Pan Card Fraud: ನಿಮ್ಮ ಪ್ಯಾನ್ ಕಾರ್ಡ್ನಲ್ಲಿ ಬೇರೆ ಯಾರಾದರೂ ಸಾಲ ಪಡೆದಿದ್ದಾರೆಯೇ? ಹೀಗೆ ತಿಳಿದುಕೊಳ್ಳಿ

Advertisement
ಇತ್ತೀಚಿನ ದಿನದಲ್ಲಿ ಪ್ಯಾನ್‌ಕಾರ್ಡ್ (Pan Card) ಎನ್ನುವುದು ಜನರ ವೈಯಕ್ತಿಕ ಪುರಾವೆಯನ್ನು ಗುರುತಿಸಲು ಇರುವಂತಹ ಗುರುತಿನ ಚೀಟಿ, PAN ಕಾರ್ಡ್ ಭಾರತೀಯ ನಾಗರಿಕರಿಗೆ ನೀಡಲಾದ 10 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ. ಜನರೇ ಪರಿಶೀಲನೆ ಮತ್ತು ನೋಂದಣಿ ಉದ್ದೇಶಕ್ಕಾಗಿ ಬಹಳ ಮುಖ್ಯವಾದ ಮಾಹಿತಿ ಇದರಲ್ಲಿದೆ. ಭಾರತ ಸರ್ಕಾರವು ಆಧಾರ್ ಕಾರ್ಡ್ ಅನ್ನು PFA, PAN, ಫೋನ್ ಸಂಖ್ಯೆ, ಬ್ಯಾಂಕ್ ಖಾತೆಗಳಂತಹ ಇತರ ಪ್ರಮುಖ ಸರ್ಕಾರಿ ಸೇವೆಗಳೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಿದೆ.
ನಿಮ್ಮ ಪ್ಯಾನ್ ಕಾರ್ಡ್ ನಲ್ಲಿ ಬೇರೆ ಯಾರಾದ್ರೂ ಸಾಲ ಪಡೆದುಕೊಂಡಿದ್ದಾರಾ
ಕಳೆದ ಕೆಲವು ದಿನಗಳಿಂದ ಅನೇಕರು ಪಾನ್ ಕಾರ್ಡ್ ದುರ್ಬಳಕೆ ಮಾಡಿಕೊಂಡ ಘಟನೆಗಳು ನಡೆದಿವೆ, ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆಯಾಗಿದ್ದರೆ, ನೀವು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ದೂರು ಸಲ್ಲಿಸಬಹುದು. ಅಲ್ಲದೆ, ಪ್ಯಾನ್ ಕಾರ್ಡ್ ಹೊಂದಿರುವವರು ಕಾಲಕಾಲಕ್ಕೆ ಸಾಲದ ವಿವರಗಳನ್ನು ಮತ್ತು ಸಿಬಿಲ್ (CIBIL) ಸ್ಕೋರ್ ಅನ್ನು ಪರಿಶೀಲಿಸುತ್ತಿರಬೇಕು
ನಿಮ್ಮ ಕ್ರೆಡಿಟ್ ವರದಿಯಲ್ಲಿ ನೀವು ಏನಾದರೂ ತಪ್ಪನ್ನು ಕಂಡುಕೊಂಡರೆ ಈ ಸಂದರ್ಭದಲ್ಲಿ, ಈ ಬಗ್ಗೆ ನೀವು ಕ್ರೆಡಿಟ್ ಬ್ಯೂರೋ ಮತ್ತು ಕ್ರೆಡಿಟ್ ನೀಡುವವರನ್ನ ಸಂಪರ್ಕಿಸಬೇಕು.
ಆನ್ಲೈನ್ನಲ್ಲಿ ಹೀಗೆ ಪರಿಶೀಲಿಸಿ
Advertisement
ನಿಮ್ಮ ಪ್ಯಾನ್ ಕಾರ್ಡ್ ಪರಿಶೀಲಿಸಲು ಮೊದಲು https://www.cibil.com/ ಗೆ ಹೋಗಿ ಮಾಹಿತಿ ಕಂಡುಕೊಳ್ಳಿ, ನಿಮ್ಮ ಮೊಬೈಲ್ ಸಂಖ್ಯೆ, ಜನ್ಮ ದಿನಾಂಕ ಮತ್ತು ಇಮೇಲ್ ಐಡಿ ನಮೂದಿಸಿ. ನಂತರ ಲಾಗಿನ್ ಮಾಡಲು Password ರಚಿಸಿ. ನಂತರ ಆದಾಯ ತೆರಿಗೆ ಐಡಿ ಆಯ್ಕೆಮಾಡಿ ಹೊಂದಿಸಿ.
ಪ್ಯಾನ್ ಕಾರ್ಡ್ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ನೆನಪಿಡಬೇಕಾದ ಅಂಶ
ಪ್ರಸ್ತುತ ಆಧಾರ್ ಕಾರ್ಡ್‌ನಂತೆಯೇ ಪ್ಯಾನ್ ಕಾರ್ಡ್ ಕೂಡಾ ದಾಖಲೆಯಾಗಿದೆ. ಬ್ಯಾಂಕ್ ಸಂಬಂಧಿತ, ಹಣಕಾಸು ಸಂಬಂಧಿತ ಎಲ್ಲ ಕಾರ್ಯಗಳಿಗೂ ಪ್ಯಾನ್ ಕಾರ್ಡ್ ಒದಗಿಸುವುದು ಮುಖ್ಯ
ನೀವು ಪ್ಯಾನ್ ಕಾರ್ಡ್ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು, ಅಗತ್ಯವಿರುವ ಕನಿಷ್ಠ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸಿ.
ನೀವು ಈಗಾಗಲೇ ಬಾಕಿಯಿರುವ ಸಾಲಗಳನ್ನು ಹೊಂದಿದ್ದರೆ, ನೀವು ಇನ್ನೊಂದು ಸಾಲಕ್ಕೆ ಅರ್ಜಿ ಸಲ್ಲಿಸಬೇಕೇ ಎಂದು ನೀವು ಮರುಚಿಂತನೆ ಮಾಡಿ ಸಲ್ಲಿಸಿ
ಪ್ಯಾನ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾಗಿರುತ್ತೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಬ್ಯಾಂಕಿಗೆ ಹೋಗಿ ನಿಮ್ಮ ಸಿಬಿಲ್ ಸ್ಕೋರ್ ಪರಿಶೀಲನೆ ಮಾಡಿ.
Advertisement