Karnataka Times
Trending Stories, Viral News, Gossips & Everything in Kannada

Canara Bank: ಸ್ವಾತಂತ್ರ್ಯ ದಿನವೇ ದೇಶಾದ್ಯಂತ ಕೆನರಾ ಬ್ಯಾಂಕ್ ನಲ್ಲಿ ಹಣ ಇಟ್ಟವರಿಗೆ ಸಿಹಿಸುದ್ದಿ! ಮುಗಿಬಿದ್ದ ಜನ,

ಪ್ರತಿಯೊಬ್ಬ ಉದ್ಯೋಗಿ ಕೂಡ ತನ್ನ ಭಾವಿಸಿದ ಉಳಿತಾಯದ ಯೋಜನೆಯಲ್ಲಿ ಆಯ್ಕೆ ಮಾಡುವಂತಹ ಮೊದಲ ಯೋಜನೆ ಎಂದರೆ ಅದು ಫಿಕ್ಸೆಡ್ ಡೆಪಾಸಿಟ್ (Fixed Deposit). ದೀರ್ಘಕಾಲಿಕ ಫಿಕ್ಸೆಡ್ ಡೆಪಾಸಿಟ್ ಯೋಜನೆಗಳು ನಿಮಗೆ ಸಾಕಷ್ಟು ದೊಡ್ಡ ಮತದ ರಿಟರ್ನ್ ಅನ್ನು ನೀಡುತ್ತದೆ. ಅದರಲ್ಲೂ ವಿಶೇಷವಾಗಿ ಈ ಫಿಕ್ಸಿಡ್ ಡೆಪಾಸಿಟ್ ವಿಚಾರದಲ್ಲಿ ಕೆಲವೊಂದು ಬ್ಯಾಂಕುಗಳನ್ನು ಮಾತ್ರ ನಾವು ನಂಬಬೇಕಾಗಿರುತ್ತದೆ. ಅವುಗಳಲ್ಲಿ ಕೆನರಾ ಬ್ಯಾಂಕ್ ಕೂಡ ಬಂದಾಗಿದ್ದು ಈಗ ಕೆನರಾ ಬ್ಯಾಂಕ್ ತನ್ನ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರವನ್ನು ಹೆಚ್ಚಳ ಮಾಡಿದ್ದು ಕೆನರಾ ಬ್ಯಾಂಕ್ (Canara Bank) ಗ್ರಾಹಕರಿಗೆ ಇದು ಸಂತೋಷದ ವಿಚಾರ ಎಂದು ಹೇಳಬಹುದಾಗಿದೆ.

Advertisement

ಕೆನರಾ ಬ್ಯಾಂಕ್ ಆಗಸ್ಟ್ 12 ರಿಂದ ಈ ಹೊಸ ಬಡ್ಡಿದರವನ್ನು ಜಾರಿಗೆ ತರುವ ನಿಟ್ಟಿನಲ್ಲಿ ವೆಬ್ಸೈಟ್ನಲ್ಲಿ ಅಧಿಕೃತವಾಗಿ ಹಂಚಿಕೊಂಡಿದೆ. ಫಿಕ್ಸಿಡ್ ಡೆಪಾಸಿಟ್ ಯೋಜನೆ ಅಡಿಯಲ್ಲಿ ಎರಡು ಕೋಟಿಗಿಂತ ಕಡಿಮೆ ಹಣವನ್ನು ಹೂಡಿಕೆ ಮಾಡುವಂತಹ ಅವಕಾಶವನ್ನು ಕೆನರಾ ಬ್ಯಾಂಕ್ ನೀಡಿದೆ. ಫಿಕ್ಸಡ್ ಡೆಪಾಸಿಟ್ (Fixed Deposit) ಯೋಜನೆ ಅಡಿಯಲ್ಲಿ ಕೆನರಾ ಬ್ಯಾಂಕ್ (Canara Bank) ಏಳು ದಿನಗಳಿಂದ ಪ್ರಾರಂಭಿಸಿ 10 ವರ್ಷಗಳವರೆಗೂ ಕೂಡ ಹಣವನ್ನು ಹೂಡಿಕೆ ಮಾಡುವಂತಹ ಅವಧಿಯನ್ನು ನೀಡಿದೆ.

Advertisement

ಸಾಮಾನ್ಯ ನಾಗರಿಕರಿಗೆ ನಾಲ್ಕು ಪ್ರತಿಶತದಿಂದ ಪ್ರಾರಂಭಿಸಿ 7.25% ವರೆಗೂ ಬಡ್ಡಿದರವನ್ನು ನಿಗದಿಪಡಿಸಿದೆ. ಇನ್ನು ಇಲ್ಲಿ ಹಿರಿಯ ನಾಗರಿಕರಿಗೆ 7.75 ಪ್ರತಿಶತ ಬಡ್ಡಿದರವನ್ನು ನಿಗದಿಪಡಿಸಲಾಗಿದೆ. ಏಳು ದಿನಗಳಿಂದ 45 ದಿನಗಳ ವರೆಗಿನ ಯೋಜನೆಗೆ ನಾಲ್ಕು ಪ್ರತಿಶತ ಹಾಗೂ 46 ದಿನಗಳಿಂದ 90 ದಿನಗಳ ವರೆಗಿನ ಹೂಡಿಕೆಗೆ 5.5% ಬಡ್ಡಿದರವನ್ನು(Interest On FD) ನೀಡುವ ಆಫರ್ ಅನ್ನು ಕೆನರಾ ಬ್ಯಾಂಕ್ ನೀಡಿದೆ. 91 ರಿಂದ 179 ದಿನಗಳ ಹೂಡಿಕೆಗೆ 6.29 ಪ್ರತಿಶತ ಬಡ್ಡಿದರವನ್ನು ನೀಡುವ ನಿರ್ಧಾರವನ್ನು ಮಾಡಿದೆ. 270 ದಿನಗಳಿಂದ ಒಂದು ವರ್ಷದ ಒಳಗೆ ಮೆಚುರಿಟಿ ಹೊಂದುವಂತಹ ಹೂಡಿಕೆ ಮೇಲೆ 6.50% ಹಾಗೂ 444 ದಿನಗಳ ವರೆಗಿನ ಹೂಡಿಕೆಗೆ 7.25% ಬಡ್ಡಿ ದರವನ್ನು ಪಡೆದುಕೊಳ್ಳಬಹುದಾಗಿದೆ.

Advertisement

ಮೂರು ವರ್ಷಕ್ಕಿಂತ ಹೆಚ್ಚು ಹಾಗೂ ಐದು ವರ್ಷಕ್ಕಿಂತ ಒಳಗೆ ಇರುವಂತಹ ಫಿಕ್ಸಿಡ್ ಡೆಪಾಸಿಟ್ ಯೋಜನೆಗಳಿಗೆ ಕೆನರಾ ಬ್ಯಾಂಕ್ 6.80 ಪ್ರತಿಶತ ಬಡ್ಡಿದರವನ್ನು ನೀಡುತ್ತಿದೆ. ಐದು ಹಾಗೂ ಐದು ವರ್ಷಕ್ಕಿಂತ ಹೆಚ್ಚಿನ ಹೂಡಿಕೆಯ ಮೇಲೆ ಕೆನರಾ ಬ್ಯಾಂಕ್ 6.70 ಪ್ರತಿಶತ ಬಡ್ಡಿದರವನ್ನು ನೀಡುತ್ತದೆ. ಎರಡು ಕೋಟಿಗಿಂತ ಕಡಿಮೆ ಹೂಡಿಕೆ ಹಣವನ್ನು ಅವಧಿಗಿಂತ ಮುಂಚೆ ಒಂದು ವೇಳೆ ನೀವು ಹೂಡಿಕೆಯನ್ನು ಹಿಂಪಡೆಯಲು ಪ್ರಯತ್ನಿಸಿದರೆ ಒಂದು ಪ್ರತಿಶತ ಪೆನಾಲ್ಟಿಯನ್ನು ಕಟ್ಟಬೇಕಾಗುತ್ತದೆ. 80 ವರ್ಷದ ವಯಸ್ಸಿಗಿಂತಲೂ ಅಧಿಕ ವಯಸ್ಸಿನ ಹೊಂದಿರುವಂತಹ ಹಿರಿಯ ನಾಗರಿಕರಿಗೆ 0.60% ಹೆಚ್ಚಿನ ಬಡ್ಡಿದರವನ್ನು ಕೂಡ ನೀಡಲಾಗುತ್ತದೆ.

1 Comment
  1. ವಿವೇಕ್ says

    ಎಲ್ಲದಕ್ಕೂ ಮುಗಿಬಿದ್ದ ಜನ, ಬಿಗ್ ಶಾಕ್, ಆತಂಕ ಎಂಬ ಪದಗಳನ್ನು ಬಳಸಬೇಡಿ. ಓದಲು ಚೆನ್ನಾಗಿರುವುದಿಲ್ಲ.

Leave A Reply

Your email address will not be published.