Karnataka Times
Trending Stories, Viral News, Gossips & Everything in Kannada

SBI Credit Card: ಇಂದಿನಿಂದ ಎಸ್ ಬಿ ಐ ಕ್ರೆಡಿಟ್ ಕಾರ್ಡ್ ಇದ್ದವರಿಗೆ ಹೊಸ ನಿಯಮ

ದೇಶದ ಅತ್ಯಂತ ನಂಬಿಕಸ್ಥ ಬ್ಯಾಂಕ್ ಆಗಿರುವ SBI ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು ಇಂದಿನಿಂದ ಅಂದರೆ ಮಾರ್ಚ್ 17, 2023 ರಿಂದ ಈ ನಿಯಮಗಳು ಜಾರಿಗೆ ಬಂದಿವೆ. ಅದರಲ್ಲಿ ಮುಖ್ಯವಾಗಿ sbi ತನ್ನ ಕಾರ್ಡ್ ಸೇವಾ ಶುಲ್ಕ ಹಾಗೂ ಇತರ ಚಾರ್ಜ್ಗಳನ್ನ ಪರಿಷ್ಕರಿಸಿದೆ. SBI Credit Card ಗಳಿಗೆ ಈವರಿಗೆ ಸೇವಾ ಶುಲ್ಕವಾಗಿ 99 ರೂ. ವಿಧಿಸಲಾಗಿದ್ದು ಇನ್ನು ಮುಂದೆ 199 ರೂಪಾಯಿಗಳಾಗುವ ಸಾಧ್ಯತೆ ಇದೆ.

ಇಂದಿನಿಂದ ದರಗಳಲ್ಲಿ ಆಗಿರುವ ಬದಲಾವಣೆಯ ಬಗ್ಗೆ ಗ್ರಾಹಕರಿಗೆ ಇಮೇಲ್ ಮಾಡಿ ಸ್‌ಬಿಐ ತಿಳಿಸಿದೆ. “ನಿಮ್ಮ ಎಸ್ಬಿಐ ಕಾರ್ಡ್ ನಲ್ಲಿರುವ ಶುಲ್ಕಗಳನ್ನು ಮಾರ್ಚ್ 17 2023 ರಿಂದ ಪರಿಷ್ಕರಿಸಲಾಗುವುದು ದಯವಿಟ್ಟು ಗಮನಿಸಿ” ಎಂಬುದಾಗಿ ಎಸ್‌ಬಿಐ ಇಮೇಲ್ ಕಳಿಸಿದೆ.

Join WhatsApp
Google News
Join Telegram
Join Instagram

UPI ಮೂಲಕ Rupay Credit Card:

ಎಂ ಪಿ ಸಿ ಐ ಸಹಾಯೋಗದೊಂದಿಗೆ BHMI ಅಪ್ಲಿಕೇಶನ್ ಬಳಸಿಕೊಂಡು UPI ಮೂಲಕ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ಅನ್ನು ನೀಡಲು SBI Bank ಆರಂಭಿಸಿದೆ. ಈ ಬ್ಯಾಂಕಿನ ಯಾವೆಲ್ಲ ಗ್ರಾಹಕರ ಬಳಿ Rupay Credit Card ಇದೆಯೋ ಅವರು ಲಿಂಕ್ ಮಾಡಿಕೊಳ್ಳಬಹುದು. ಅಂದರೆ ಕಾರ್ಡ್ ಅನ್ನು ಬಳಸದೆ ಯಾವುದೇ ಆನ್ಲೈನ್ ಪಾವತಿಯನ್ನು ಮಾಡಬಹುದು. ಖಾತೆ ಇರುವ ಇತರ ಯುಪಿಐ ವಹಿವಾಟಿನಂತೆ ಈ ಕಾರ್ಡ್ ಕೂಡ ವರ್ಕ್ ಆಗಲಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಬ್ಯಾಂಕ್ ಸ್ಪಷ್ಟಪಡಿಸಿದೆ.

ಈಗಾಗಲೇ ನಿಮ್ಮಲ್ಲಿ ಲಿಂಕ್ ಆಗಿರುವ ಯಾವ ಕಾರ್ಡ್ ಇರುತ್ತದೋ ಅದೇ ರೀತಿ Credit Card ಅನ್ನು ಲಿಂಕ್ ಮಾಡಿಕೊಳ್ಳಬಹುದು. ಲಿಂಕ್ ಮಾಡುವಾಗ ಖಾತೆ ಪಟ್ಟಿಯಲ್ಲಿ ನೀವು ಯಾವ ಬ್ಯಾಂಕ್ ಕಾರ್ಡ್ ಬಳಸುತ್ತಿದ್ದೀರಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಯುಪಿಐ ವೈವಾಟುಗಳಿಗೆ ವಹಿವಾಟಿನ ಮಿತಿಯನ್ನು ನೋಡಿಕೊಂಡು ರೂಪೇ ಕ್ರೆಡಿಟ್ ಕಾರ್ಡ್ ಅನ್ನು ಬಳಸಬಹುದು. ಹೀಗೆ ಯುಪಿಐ ಪಾವತಿ ಮೂಲಕ ರೂಪವಾಗಿ ಬಳಸಿಕೊಳ್ಳಬಹುದು.

Leave A Reply

Your email address will not be published.