Marriage Loan: ಮದುವೆ ಆಮಂತ್ರಣ ಪತ್ರಿಕೆ ಇದ್ದರೆ ಸಿಗುತ್ತೆ 20 ಲಕ್ಷ ಲೋನ್, ಈ ರೀತಿ ಅರ್ಜಿ ಸಲ್ಲಿಸಿ.

Advertisement
ಇತ್ತೀಚೆಗೆ ಮದುವೆ ಖರ್ಚು ಎಂಬುದು ನಾವು ಅಂದುಕೊಂಡ ಹಾಗೇ ಖರ್ಚು ವೆಚ್ಚಗಳು ಆಗೋದಿಲ್ಲ, ಪ್ರತಿಯೊಬ್ಬರಿಗೂ ಮದುವೆ ಗ್ರಾಂಡ್ (Grand) ಆಗೇ ನಡೆಯಬೇಕು ಎಂಬ ಕನಸು ಇರುತ್ತದೆ. ಆದ್ರೆ ಆರ್ಥಿಕ ಸಮಸ್ಯೆಯಿಂದ ಗ್ರಾಂಡ್ ಮದುವೆ ಸಾಧ್ಯವಾಗುವುದಿಲ್ಲ. ಹಾಗಾಗಿ ಕನಸನ್ನು ಬದಿಗಿಟ್ಟು,ಸರಳವಾಗಿ ಮದುವೆಯಾಗಲು ಮುಂದಾಗ್ತಾರೆ. ಆದರೆ ಮದುವೆಯನ್ನು ಬಹಳ ಅದ್ದೂರಿಯಾಗಿ ಮಾಡಬೇಕು ಅನ್ನುವವರಿಗೆ ಸುಲಭವಾಗಿ ಸಾಲ ದೊರೆಯಾಲಿದೆ.
ಯಾವ ಬ್ಯಾಂಕ್ ಇಲ್ಲಿದೆ ಮಾಹಿತಿ:
ಸ್ಟೇಟ್ ಬ್ಯಾಂಕ್‌ನ ನಿಂದ (State Bank) ಎಸ್‌ಬಿಐ ಮದುವೆ ಸಾಲ ಯೋಜನೆಯ ಸಹಾಯದಿಂದ, ನೀವು ಆನ್‌ಲೈನ್ ಸಾಲಕ್ಕಾಗಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಈ ಮದುವೆ ಸಾಲಕ್ಕೆ ಅರ್ಜಿ ಸಲ್ಲಿಸುವ ವೇಳೆ ಕೆಲ ದಾಖಲೆಗಳನ್ನು (Documentation) ನೀಡಬೇಕಾಗುತ್ತದೆ. ಸಾಲಕ್ಕೆ ಕಾರಣ ಮದುವೆ ಎಂದು ನೀವು ನಮೂದಿಸಬೇಕಾಗುತ್ತದೆ
Advertisement
ಅರ್ಜಿ ಸಲ್ಲಿಸಲು ಷರತ್ತು ಗಳೇನು:
ಮದುವೆಗೆ ಸಾಲ ಮಾಡುವವರಿಗೆ ಮಾಸಿಕ 15 ಸಾವಿರದಿಂದ 25 ಸಾವಿರ ಆದಾಯ ಇರಬೇಕು, ವೃತ್ತಿಪರರು, ಸ್ವಯಂ ಉದ್ಯೋಗಿಗಳು, ತಿಂಗಳ ವೇತನ ಪಡೆಯುವವರು ಮದುವೆ ಸಾಲ ತೆಗೆದುಕೊಳ್ಳಬಹುದು. ಎಸ್‌ಬಿಐ ಎಕ್ಸ್‌ಪ್ರೆಸ್ ಲೋನ್ (Sbi Xpress Loan)ಮತ್ತು ಎಸ್‌ಬಿಐ ಕ್ಲಿಕ್ ಪರ್ಸನಲ್ ಲೋನ್ (Sbi Click Personal Loan)ಮುಂತಾದ ಎಸ್‌ಬಿಐನ ವೈಯಕ್ತಿಕ ಸಾಲ ಯೋಜನೆಯಡಿ ನೀವು ಈ ಸಾಲವನ್ನು ಪಡೆಯಬಹುದು.
ಈ ದಾಖಲೆಗಳು ಬೇಕು:
ಆಧಾರ್ ಕಾರ್ಡ್(Adhaar card ) , ಪ್ಯಾನ್ ಕಾರ್ಡ್ (Pan Card)
ಬ್ಯಾಂಕ್ ಪಾಸ್ಬುಕ್ (Bank Pass Book), ಮತದಾರರ ಗುರುತಿನ ಚೀಟಿ, ದೂರವಾಣಿ ಸಂಖ್ಯೆ , ಆದಾಯ ಪ್ರಮಾಣಪತ್ರ, ಈ ಎಲ್ಲಾ ದಾಖಲೆಗಳನ್ನು ನಿಮ್ಮೊಂದಿಗೆ ಹೊಂದಿರುವುದು ಕಡ್ಡಾಯವಾಗಿದೆ. ಈ ಸಾಲ ಯೋಜನೆಯ ಮೂಲಕ ನೀವು ಇತರ ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯುತ್ತೀರಿ.
Advertisement