ಫಿಕ್ಸೆಡ್ ಡಿಪೋಸಿಟ್ ಯೋಜನೆಗಳಲ್ಲಿ (Fixed Deposit Scheme) ಹಣವನ್ನ ಹೂಡಿಕೆ ಮಾಡುವುದು ಅತ್ಯಂತ ಸುರಕ್ಷಿತ ಹಾಗೂ ದೀರ್ಘಕಾಲಿಕ ಹೂಡಿಕೆಯ ವಿಚಾರಕ್ಕೆ ಬಂದಾಗ ಸಾಕಷ್ಟು ಲಾಭದಾಯಕ ಎಂಬುದಾಗಿ ಹೇಳಬಹುದಾಗಿದೆ. ವಿಶೇಷವಾಗಿ ಉತ್ತಮ ಬಡ್ಡಿದರವನ್ನು ರಿಟರ್ನ್ ರೂಪದಲ್ಲಿ ನೀಡುವಂತಹ ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಮಾಡುವುದು ಉತ್ತಮ ನಿರ್ಧಾರವಾಗಿರುತ್ತದೆ. ಅದೇ ರೀತಿಯಲ್ಲಿ ಈ ಲೇಖನದ ಮೂಲಕ ನಾವು ನಿಮಗೆ ಮೂರು ವರ್ಷಗಳ ಮೆಚುರಿಟಿಯ ಅವಧಿಯಲ್ಲಿ ಎಂಟು ಪ್ರತಿಶತಕ್ಕಿಂತ ಹೆಚ್ಚಿನ ಬಡ್ಡಿದರವನ್ನು ನಮ್ಮ ಹೂಡಿಕೆ ಮೇಲೆ ನೀಡುವ ಬ್ಯಾಂಕುಗಳ ಬಗ್ಗೆ ಇಲ್ಲಿದೆ ಮಾಹಿತಿ.
ಒಂದು ವೇಳೆ ನೀವು ಕೂಡ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೂಡಿಕೆ ಮಾಡುವಂತಹ ಇಚ್ಛೆಯನ್ನು ಹೊಂದಿದ್ದರೆ ಖಂಡಿತವಾಗಿ ಈ ಬ್ಯಾಂಕುಗಳು ನಿಮಗೆ ಉತ್ತಮ ರಿಟರ್ನ್ ನೀಡುವಂತಹ ಸಾಮರ್ಥ್ಯವನ್ನು ಹೊಂದಿವೆ.
ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಈ ಸ್ಮಾಲ್ ಫೈನಾನ್ಸ್ ಬ್ಯಾಂಕಿನಲ್ಲಿ ಮೂರು ವರ್ಷಗಳ ಕಾಲ ಫಿಕ್ಸೆಡ್ ಡೆಪಾಸಿಟ್ ಯೋಜನೆ (Fixed Deposit Scheme) ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ 8.25 ಪ್ರತಿಶತ ಬಡ್ಡಿದರವನ್ನು ಪಡೆದುಕೊಳ್ಳಬಹುದಾಗಿದ್ದು, ಹಿರಿಯ ನಾಗರಿಕರಿಗೆ 0.50% ಹೆಚ್ಚುವರಿ ಬಡ್ಡಿಯನ್ನು ಇಲ್ಲಿ ಆಫರ್ ಮಾಡಲಾಗುತ್ತದೆ. 10 ಲಕ್ಷ ರೂಪಾಯಿಗಳವರೆಗೆ ನೀವು ಈ ಬ್ಯಾಂಕಿನಲ್ಲಿ ಹೂಡಿಕೆ ಮಾಡಬಹುದಾಗಿದೆ.
ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಈ ಬ್ಯಾಂಕಿನಲ್ಲಿ ನೀವು ಮೂರು ಕೋಟಿ ರೂಪಾಯಿಗಳಿಗಿಂತ ಕಡಿಮೆ ಹಣವನ್ನ ಫಿಕ್ಸೆಡ್ ಡೆಪಾಸಿಟ್ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡುವ ಅವಕಾಶವನ್ನು ನೀಡಲಾಗುತ್ತದೆ. ಸಾಮಾನ್ಯ ನಾಗರಿಕರಿಗೆ 8.5 ಪ್ರತಿಶತ ಹಾಗೂ ಹಿರಿಯ ನಾಗರಿಕರಿಗೆ 9.10 ಪ್ರತಿಶತ ಬಡ್ಡಿದರವನ್ನು ನಿಗದಿಪಡಿಸಲಾಗಿದೆ.
ಸೂರ್ಯ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಈ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲೂ ಕೂಡ ಮೂರು ಕೋಟಿ ರೂಪಾಯಿಗಳ ಒಳಗೆ ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವ ಲಿಮಿಟ್ ಅನ್ನು ನಿಗದಿಪಡಿಸಲಾಗಿದೆ. ಜನರಲ್ ಸಿಟಿಜನ್ ಗೆ ಮೂರು ವರ್ಷಗಳ ಅವಧಿಯ ವರೆಗಿನ ಹೂಡಿಕೆ ಮೇಲೆ 8.60 ಪ್ರತಿಶತ ಹಾಗೂ ಹಿರಿಯ ನಾಗರಿಕರಿಗೆ 9.10 ಪ್ರತಿಶತ ಬಡ್ಡಿದರವನ್ನು ನಿಗದಿಪಡಿಸಲಾಗಿದೆ.
ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಇಲ್ಲಿ 1002 ದಿನಗಳಿಂದ ಮೂರು ವರ್ಷಗಳವರೆಗೆ ಫಿಕ್ಸೆಡ್ ಡೆಪಾಸಿಟ್ (Fixed Deposit) ಸಮಯಾವಧಿಯನ್ನು ನೀವು ಆಯ್ಕೆ ಮಾಡಬಹುದಾಗಿದೆ. ಜನಸಾಮಾನ್ಯರಿಗೆ 8.15 ಪ್ರತಿಶತ ಹಾಗೂ ಹಿರಿಯ ನಾಗರಿಕರಿಗೆ 8.65% ಬಡ್ಡಿ ದರವನ್ನು ಫಿಕ್ಸೆಡ್ ಡೆಪಾಸಿಟ್ ಮೇಲೆ ಇಲ್ಲಿ ನೀಡಲಾಗುತ್ತದೆ.