Toll Tax: ಕಾರು ಖರೀದಿಸುವಾಗ ರಸ್ತೆ ಟ್ಯಾಕ್ಸ್ ಕಟ್ಟಿದ್ದರೂ ಮತ್ತೆ ಟೋಲ್ ಟ್ಯಾಕ್ಸ್ ಏಕೆ ಕಟ್ಟಲೇಬೇಕು, ಇಲ್ಲಿದೆ ಉತ್ತರ.

Advertisement
ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿ ವಾಹನ ಖರೀದಿಸುವ ಸಮಯದಲ್ಲಿ ರಸ್ತೆ ತೆರಿಗೆಯನ್ನು ಕಟ್ಟಲೇಬೇಕು. ಇದು ನಮ್ಮ ದೇಶದಲ್ಲಿ ಮಾತ್ರವಲ್ಲ ಪ್ರಪಂಚದ ಬಹುತೇಕ ದೇಶಗಳಲ್ಲಿ ರಸ್ತೆ ತೆರಿಗೆ ಕಟ್ಟುವ ಪದ್ಧತಿ ಇದೆ. ರಸ್ತೆ ತೆರಿಗೆ ಬೇರೆ ಬೇರೆ ದೇಶದಲ್ಲಿ ಬೇರೆ ಬೇರೆ ರೀತಿಯಲ್ಲಿ ಇರುತ್ತದೆ. ಅದೇನೇ ಇರಲಿ ನಾವು ದೇಶದಲ್ಲಿ ಕಟ್ಟುವ ವಾಹನ ಗಳ ರಸ್ತೆ ಟ್ಯಾಕ್ಸ್ ಬಗ್ಗೆ ಮಾತನಾಡೋಣ. ನಿಮ್ಮ ವಾಹನ ಯಾವುದೇ ಆಗಿರಲಿ ದ್ವಿಚಕ್ರ ವಾಹನಗಳು, ಖಾಸಗಿ ಅಥವಾ ವಾಣಿಜ್ಯ ವಾಹನ ಹೀಗೆ ಯಾವುದೇ ವಾಹನ ಆಗಿರಲಿ ಅದಕ್ಕೆ ರಾಜ್ಯ ಸರ್ಕಾರ ತೆರಿಗೆ ಸಂಗ್ರಹಿಸುತ್ತೆ.
ಅಂದಹಾಗೆ ನಿಮ್ಮ ವಾಹನವನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆಗೆದುಕೊಂಡು ಹೋದರೆ ಅಂದರೆ ಅಲ್ಲಿ ನೋಂದಣಿ ಬದಲಾಯಿಸಿಕೊಂಡರೆ ಅಲ್ಲಿ ಹೋದ ನಂತರವೂ ಪಾವತಿಸಬೇಕಾಗುತ್ತದೆ ಯಾವ ವಾಹನಕ್ಕೆ ಎಷ್ಟರಮಟ್ಟಿಗೆ ತೆರಿಗೆ ಮೊತ್ತ ಇರುತ್ತೆ ಎಂಬುದನ್ನು ತಿಳಿದುಕೊಳ್ಳಬೇಕು. ರಸ್ತೆ ತೆರಿಗೆ ಮೊತ್ತ ನೀವು ಖರೀದಿಸುವ ವಾಹನದ ವೆಚ್ಚ ಹಾಗೂ ಅದರ ವೇರಿಯೆಂಟ್ ಗಳ ಮೇಲೆ ಟ್ಯಾಕ್ಸ್ ಅವಲಂಬಿತವಾಗಿರುತ್ತದೆ. ಹ್ಯಾಚ್ ಬ್ಯಾಕ್(Hatchback), ಸೇಡಾನ್(Sedan), ಎಸ್ ಯು ವಿ (SUV) ಇಂತಹ ಕಾರುಗಳ ರಸ್ತೆ ತೆರಿಗೆ ಒಂದು ದರವಾಗಿದ್ದರೆ ದ್ವಿಚಕ್ರ ವಾಹನಗಳ ರಸ್ತೆ ತೆರಿಗೆ ಬೇರೆಯಾಗಿರುತ್ತದೆ. ಇನ್ನು ಟ್ರಕ್ (Truck ), ಬಸ್ (Bus) ಮೊದಲದ ವಾಣಿಜ್ಯ ವಾಹನಗಳ ತೆರಿಗೆ ಇನ್ನಷ್ಟು ಜಾಸ್ತಿ.
ರಸ್ತೆ ತೆರಿಗೆಯನ್ನು ಮತ್ತೆ ಮತ್ತೆ ಪಾವತಿಸುವ ಅಗತ್ಯ ಇರುವುದಿಲ್ಲ. ವಾಹನ ನೋಂದಣಿಯ ಸಮಯದಲ್ಲಿಯೇ ರಸ್ತೆ ತೆರಿಗೆಯನ್ನು ಪಾವತಿಸಿಕೊಳ್ಳಲಾಗುತ್ತದೆ. ಆದರೆ ಇದು ಖಾಸಗಿ ವಾಹನಗಳನ್ನು ಖರೀದಿಸುವಾಗ ಮಾತ್ರ ಅನ್ವಯವಾಗುವ ನಿಯಮ. ವಾಹನಗಳಿಗೆ ಸಂಬಂಧಪಟ್ಟ ಹಾಗೆ ನೋಡುವುದಾದರೆ ಅದಕ್ಕೆ ವಾರ್ಷಿಕ ರಸ್ತೆ ತೆರಿಗೆ ಕೂಡ ಪಾವತಿಸಬೇಕು ಇಲ್ಲದೆ ಇದ್ದಲ್ಲಿ ವಾಹನವನ್ನು ಸಂಬಂಧ ಪಟ್ಟವರು ವಶಕ್ಕೆ ತೆಗೆದುಕೊಳ್ಳಬಹುದು.
ರಸ್ತೆ ತೆರಿಗೆ ಮತ್ತು ಟೋಲ್ ತೆರಿಗೆ:
Advertisement
ಈ ಎರಡರ ನಡುವೆ ಇರುವ ವ್ಯತ್ಯಾಸ ಏನು ಎಂಬುದನ್ನು ತಿಳಿದುಕೊಳ್ಳಬೇಕು. ಸುಲಭವಾಗಿ ಹೇಳುವುದಾದರೆ ರಸ್ತೆ ತೆರಿಗೆ ಎನ್ನುವುದು ಒಂದು ಬಾರಿ ಭರಿಸಬೇಕಾದ ತೆರಿಗೆ. ನೀವು ವಾಹನ ಖರೀದಿಸಿದ ನಂತರ ಆ ಸಮಯದಲ್ಲಿ ಜಿಲ್ಲೆಯ ಆರ್ ಟಿ ಓ (RTO) ಈ ತೆರಿಗೆಯನ್ನು ಸಂಗ್ರಹಿಸುತ್ತದೆ. ಆದರೆ ನೀವು ಟೋಲ್ ರಸ್ತೆಯಲ್ಲಿ ಪ್ರಯಾಣಿಸಬೇಕು ಅಂದರೆ ನೀವು ಟೋಲ್ ತೆರಿಗೆ ಪಾವತಿಸಬೇಕಾಗುತ್ತದೆ ಇದು ಇಂಡೈರೆಕ್ಟ್ ಟ್ಯಾಕ್ಸ್ (Indirect Tax) ಆಗಿದೆ.
ಇನ್ನು ರಸ್ತೆ ತೆರಿಗೆಯನ್ನು ಖರೀದಿಸುವ ಎಲ್ಲಾ ವಾಹನಗಳ ಮೇಲೆಯೂ ವಿಧಿಸಲಾಗುತ್ತದೆ ಆದರೆ ಟೋಲ್ ತೆರಿಗೆ ಯಾವ ಹೆದ್ದಾರಿಗಳಲ್ಲಿ ಟೋಲ್ ಇದೆಯೋ ಆ ಸ್ಥಳದಲ್ಲಿ ಮಾತ್ರ ಸಂಗ್ರಹಿಸಲಾಗುತ್ತದೆ. ಇನ್ನು ಟೋಲ್ ತೆರಿಗೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸಂಗ್ರಹಿಸುತ್ತದೆ. ಇಲ್ಲಿ ಬೈಕ್ ಮೇಲೆ ಟೋಲ್ ಟ್ಯಾಕ್ಸ್ (Toll Tax) ಇರುವುದಿಲ್ಲ ಎಂಬುದನ್ನು ಗಮನಿಸಿ ಏಕೆಂದರೆ ಬೈಕು ಖರೀದಿಸುವಾಗ ರಸ್ತೆ ಟ್ಯಾಕ್ಸ್ ಕಟ್ಟಿದರೆ ಮುಗಿತು. ಮತ್ತೆ ಟೋಲ್ ಟ್ಯಾಕ್ಸ್ ಇರುವುದಿಲ್ಲ.
ಖಾಸಗಿ ಹಾಗೂ ವಾಣಿಜ್ಯ ವಾಹನಗಳ ಮೇಲಿನ ತೆರಿಗೆಯಲ್ಲಿ ವ್ಯತ್ಯಾಸ:
ಖಾಸಗಿ ವಾಹನಗಳಿಗೆ ಖರೀದಿಸುವ ಸಮಯದಲ್ಲಿ ನೀವು ರಸ್ತೆ ತೆರಿಗೆ ಕಟ್ಟಿದರೆ ಮುಗಿಯಿತು. ಆದರೆ ವಾಣಿಜ್ಯ ವಾಹನಗಳಿಗೆ ಹಾಗಲ್ಲ ವಾರ್ಷಿಕ ರಸ್ತೆ ತೆರಿಗೆ ಕೂಡ ಪಾವತಿಸಬೇಕಾಗುತ್ತದೆ. ವಾಣಿಜ್ಯ ವಾಹನಗಳು ರಸ್ತೆಯಲ್ಲಿ ಓಡಿರಲಿ ಅಥವಾ ಓಡದೆ ಇರಲಿ ವಾರ್ಷಿಕ ತೆರಿಗೆಯನ್ನು ಮಾತ್ರ ಪ್ರತಿ ವಾಣಿಜ್ಯ ವಾಹನದ ಮಾಲೀಕ ಭರಿಸಲೇಬೇಕು.
ಇನ್ನು ರಸ್ತೆ ತೆರಿಗೆ ವಾಹನ ವೆಚ್ಚದ ಒಂದು ಭಾಗ. ಅದೇ ರೀತಿ ಟೋಲ್ ತೆರಿಗೆಯನ್ನು ರಸ್ತೆಯ ಉದ್ದದ ಆಧಾರದ ಮೇಲೆ ಸಂಗ್ರಹಿಸಲಾಗುತ್ತದೆ. ಇನ್ನು ಟೋಲ್ ತೆರಿಗೆ ನೀವು ಹೆದ್ದಾರಿಯಲ್ಲಿ, ಸೇತುವೆ, ಟೋಲ್ ರಸ್ತೆಗಳು ಇಂತಹ ಸ್ಥಳದಲ್ಲಿ ಹೋದಾಗ ಮಾತ್ರ ಕಟ್ಟಬೇಕು. ಸಾಧಾರಣ ನಿತ್ಯ ಓಡಾಡುವ ರಸ್ತೆಗಳಲ್ಲಿ ಟೋಲ್ ಇರುವುದಿಲ್ಲ
Advertisement