳಿದುಕೊಳ್ಳಬೇಕು. ಹೌದು ಹಳೆಯ ಕರೆನ್ಸಿ ನೋಟುಗಳ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ.

ಇನ್ನು ಹಳೆಯ ಕರೆನ್ಸಿ ನೋಟುಗಳನ್ನು ಪರಿವರ್ತಿಸಲು ಆರ್‌ಬಿಐ ಗಡುವನ್ನು ಇದೀಗ ವಿಸ್ತರಿಸಿದ್ದು ಆದರೆ ಈ ಸೌಲಭ್ಯ ವಿದೇಶಿಗರಿಗೆ (foreigner’s) ಮಾತ್ರ ಅನ್ವಯಿಸುತ್ತದೆ ಎಂಬುದು ವೈರಲ್​ (Vrial) ಆದ ಆರ್​ಬಿಐ ಪತ್ರದಲ್ಲಿ (RBI Letter) ಕಾಣುತ್ತದೆ. ಇನ್ನು 8 ನವೆಂಬರ್ 2016 ರಂದು ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣವನ್ನು ಘೋಷಿಸಿದ್ದು ಹಳೆಯ 500 1000 ನೋಟುಗಳು ಮಾನ್ಯವಾಗಿಲ್ಲ. ಆದರೆ ಮಾತ್ರ ನೋಟು ಅಮಾನ್ಯೀಕರಣದ ಬಳಿಕ ಕೇಂದ್ರವು ಕರೆನ್ಸಿ ನೋಟುಗಳ ವಿನಿಮಯಕ್ಕೆ ಅವಕಾಶ ನೀಡಿತು.

Advertisement

500, 1000 ರೂಪಾಯಿ ನೋಟುಗಳನ್ನು ಬ್ಯಾಂಕ್‌ಗೆ (Bank) ಹೋಗಿ ಬದಲಾಯಿಸಿಕೊಳ್ಳಬಹುದು. ನೋಟು ರದ್ದತಿ ನಿರ್ಧಾರದ ಬಳಿಕ ಹಲವರು ತಮ್ಮ ಹಳೆಯ ನೋಟುಗಳನ್ನು ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿ ಹೊಸ ನೋಟುಗಳಿಗೆ ಬದಲಾಯಿಸಿಕೊಂಡರು. ಆದರೆ ಇದೀಗ ಆರ್ ಬಿಐ ವಿದೇಶಿಯರಿಗೆ ಮಾತ್ರ ಹಳೆಯ ರೂ. 500 ನೋಟುಗಳು, ರೂ. 1000 ನೋಟು ಬದಲಾಯಿಸಿಕೊಳ್ಳಲು ಅನುಮತಿ ನೀಡಿದ್ದಾರೆ ಎಂಬುವಂತಹ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸದ್ಯ ಕೇಂದ್ರ ಸರ್ಕಾರದ ಪಿಐಬಿ ಫ್ಯಾಕ್ಟ್ ಚೆಕ್ ಇದಕ್ಕೆ ಪ್ರತಿಕ್ರಿಯಿಸಿದೆ. ಸೋಶಿಯಲ್ ಮೀಡಿಯಾಗಳಲ್ಲಿ(Social Media) ವೈರಲ್ ಆಗುತ್ತಿರುವ ಆರ್‌ಬಿಐ ಪತ್ರ ನಕಲಿ. ಹಳೆಯ ರೂ. 500 ನೋಟುಗಳು ರೂ. 1000 ನೋಟು ವಿನಿಮಯಕ್ಕೆ ಯಾವುದೇ ಸಾಧ್ಯತೆ ಇಲ್ಲ ಎಂದು ತಿಳಿದುಬಂದಿದ್ದು ಈ ಪತ್ರ ಸಂಪೂರ್ಣ ನಕಲಿ ಎಂದು ಆರ್‌ಬಿಐ ತಿಳಿಸಿದೆ.

ವಿದೇಶಿಗರು ತಮ್ಮ ಹಳೆಯ ರೂ. 500 ನೋಟುಗಳು ರೂ. 1000 ನೋಟುಗಳ ವಿನಿಮಯದ ಗಡುವು 2017ರಲ್ಲಿಯೇ ಮುಗಿದಿದೆ ಎಂದು ಸ್ಪಷ್ಟಪಡಿಸಲಾಗಿದ್ದು ಮತ್ತೊಮ್ಮೆ ಹಳೆಯ ನೋಟುಗಳ ಬದಲಾವಣೆಗೆ ಸಂಬಂಧಿಸಿದಂತೆ ಯಾವುದೇ ಗಡುವು ನೀಡಲಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಆರ್‌ಬಿಐ ಪತ್ರವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿಲ್ಲ. ಇದು ಕಂಡತಿ ನಕಲಿ ಎನ್ನಲಾಗಿದೆ.

ಹಾಗಾದರೆ ನೀವೂ ಇಂತಹ ಮೆಸೇಜ್ ನೋಡಿದರೆ ಹುಷಾರಾಗಿರಿ.ಏಕೆಂದರೆ ಅಂತಹ ಸಂದೇಶಗಳು ಮೋಸದ ಲಿಂಕ್‌ಗಳೊಂದಿಗೆ ಇರುತ್ತವೆ. ಹೌದು ನೀವು ಅಂತಹ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಬಹುದು ಎನ್ನಲಾಗಿದೆ. ಇನ್ನು ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆರ್‌ಬಿಐ ಪತ್ರ ಇದು ಸಂಪೂರ್ಣ ನಕಲಿ. ಅದಕ್ಕೂ ಆರ್‌ಬಿಐಗೂ ಯಾವುದೇ ಸಂಬಂಧವಿಲ್ಲ ಎಂಬುದು ಅಧಿಕೃತವಾಗಿದೆ.

Advertisement

Leave A Reply

Your email address will not be published.