ಸ್ವಂತ ಮನೆ ಕಟ್ಟಬೇಕು ಅಥವಾ ಖರೀದಿ ಮಾಡಬೇಕೆಂಬುದು ಅನೇಕರ ಬಹುದೊಡ್ಡ ಕನಸು. ಹಣವಂತರು ಯಾವುದೇ ಸಾಲ, ಬ್ಯಾಂಕ್ ಲೋನ್ (Bank Loan) ಇಲ್ಲದೆ ಮನೆ ಕಟ್ಟುತ್ತಾರೆ ಆದರೆ ಮಧ್ಯಮವರ್ದವರು ಹಾಗೂ ಬಡವರಿಗೆ ಅದು ಅಸಾಧ್ಯ . ಹಾಗಾಗಿ ಮನೆ ಖರೀದಿ ಕನಸು ಈಡೇರಿಸಿಕೊಳ್ಳಲು ಗೃಹಸಾಲ ಪಡೆಯುವುದು ಅನಿವಾರ್ಯವಾಗುತ್ತದೆ.
ಆದರೆ ಹೋಮ್ ಲೋನ್ ಕೊಳ್ಳುವ (Home Loan) ಮೊದಲು ಈ 5 ನಿಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದೆ ಆದರೆ ಮುಂದೆ ಯಾವುದೇ ಸಮಸ್ಯೆ ಬರುವುದಿಲ್ಲ.
1.ಕೇವಲ 80 % ಮಾತ್ರ ಸಾಲ ಪಡೆಯಿರಿ:
ಮನೆ ನಿರ್ಮಾಣಕ್ಕಾಗಿ 100% ಸಾಲ ಮಾಡಬೇಡಿ 20% ರಿಂದ 30% ಅನ್ನು ಉಳಿಸಿ ಇಟ್ಟುಕೊಳ್ಳಿ,
70 ರಿಂದ 80% ಹಣಕ್ಕಾಗಿ ಮಾತ್ರ ಲೋನ್ ಮಾಡಿ.
ಯಾವುದಾದರು ಒಂದು ಕಡೆ ಮಾತ್ರ ಲೋನ್ ಮಾಡಿ.. ಚಿನ್ನ ಆಭರಣ, ಕೈ ಸಾಲ ಎಂದೆಲ್ಲಾ ಮಾಡಿಕೊಳ್ಳಬೇಡಿ. ಹಾಗಾದಾಗ ಸಾಲ ತೀರಿಸುವುದು ಹೊರೆಯಾಗುತ್ತದೆ. ಮನೆ ಕಟ್ಟುವುದು ನಿಮ್ಮ ಕನಸ್ಸಾಗಿದ್ದರೆ ಈಗಿನಿಂದಲೇ ಉಳಿತಾಯ ಮಾಡಲಾರಂಬಿಸಿ.
2. ಹಾಸಿಗೆ ಇದ್ದಷ್ಟು ಕಾಲು ಚಾಚಿ:
ನಿಮ್ಮ ಆರ್ಥಿಕ ಸ್ಥಿತಿಗಗೆ ಅನುಗುಣವಾಗಿ ಮನೆ ಸಾಲ ಪಡೆದುಕೊಳ್ಳಿ, ನಿಮ್ಮ ಸಂಬಂಧಿಕರು, ಅಕ್ಕ ಅಕ್ಕದವರು 4/5 ಬೆಡ್ ರೂಂಗಳ ಮನೆ ಕಟ್ಟಿದ್ದಾರೆ ಎಂದು ನೀವು ನಿಮ್ಮ ಶಕ್ತಿಗೂ ಮೀರಿದ ಸಾಲ ತೆಗೆದುಕೊಂಡರೆ ನಿಮಗೆ ಕಷ್ಟ. ಸಾಲ ತೀರಿಸದೇ ಹೋದರೆ ಮನೆ ಹಾರಾಜಾಗುತ್ತದೆ. ಸಾಲ ತೀರಿಸಲು ನೀವೆ ಮನೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಕೂಡಾ ಬರಬಹುದು.
3. ಸಾಲ ತೀರಿಸಲು ಸಮಯಾವಕಾಶ:
ಸಾಲ ತೀರಿಸುವ ಸಂದರ್ಭದಲ್ಲಿ ಇಎಂಐ (EMI) ಕಟ್ಟಲು ಹೆಚ್ಚಿನ ಸಮಯಾವಕಾಶ ತೆಗೆದುಕೊಳ್ಳಿ. 10 ವರ್ಷ, 20ವರ್ಷ, 30 ವರ್ಷ ಎಂದಿದ್ದಾಗ ಆದಷ್ಟು ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳಿ ಹಣ ಹೆಚ್ಚು ಉಳಿಕೆಯಾದರೆ ವೇಗವಾಗಿ ನೀವು ಸಾಲ ತೀರಿಸಬಗುದು . ಆದರೆ ಕಡಿಮೆ ಸಮಯಾವಕಾಶದಲ್ಲಿ ಹೆಚ್ಚಿನ ಹಣ ಕಟ್ಟುವುದು ಕಷ್ಟಕರವಾಗಬಹುದು. ಕ್ರೆಡಿಟ್ ಸ್ಕೋರ್ (Credit Score) ಮೇಲೆಯೂ ಇದು ಪರಿಣಾಮ ಭೀರಬಹುದು.
4. ನಾಲ್ಕಾರು ಬ್ಯಾಂಕ್ ಗಳನ್ನು ಪರಿಶೀಲಿಸಿ:
ಹೋಮ್ ಲೋನ್ ತೆಗೆದುಕೊಳ್ಳುವ ಮೊದಲು ಹತ್ತಾರು ಬ್ಯಾಂಕ್ ಹತ್ತಿ ಇಳಿಯಿರಿ. ಯಾವ ಬ್ಯಾಂಕ್ ಉತ್ತಮ , ಯಾವ ಬ್ಯಾಂಕ್ ಕಡಿಮೆ ಬಡ್ಡಿದರಕ್ಕೆ ಸಾಲ ನೀಡುತ್ತದೆ ಎಂಬೂದನ್ನು ವಿಚಾರಿಸಿ.ಹೋಮ್ ಲೋನ್ ತೆಗೆದುಕೊಳ್ಳಲು ಯಾವ ಬ್ಯಾಂಕ್ ಸೂಕ್ತ ಎಂದು ತಿಳಿಯಿದು ಮುಂದುವರೆಯಿರಿ. \
5. ಹೋಮ್ ಲೋನ್ ಕೊಂಡ ನಂತರ ಪ್ರಮುಖವಾಗಿ ಇನ್ಸ್ಯೂರೆನ್ಸ್ ಮಾಡಿಸಿ:
ಅದರಲ್ಲಿಯೂ ಟರ್ಮ್ ಇನ್ಸ್ಯೂರೆನ್ಸ್ ಮಾಡಿಸಿ , ಅಕಾಲಿಕ ಮರಣವಾದ ಸಂದರ್ಭದಲ್ಲಿ ಈ ಇನ್ಸ್ಯೂರೆನ್ಸ್ (Insurance )ನಿಮ್ಮ ಸಾಲವನ್ನು ಭರಿಸುತ್ತದೆ. ಆಸ್ತಿ ಕಳೆಕೊಳ್ಳುವ ಪರಿಸ್ಥಿತಿಯಿಂದ ಇದು ನಿಮ್ಮನ್ನು ಕಾಯುತ್ತದೆ.