RBI New Rules: ದೇಶಾದ್ಯಂತ ಬ್ಯಾಂಕ್ ಖಾತೆ ಇದ್ದವರಿಗೆ ರಿಸರ್ವ್ ಬ್ಯಾಂಕ್ ಹೊಸ ನಿಯಮ, ತಪ್ಪಿದ ಸಂಕಷ್ಟ
ಬ್ಯಾಂಕ್ (Bank) ಖಾತೆ ಎನ್ನುವುದು ಈಗ ಅಗತ್ಯ ಮಾಹಿತಿ ಪುರಾವೆ, ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಬ್ಯಾಂಕ್ ಖಾತೆ ಇದ್ದೆ ಇರುತ್ತದೆ, ಮುಖ್ಯವಾಗಿ ಈ ಖಾತೆಗಳು ಜನರಿಂದ ಉಳಿತಾಯದ ಹಣವನ್ನು ಸಂಗ್ರಹಿಸಿ, ಅಗತ್ಯ ವಿದ್ದಾಗ ಹಣ ವನ್ನು ನಾವು ಬಳಸಬಹುದು, ಅದ್ರೆ ಬ್ಯಾಂಕ್ ಪುಸ್ತಕ ದಲ್ಲಿ ಮಿನಿಮಮ್ ಬ್ಯಾಲೆನ್ಸ್ (Minimum Balance) ಕೂಡ ಇರಬೇಕಾಗುತ್ತದೆ,
ಅದರೆ ಬ್ಯಾಂಕ್ ಖಾತೆ ಬೇರೆ ಬೇರೆ ಉದ್ದೇಶ ಕ್ಕಾಗಿ ನಾವು ತೆರೆಯುತ್ತೇವೆ, ಉದ್ಯೋಗಿಗಳು ಸಂಬಳ ಪಡೆಯಲು ಬಳಸುತ್ತಾರೆ, ಹಿರಿಯರು ಸರಕಾರದ ಪಿಂಚಣಿಗಾಗಿ ಬೇರೆ ಖಾತೆಯನ್ನು ಬಳಸುತ್ತಾರೆ ಸರ್ಕಾರದ ಪ್ರಯೋಜನಗಳಿಗಾಗಿ ಕೂಡ ಬೇರೆ ಬೇರೆ ಬ್ಯಾಂಕ್ ನ ಖಾತೆಯನ್ನು ಬಳಸ ಬೇಕಾಗುತ್ತದೆ, ಅದರೆ ಎಲ್ಲಾ ಬ್ಯಾಂಕ್ ನ ಖಾತೆಗಳಲ್ಲಿ ಕಡಿಮೆ ಶುಲ್ಕ ವಾದರೂ ಇರಲೇ ಬೇಕು ಎಂದು ಕೆಲವೊಂದಿಷ್ಟು ಬ್ಯಾಂಕ್ ಗಳು ಹೇಳಿವೆ.
ಆರ್ ಬಿ ಐ ನಿರ್ಧಾರ
ಬ್ಯಾಂಕ್ ಖಾತೆಯಲ್ಲಿ ಮಿನಿಮಾಮ್ ಬ್ಯಾಲೆನ್ಸ್ ಬಗ್ಗೆ ದೂರುಗಳು ಕೇಳಿಬರುತ್ತಲೇ ಇದೆ, ಇದರ ಬಗ್ಗೆ ಗ್ರಾಹಕರಿಂದ ದೂರುಗಳ ಕ್ರಮಕ್ಕಾಗಿ ಆರ್‌ಬಿಐ (RBI) ಮುಖ್ಯ ನಿರ್ಧಾರ ತೆಗೆದುಕೊಂಡಿದ್ದು, ಉಳಿತಾಯ ಖಾತೆಗಳಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೂ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದಿದೆ, ಕನಿಷ್ಠ ಬ್ಯಾಲೆನ್ಸ್ ಶುಲ್ಕವನ್ನು ತೆಗೆದು ಕೊಳ್ಳದಂತೆ ಬ್ಯಾಂಕ್‌ಗಳಿಗೆ ನಿರ್ಣ ಯಿಸಲಾಗಿದೆ ಎನ್ನಲಾಗಿದೆ, ಹಲವು ಬ್ಯಾಂಕ್‌ಗಳು ಈಗಾಗಲೇ ಕ್ರಮ ಕೈಗೊಂಡಿವೆ
ಹೆಚ್ಚಾಗಿದೆ ಮಿನಿಮಮ್ ಬ್ಯಾಲೆನ್ಸ್
ಇತ್ತಿಚೆಗೆ ಕೆಲವು ಬ್ಯಾಂಕ್ ನಲ್ಲಿ ಮಿನಿಮಾಮ್ ಬ್ಯಾಲೆನ್ಸ್ ಹೆಚ್ಚಾಗಿದೆ, ಕೆಲವು ಬ್ಯಾಂಕ್ ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಮೀರಿ ಹೋಗಿವೆ, 3000 ರೂಪಾಯಿ ಗಿಂತಲೂ ಅಧಿಕ ಮೊತ್ತ, ಹಾಗೂ ಕೆಲವೊಂದಿಷ್ಟು ಖಾಸಗಿ ಬ್ಯಾಂಕ್ ಗಳಲ್ಲಿ 5 ಸಾವಿರಕ್ಕಿಂತಲೂ ಹೆಚ್ಚು ಆಗಿದೆ. ಇದೀಗ ಈ ಬಗ್ಗೆ ಆರ್ ಬಿ ಐ ನಿರ್ಧಾರ ತೆಗೆದು ಕೊಂಡಿದ್ದು, ವಿವಿಧ ಬ್ಯಾಂಕ್‌ಗಳ ಉಳಿತಾಯ ಮತ್ತು ಇರುವ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇರುವ ಮಿತಿಯೂ ಬದಲಾಗಲಿದೆ ಎಂದಿದೆ, ಕನಿಷ್ಠ ಬ್ಯಾಲೆನ್ಸ್ ಇಲ್ಲದ ಖಾತೆಗಳ ಮೇಲಿನ ದಂಡವನ್ನು ತೆಗೆದು ಹಾಕುವ ನಿರ್ಧಾರವನ್ನು ಬ್ಯಾಂಕ್‌ಗಳ ಆಡಳಿತ ಮಂಡಳಿ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಟ್ಟಿನಲ್ಲಿ ವಿವಿಧ ಉದ್ದೇಶಕ್ಕಾಗಿ ಬ್ಯಾಂಕ್ ಖಾತೆಯನ್ನು ನಾವು ವಿವಿಧ ಬ್ಯಾಂಕ್ ನಲ್ಲಿ ತೆರೆಯ ಬೇಕಾಗುತ್ತದೆ, ಈಗ ಮಿನಿಮಮ್ ಬ್ಯಾಲೆನ್ಸ್ ಇಲ್ಲದೆಯೂ ಬ್ಯಾಂಕ್ ಖಾತೆ ತೆರೆಯಲು ಗ್ರಾಹಕರಿಗೆ ಬಹಳಷ್ಟು ಉಪಯೋಗ ಕೂಡ ಆಗಬಹುದು, ಆರ್‌ಬಿಐ ತೆಗೆದುಕೊಂಡಿರುವ ಈ ನಿರ್ಧಾರ ಹಲವು ಜನರಿಗೆ ನೆಮ್ಮದಿ ನೀಡಲಿದೆ.