PF Account: ಒಂದಕ್ಕಿಂತ ಹೆಚ್ಚು PF ಖಾತೆಗಳಿದ್ದವರಿಗೆ ಮಹತ್ವದ ಸೂಚನೆ

Advertisement
ಪ್ರತೊಯೊಬ್ಬ ವ್ಯಕ್ತಿಗೂ ಉದ್ಯೋಗ ಅನ್ನುವುದು ಬಹಳ ಮುಖ್ಯ, ಉತ್ತಮ ವೇತನ, ಸೆಕ್ಯುರ್ಡ್ ಜಾಬ್ (Secured Job) ವಿಶೇಷ ಸವಲತ್ತುಗಳು ಬಹಳ ಮುಖ್ಯ, ಯಾವುದೇ ಉದ್ಯೋಗಿ ಗೆ ಪಿಎಫ್ ಮೊತ್ತ ಎನ್ನುವುದು ಆಪತ್ಬಾಂಧವ ಇದ್ದಂತೆ. ಕೆಲಸದ ಸೇವಿಂಗ್ ಒಟ್ಟಿಗೆ ಬಂದರೆ ಸರಿಯಾದ ಸಮಯಕ್ಕೆ ನೆರವಾಗುತ್ತದೆ. ಕೆಲವೊಮ್ಮೆ ನಾನಾ ಉದ್ದೇಶಗಳಿಂದ ಉದ್ಯೋಗಿಗಳು ತಮ್ಮ ಕೆಲಸವನ್ನು ಬದಲಾವಣೆ ಮಾಡುತ್ತಾರೆ, ಆ ಸಮಯದಲ್ಲಿ ಎರಡು ಕಡೆ ಪಿ ಎಫ್ ಖಾತೆ ತೆರೆದಂತೆ ಆಗುತ್ತದೆ, ನೀವು ಕೂಡ ಎರಡು ಅಥವಾ ಹೆಚ್ಚಿನ ಖಾತೆಗಳನ್ನ ಹೊಂದಿದ್ದರೆ, ನೀವು ಪಿಎಫ್ ಖಾತೆಯನ್ನ ವಿಲೀನಗೊಳಿಸಬೇಕಾಗುತ್ತದೆ,
ಪಿಎಫ್ ಖಾತೆ ವಿಲೀನ ಮಾಡುವುದು ಹೇಗೆ?
ಇಪಿಎಫ್ಒ ವೆಬ್ ಸೈಟ್ ನಲ್ಲಿ https://www.epfindia.gov.in/site_en/ ಗೆ ಹೋಗಿ ಖಾತೆ ವಿವರ ಹಾಕಿ , ಖಾತೆಯನ್ನ ಆಯ್ಕೆ ಮಾಡಿ. ನಿಮ್ಮ ಹೊಸ ಖಾತೆಗೆ ನೀವು ಮರ್ಜ್ ಮಾಡಲು ಬಯಸುವ ಖಾತೆಗಳ ವಿವರಗಳನ್ನ ಹಾಕಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಓಟಿಪಿ ಸಂಖ್ಯೆಯನ್ನ ನಮೂದಿಸಿದ ತಕ್ಷಣ, ನಿಮ್ಮ ಹಳೆಯ ಪಿಎಫ್ ಖಾತೆಗಳು ಕಾಣಿಸಿಕೊಳ್ಳುತ್ತವೆ, ನಿಮ್ಮ ಇಪಿಎಫ್ಒ ಖಾತೆಗೆ ನೀವು ಬೇರೆ ಖಾತೆಗಳನ್ನ ಲಿಂಕ್ ಮಾಡಿದ್ದರೆ, ನಿಮ್ಮ ಹೊಸ ಬ್ಯಾಂಕ್ ಖಾತೆಯಾಗಿ ನೀವು ಯಾವುದನ್ನ ಬಳಸಲು ಬಯಸುತ್ತೀರಿ ಅದನ್ನು ನಮೂದಿಸಿ,
ಹಳೆ ಖಾತೆ ವಿಲೀನ ಗೊಳಿಸಿ:
Advertisement
ನೀವು ಹೊಸ ಸಂಸ್ಥೆ ಗೆ ಸೇರಿದರೆ ನಿಮ್ಮ ಹಳೆಯ ಯುಎಎನ್ ಸಂಖ್ಯೆಯನ್ನ ನೀಡಿದರೆ, ನಿಮ್ಮ ಹಳೆಯ ಖಾತೆಯನ್ನ ಹೊಸ ಖಾತೆಯ ಅಡಿಯಲ್ಲಿ ಸೇರಿಸಿರುವುದಿಲ್ಲ, ಇದರರ್ಥ ಹಳೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನ ಹೊಸ ಖಾತೆಯಲ್ಲಿ ಜಮಾ ಮಾಡಲು ಸಾಧ್ಯವಿಲ್ಲ, ಹೀಗಾಗಿ ಹಳೆಯ ನಿಧಿಯನ್ನ ಹೊಸ ಖಾತೆಗೆ ಸೇರಿಸಲು ಪಿಎಫ್ ಖಾತೆಯನ್ನ ವಿಲೀನಗೊಳಿಸಿ ನಂತರ ಹೊಸ ಖಾತೆ ಹೊಂದಿರಿ.
ಆನ್ಲೈನ್ನಲ್ಲಿ ಪಿಎಫ್ ಬ್ಯಾಲೆನ್ಸ್ ಗೆ ಅರ್ಜಿ ಸಲ್ಲಿಸಬಹುದು, ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ನಂಬರ್ (ಯುಎಎನ್) ನಿಮ್ಮ ಬಳಿಯಿದ್ದರೆ ನೇರವಾಗಿ ಆನ್ಲೈನ್ ಮೂಲಕ ಪಿಎಫ್ ಹಣಕ್ಕೆ ಅರ್ಜಿ ಹಾಕಬಹುದು. ಉದ್ಯೋಗದಾತರ ಮರ್ಜಿ ಸಹ ಬೇಕಿಲ್ಲ. ಪಿಎಫ್ಒ ವೆಬ್ಸೈಟ್ಗೆ ಹೋಗಿ ನೀವು ಅರ್ಜಿಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.
ಆನ್ಲೈನ್ನಲ್ಲಿ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಿ:
ಹಳೆಯ ಪಿಎಫ್ ಖಾತೆಯಲ್ಲಿ ಠೇವಣಿ ಇಟ್ಟಿರುವ ಮೊತ್ತವನ್ನು ಹೊಸ ಪಿಎಫ್ ಖಾತೆಗೆ ವರ್ಗಾಯಿಸುವ ಕೆಲಸ ಮನೆಯಲ್ಲಿ ಮಾಡಬಹುದು, ಅಷ್ಟೆ ಅಲ್ಲದೆ ಬ್ಯಾಲೆನ್ಸ್ ಚೆಕ್ ಮನೆಯಲ್ಲೆ ಮಾಡಬಹುದು,
ಇದಲ್ಲದೆ ಪಿಎಫ್ ಬ್ಯಾಲೆನ್ಸ್ ಅನ್ನು ಇಪಿಎಫ್ಒ ಆ್ಯಪ್ ಮೂಲಕವೂ ಕಂಡುಹಿಡಿಯಬಹುದು. ಯುಎಎನ್ ಸಂಖ್ಯೆ ಮತ್ತು ಪಾಸ್ವರ್ಡ್ ಅನ್ನು ನಮೂದಿಸಿ ಚೆಕ್ ಮಾಡಬಹುದು.
Advertisement