RBI ತನ್ನ ರೆಪೋ ದರವನ್ನು ಏರಿಸಿದ ನಂತರ ಬ್ಯಾಂಕ್ ಗಳಲ್ಲಿ ಸಾಲಕ್ಕೆ ವಿಧಿಸಲಾಗುವ ಬಡ್ಡಿ ದರದಲ್ಲಿ ಹೆಚ್ಚಳವಾಗಿತ್ತು ಅದೇ ರೀತಿ ಗ್ರಾಹಕರು ಠೇವಣಿ ಇಡುವ ಎಫ್ ಡಿ ಬಡ್ಡಿ ದರವನ್ನು ಕೂಡ ಕೆಲವು ಬ್ಯಾಂಕ್ಗಳು ಹೆಚ್ಚಿಸಿವೆ. ಇದೀಗ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಒಂದಾದ Bank of Baroda, ನಿನ್ನೆಯಿಂದ ಅಂದರೆ ಮಾರ್ಚ್ 17 2023 ರಿಂದ FD ದರವನ್ನು ಹೆಚ್ಚಿಸಿರುವುದಾಗಿ ಘೋಷಿಸಿದೆ. ಇದರ ಪ್ರಯೋಜನವನ್ನು ಸಾಮಾನ್ಯ ಗ್ರಾಹಕರು ಹಾಗೂ ಎನ್ ಆರ್ ಓ ಮತ್ತು ಎನ್ ಆರ್ ಇ ಗ್ರಾಹಕರು ಕೂಡ ಪಡೆದುಕೊಳ್ಳಬಹುದು. ಪ್ರತಿ ಡೆಪಾಸಿಟ್ ಮೇಲೆ 0.25 ಪರ್ಸೆಂಟ್ ಹೆಚ್ಚಿಸಿದೆ. ಎರಡು ಕೋಟಿಗೂ ಕಡಿಮೆ ಠೇವಣಿ ಇದ್ದರೆ ಈ ಒಟ್ಟಿದರ ಲಭ್ಯ.
Bank of Baroda ತೆರಿಗೆ ಉಳಿತಾಯ ಅವಧಿ ಠೇವಣಿ ಮೇಲೆ ಹಾಗೂ ಎಫ್ ಡಿ ಮೇಲೆ ಬಡ್ಡಿ ದರವನ್ನು 25 ಬೇಸಿಸ್ ಆಧಾರದ ಮೇಲೆ ಹೆಚ್ಚಿಸಿದೆ. ಅಂದರೆ 0.25% ನಷ್ಟು ಹೆಚ್ಚಿಸಿದೆ. ಬ್ಯಾಂಕ್ ಆಫ್ ಬರೋಡಾದ ಉಳಿತಾಯ ಅವಧಿ ಠೇವಣಿ ಬಡ್ಡಿ ದರ ಬದಲಾಗಿದ್ದು ಈ ಕೆಳಗಿನಂತಿದೆ.
- 7 ದಿನಗಳಿಂದ 14 ದಿನಗಳವರೆಗೆ – ಸಾಮಾನ್ಯ ಜನರಿಗೆ: 3%, ಹಿರಿಯ ನಾಗರಿಕರಿಗೆ: 3.50%
- 15 -45 ದಿನಗಳವರೆಗೆ – ಸಾಮಾನ್ಯ ಗ್ರಾಹಕ, 3%, ಹಿರಿಯ ನಾಗರಿಕರಿಗೆ: 3.50%
- 46 -90 ದಿನಗಳವರೆಗೆ – ಸಾಮಾನ್ಯ ಗ್ರಾಹಕ, 4.50%, ಹಿರಿಯ ನಾಗರಿಕರಿಗೆ: 5%
- 91 -180 ದಿನಗಳು – ಸಾಮಾನ್ಯ ಗ್ರಾಹಕ,: 4.50%, ಹಿರಿಯ ನಾಗರಿಕರಿಗೆ: 5%
- 181- 210 ದಿನಗಳು – ಸಾಮಾನ್ಯ ಗ್ರಾಹಕ, 5.25%, ಹಿರಿಯ ನಾಗರಿಕರಿಗೆ: 5.75%
- 211 -270 ದಿನಗಳವರೆಗೆ – ಸಾಮಾನ್ಯ ಗ್ರಾಹಕ,5.75%, ಹಿರಿಯ ನಾಗರಿಕರಿಗೆ: 6.25%
- 271 ದಿನಗಳು ಮತ್ತು ಅದಕ್ಕಿಂತ ಹೆಚ್ಚಿನ ಮತ್ತು 1 ವರ್ಷಕ್ಕಿಂತ ಕಡಿಮೆ – ಸಾಮಾನ್ಯ ಗ್ರಾಹಕ,: 5.75% ಹಿರಿಯ ನಾಗರಿಕರಿಗೆ: 6.25% ಬಡ್ಡಿದರ ಸಿಗುತ್ತದೆ.
Bank of Baroda FD Interest Rate:
- 1 ವರ್ಷ – ಸಾಮಾನ್ಯ ಠೇವಣಿದಾರ- 6.75%, ಹಿರಿಯ ನಾಗರಿಕರಿಗೆ: 7.25%,
- 1 ವರ್ಷದಿಂದ 400 ದಿನಗಳಿಗಿಂತ ಹೆಚ್ಚು – ಸಾಮಾನ್ಯ ಠೇವಣಿದಾರ-6.75%; ಹಿರಿಯ ನಾಗರಿಕರಿಗೆ: 7.25%
- 400 ದಿನಗಳಿಗಿಂತ ಹೆಚ್ಚು ಮತ್ತು 2 ವರ್ಷಗಳವರೆಗೆ – ಸಾಮಾನ್ಯ ಠೇವಣಿದಾರ- 6.75%, ಹಿರಿಯ ನಾಗರಿಕರಿಗೆ: 7.25%
- 2 ವರ್ಷಕ್ಕಿಂತ ಮೇಲ್ಪಟ್ಟು ಮತ್ತು 3 ವರ್ಷಗಳವರೆಗೆ – ಸಾಮಾನ್ಯ ಠೇವಣಿದಾರ- 6.75%; ಹಿರಿಯ ನಾಗರಿಕರಿಗೆ- 7.25%
- 3 ವರ್ಷಕ್ಕಿಂತ ಮೇಲ್ಪಟ್ಟು ಮತ್ತು 5 ವರ್ಷಗಳವರೆಗೆ – ಸಾಮಾನ್ಯ ಠೇವಣಿದಾರ- 6.50%, ಹಿರಿಯ ನಾಗರಿಕರಿಗೆ- 7.15%
- 5 ವರ್ಷದಿಂದ 10 ವರ್ಷಗಳ ಮೇಲ್ಪಟ್ಟು – ಸಾಮಾನ್ಯ ಜನರಿಗೆ- 6.50%, ಹಿರಿಯ ನಾಗರಿಕರಿಗೆ: 7.50% ನಿಗದಿಪಡಿಸಲಾಗಿದೆ.