Government Scheme: ಇನ್ನು ಮುಂದೆ ಹಿರಿಯ ನಾಗರಿಕರಿಗೆ ಸಿಗುತ್ತೆ ತಿಂಗಳಿಗೆ 70,000 ರೂ.ಏನಿದು ಸರ್ಕಾರದ ಹೊಸ ಘೋಷಣೆ
ವಿತ್ತ ಸಚಿವೆ ನಿರ್ಮಲ ಸೀತಾರಾಮನ್(Nirmala Sitaram) ತಮ್ಮ ಬಜೆಟ್(Budget) ನಲ್ಲಿ ಈ ವಿಚಾರವನ್ನು ಕೂಡ ಮಂಡಿಸಿದ್ದಾರೆ. ಕೇಂದ್ರ ಮೋದಿ ಸರ್ಕಾರ ಈಗಾಗಲೇ ಸಾರ್ವಜನಿಕರಿಗೆ ಸಹಾಯವಾಗುವಂತಹ ಹಲವಾರು ಯೋಜನೆಗಳನ್ನ ಜಾರಿಗೆ ತಂದಿದೆ. ಅದರಲ್ಲಿಯೂ ಸೀನಿಯರ್ ಸಿಟಿಜನ್(Senior Citizens) ಅಥವಾ ಹಿರಿಯ ನಾಗರಿಕರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಲಾಗಿದ್ದು ಅವರ ಭವಿಷ್ಯ ಸುರಕ್ಷತೆಗಾಗಿ ಸರ್ಕಾರ ಪ್ರಯತ್ನಿಸುತ್ತಿದೆ. ಮೋದಿ(Modi) ಸರ್ಕಾರ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳಿಗೆ 70,500ರೂ. ಬರುವಂತಹ ಯೋಜನೆ ಜಾರಿಗೆ ತಂದಿದೆ. ನೀವು ಕೂಡ ಬಯಸಿದರೆ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚಿಗೆ ಘೋಷಿಸಿದ ಬಜೆಟ್ ನಲ್ಲಿ ಸಾಕಷ್ಟು ವಿಚಾರಗಳನ್ನ ಮಂಡಿಸಿದ್ದಾರೆ ಅದರಲ್ಲಿ ಒಂದು, ಸರ್ಕಾರದಿಂದ ಪ್ರತಿ ತಿಂಗಳು 70,500ರೂ. ಸಂಪೂರ್ಣ ಪ್ರಯೋಜನವನ್ನು ಹಿರಿಯ ನಾಗರಿಕರು ಪಡೆಯಲಿದ್ದಾರೆ. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ ಕೆಲವೇ ವರ್ಷಗಳಲ್ಲಿ ಮಿಲಿಯನೇರ್ ಆಗಬಹುದು. ಪ್ರತಿ ತಿಂಗಳು ಅತಿಹೆಚ್ಚಿನ ಮೊತ್ತ ಗಳಿಸಬಹುದು ಹಾಗಾದ್ರೆ ಹಿರಿಯ ನಾಗರಿಕರಿಗೆ ಸಹಾಯವಾಗುವ ಉಳಿತಾಯ ಯೋಜನೆಗಳು ಯಾವವು ನೋಡೋಣ.
ಪ್ರಧಾನ ಮಂತ್ರಿ ಉಳಿತಾಯ ಯೋಜನೆಗಳು:
ಪೋಸ್ಟ್ ಆಫೀಸ್ ನ (Post Office)ಮಾಸಿಕ ಆದಾಯ ಯೋಜನೆ (POMIS), ಪ್ರಧಾನ ಮಂತ್ರಿ ವಯಾ ವಂದನಾ ಯೋಜನೆ (PMVVY), ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ (MSSC) , ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಇವು ಪ್ರಮುಖವಾದ ಸರ್ಕಾರಿ ಯೋಜನೆಗಳಾಗಿದ್ದು ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ ಹೆಚ್ಚು ಹಣ ಗಳಿಸಿಕೊಳ್ಳಬಹುದು.
ತಿಂಗಳಿಗೆ 70,500 ರೂಪಾಯಿಗಳಿಸಿ:
ನೀವು ಈ ಯೋಜನೆಯಲ್ಲಿ 1.1 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಹಿರಿಯ ನಾಗರಿಕ ದಂಪತಿಗಳು 70,500 ರೂಪಾಯಿಗಳ ಮಾಸಿಕ ಆದಾಯವನ್ನು ಗಳಿಸಬಹುದು. ಇದು ಬಹಳ ಸುರಕ್ಷಿತವಾದ ಹೂಡಿಕೆಯಾಗಿದೆ.
30 ಲಕ್ಷದ ಹೂಡಿಕೆ:
ಹಿರಿಯ ನಾಗರಿಕ ಉಳಿತಾಯ ಯೋಜನೆಯಲಿ 30 ಲಕ್ಷ ರೂ.ದವರೆಗೆ ಹೂಡಿಕೆ ಮಾಡಬಹುದು ಅಂದರೆ ದಂಪತಿಗಳು ತಮ್ಮ ಜಂಟಿ ಖಾತೆಯಲ್ಲಿ 60 ಲಕ್ಷ ರೂ. ದವರೆಗೆ ಠೇವಣಿ ಇಡಬಹುದಾಗಿದೆ. ಇದಕ್ಕೆ 8% ಬಡ್ಡಿದರವನ್ನ ನೀಡಲಾಗುತ್ತದೆ. ಅದೇ ರೀತಿ ಪೋಸ್ಟ್ ಆಫೀಸ್ ಯೋಜನೆಯಲ್ಲಿ 9 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಲು ಅವಕಾಶವಿದ್ದು ಇದಕ್ಕೆ 7.1% ಬಡ್ಡಿ ಸಿಗುತ್ತದೆ.
ಹೆಚ್ಚಿನ ಬಡ್ಡಿಯ ಯೋಜನೆ;
ಮಹಿಳಾ ಸಮ್ಮಾನ್ ಯೋಜನೆಯಲ್ಲಿಯೂ ಕೂಡ ಗರಿಷ್ಠ ಎರಡು ಲಕ್ಷದವರೆಗೆ ಹೂಡಿಕೆ ಮಾಡಬಹುದು ಮಹಿಳೆಯರಿಗೆ ಮಾತ್ರ ಮೀಸಲಾಗಿರುವ ಈ ಯೋಜನೆಯಿಂದ ಮಹಿಳಾ ನಾಗರಿಕರು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ. ಯೋಜನೆಯಲ್ಲಿ 7.5% ಬಡ್ಡಿ ದರ ನೀಡಲಾಗುತ್ತದೆ. ಅದೇ ರೀತಿ ಪ್ರಧಾನಮಂತ್ರಿ ಯುವ ಯೋಜನೆಯಲ್ಲಿಯೂ ಕೂಡ ಜಂಟಿ ಖಾತೆ ತೆರೆಯಬಹುದು. 30 ಲಕ್ಷದವರೆಗೆ ಹೂಡಿಕೆ ಮಾಡಿದರೆ 7.4% ಬಡ್ಡಿದರ ದೊರೆಯುತ್ತದೆ. ಈ ರೀತಿಯ ಕೆಲವು ಸುರಕ್ಷಿತ ಹಾಗೂ ಅಧಿಕ ಲಾಭಗಳಿಸುವ ಯೋಜನೆಯಲ್ಲಿ ಹೂಡಿಕೆ ಮಾಡಲು ಇಂದೇ ಪ್ಲ್ಯಾನ್ ಮಾಡಿ.