ಸ್ಟೇಟ್ ಬ್ಯಾಂಕ್ ಬಳಕೆದಾರರಿಗೆ ಗುಡ್ ನ್ಯೂಸ್ ಮಾಹಿತಿ ಯೊಂದು ಬಂದಿದೆ. ಹೌದು ಇದೀಗ ಸ್ಟೇಟ್ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಎಲ್ಲ ಬ್ಯಾಂಕ್ಗಳು ಕೂಡ ಪ್ರತಿ ತಿಂಗಳು ಸಾಲ (Loan) ಮತ್ತು ಠೇವಣಿ ಮೇಲಿನ ಬಡ್ಡಿ ದರಗಳನ್ನು ಸರಿಹೊಂದಿಸಲಿದ್ದು ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕೆಲವು ಆಯ್ದ ಅವಧಿಯ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಬದಲಾವಣೆ ಮಾಡಿದ್ದು ಹೊಸ ಬಡ್ಡಿದರಗಳು ಅ.15 ರಿಂದಲೇ ಬರಲಿದೆ.
ಬಡ್ಡಿದರ ಕಡಿಮೆ!
ಹೋದ ಬಾರಿ ಸಾಲದ ಬಡ್ಡಿದರವನ್ನು ಎಸ್ಬಿಐ (SBI) ಹೆಚ್ಚು ಮಾಡಿದ್ದು ಈ ಬಾರಿ ಬಡ್ಡಿದರಗಳನ್ನು ಇದೀಗ ಕಡಿಮೆ ಮಾಡಿದೆ. ಮೊದಲು ಶೇಕಡಾ 8.45ರಷ್ಟು ಬಡ್ಡಿದರಕ್ಕಿಂತ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುವಂತೆ ನಿಯಮ ಇರಲಿಲ್ಲ. ಇದೀಗ ಅದನ್ನು ಶೇಕಡಾ 8.20ಕ್ಕೆ ಇಳಿಕೆ ಮಾಡಿದ್ದು ಸಾಲಗಾರರಿಗೆ ಈ ವಿಚಾರದಲ್ಲಿ ಖುಷಿ ಸಿಕ್ಕಿದೆ.
ಎಷ್ಟು ಕಡಿತ ಮಾಡಿದೆ?
ಕನಿಷ್ಠ ವೆಚ್ಚದ ನಿಧಿ ಆಧರಿತ ಸಾಲ (MCLR) ದರವನ್ನು 25 ಬೇಸಿಸ್ ಪಾಯಿಂಟ್ಗಳಿಗೆ ಕಡಿಮೆ ಮಾಡಿದೆ. ಎಸ್ಬಿ ಐ ಕನಿಷ್ಠ ವೆಚ್ಚದ ನಿಧಿ ಆಧರಿತ ಸಾಲವನ್ನು 8.45% ರಿಂದ 8.20% ಕ್ಕೆ ಇಳಿಸಿದೆ. ಅಂದರೆ ಕೆಲವು ಆಯ್ದ ಅವಧಿಗಳ ಸಾಲದ ಮೇಲಿನ MCLR ಅನ್ನು 25 ಮೂಲಾಂಶಗಳವರೆಗೆ ಕಡಿತ ಮಾಡಿದೆ.
ಹೌದು SBI ಓವರ್ನೈಟ್ ಎಂಸಿಎಲ್ಆರ್ ದರವನ್ನು 8.20%, ನಷ್ಟು ಮತ್ತು ಒಂದು ತಿಂಗಳ ಎಂಸಿಎಲ್ಆರ್ ದರವನ್ನು 8.45% ರಿಂದ 8.20% ಕ್ಕೆ ಹಾಗೂ ಆರು ತಿಂಗಳ ಎಂಸಿಎಲ್ಆರ್ ದರವನ್ನು 8.85% ಕ್ಕೆ, ಒಂದು ವರ್ಷದ ಎಂಸಿಎಲ್ಆರ್ ಅನ್ನು 8.95% ಕ್ಕೆ, ಎರಡು ವರ್ಷಗಳ ಎಂಸಿಎಲ್ಆರ್ ಅನ್ನು 9.05% ಮತ್ತು ಮೂರು ವರ್ಷಗಳ ಎಂಸಿಎಲ್ಆರ್ ಅನ್ನು 9.1% ಕ್ಕೆ ಬದಲಾವಣೆ ಮಾಡಿದೆ.
ರೆಪೋ ದರ!
ಹತ್ತನೇ ಬಾರಿಯು ರೆಪೊ ದರ 6.5% ನಲ್ಲಿ ಬದಲಾಗದೆ ಇರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ಧಾರ ಮಾಡಿದ್ದು ಹಾಗಾಗಿ ಬಡ್ಡಿ ಇಳಿಕೆ ಮಾಡಲಾಗಿದೆ ಎಂದು ಎಸ್ಬಿಐ ಹೇಳಿದೆ. ಈಗ ರಿವೈಸ್ಡ್ MCRL ಪ್ರಕಾರ ಶೇಕಡಾವಾರು ಎಸ್ಬಿಐ ಬಡ್ಡಿದರವೂ ಒಂದು ದಿನದಿಂದ ಒಂದು ತಿಂಗಳವರೆಗೆ 8.20%, ಮೂರು ತಿಂಗಳು 8.50%, ಆರು ತಿಂಗಳು 8.85%, ಒಂದು ವರ್ಷ 8.95%, ಎರಡು ವರ್ಷಗಳು 9.05%, ಮೂರು ವರ್ಷಗಳು 9.10%.ರಷ್ಟು ಇರಲಿದೆ.