Bank Failure: ಮುಳುಗಡೆ ಆದ್ರೆ ನೀವು ಠೇವಣಿ ಇಟ್ಟ ಹಣಕ್ಕೆ ಯಾರು ಜವಾಬ್ದಾರರು? ಹೊಸ ನಿಯಮ

Advertisement
ಯು ಎಸ್ (US) ನಲ್ಲಿ ನಡೆದ ಬ್ಯಾಂಕಿಂಗ್ ಕ್ರೈಸಿಸ್ ಭಾರತೀಯ ಠೇವಣಿದಾರರಿಗೂ ತಲೆಬಿಸಿ ಮಾಡಿದ್ದು ಅಮೆರಿಕಾದ ಎರಡು ಬ್ಯಾಂಕುಗಳು ಮುಳುಗಿರುವ ಸುದ್ದಿ ಭಾರತೀಯ ಬ್ಯಾಂಕ್ ಗ್ರಾಹಕರಿಗೆ, ತಮ್ಮ ಬ್ಯಾಂಕ್ ಗಳ ಸುರಕ್ಷತೆಯ ಬಗ್ಗೆಯೂ ಅನುಮಾನ ಆರಂಭವಾಗಿದೆ. ಆರ್ಥಿಕ ಜಗತ್ತಿನಲ್ಲಿ ನಡೆಯುವಂತಹ ಏರಿಳಿತಗಳ ಬಗ್ಗೆ ಆಗಲಿ ಅಥವಾ ಬ್ಯಾಂಕಿಂಗ್ ಸೆಕ್ಟರ್ ಗಳಲ್ಲಿ ಆಗುವ ಬದಲಾವಣೆಗಳಾಗಲಿ ಎಲ್ಲರಿಗೂ ಗೊತ್ತಿರುವುದಿಲ್ಲ.
ಯಾವಾಗ ಎಲ್ಲವೂ ತಲೆ ಮೇಲೆ ಬಂದು ಕುಳಿತುಕೊಳ್ಳುತ್ತೋ ಆಗ ಆಕಾಶವೇ ತಲೆ ಮೇಲೆ ಬಿದ್ದಂತೆ ಆಡುತ್ತಾರೆ. ನಾನು ಮೋಸ ಹೋದನಲ್ಲ ಅಂತ ಆ ಬಳಿಕ ಅರ್ಥವಾಗುತ್ತದೆ. ಎಷ್ಟು ಜನ ಮಕ್ಕಳ ಮದುವೆ ಮಕ್ಕಳ ವಿದ್ಯಾಭ್ಯಾಸ ನಿವೃತ್ತಿಯ ಖರ್ಚು ನಿಭಾಯಿಸಲು ಹೀಗೆ ಹಲವಾರು ಕಾರಣಗಳಿಗೆ ಹಣವನ್ನು ಕೂಡಿಡುತ್ತಾರೆ. ಆದರೆ ವರ್ಷಾನುಗಟ್ಟಲೆ ಕೂಡಿಟ್ಟ ಈ ಹಣವೆಲ್ಲವೂ ಕಳೆದುಕೊಳ್ಳುವ ಪರಿಸ್ಥಿತಿ ಬಂದರೆ ಹೇಗೆ?
ಅಮೆರಿಕದಲ್ಲಿ ಸಿಲಿಕಾನ್ ವ್ಯಾಲಿ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿರುವವರ ಹಣಕ್ಕೆ ಯಾವುದೇ ವಿಮೆ ಇಲ್ಲ ಎಂದು ಸುದ್ದಿಯಾಗಿದೆ ಹಾಗಾದರೆ ಭಾರತದಲ್ಲಿ ಬ್ಯಾಂಕುಗಳಲ್ಲಿ ಠೇವಣಿ ಇಟ್ಟ ಹಣಕ್ಕೆ ಯಾರು ಜವಾಬ್ದಾರರು ? ಒಂದು ವೇಳೆ ಬ್ಯಾಂಕ್ ಮುಳುಗಿ ಹೋದರೆ ಗ್ರಾಹಕರ ಪೂರ್ಣ ಹಣ ಅವರಿಗೆ ಸಿಗುತ್ತಾ? ಜೀವನ ಬ್ಯಾಂಕ್ ನಲ್ಲಿ ಇಟ್ಟು ಹಣಕ್ಕೆ ಗ್ಯಾರಂಟಿ ಏನು ಇದಕ್ಕೆ ಯಾರ ಬಳಿಯು ಉತ್ತರವೇ ಇಲ್ಲ.
Advertisement
ಭಾರತದಲ್ಲಿ ಬ್ಯಾಂಕ್ ಮುಳಗಡೆಯಾದರೆ ಠೇವಣಿದಾರನ ಹಣ ಏನಾಗಬಹುದು ಎಂದು ಹಲವರ ಪ್ರಶ್ನೆ. ಇದಕ್ಕಾಗಿ ಯಾವ ಕಾನೂನು ಇದೆ ಎಂಬುದನ್ನು ನಾವು ಇಲ್ಲಿ ತಿಳಿಸಿಕೊಡುತ್ತೇವೆ. 2001ರಲ್ಲಿ ಸರ್ಕಾರವು ಕಾನೂನಿನ ತಿದ್ದುಪಡಿ ಮಾಡಿತ್ತು. ಇದರ ಪ್ರಕಾರ ಬ್ಯಾಂಕುಗಳಲ್ಲಿ ಠೇವಣಿ ಇಟ್ಟ ಜನರ ಹಣಕ್ಕೆ ವಿಮ ರಕ್ಷಣೆಯ ಮಿತಿಯನ್ನು ಹೆಚ್ಚಿಸಿದೆ. ಈ ಮೊದಲು ಕೇವಲ ಒಂದು ಲಕ್ಷ ರೂಪಾಯಿ ವಿಮಾ ರಕ್ಷಣೆ ಇದ್ದಿದ್ದು ಈಗ ಐದು ಲಕ್ಷ ರಕ್ಷಣೆಯನ್ನು ಸರ್ಕಾರ ಘೋಷಿಸಿದೆ.
ಸಾಮಾನ್ಯವಾಗಿ ದೇಶದಲ್ಲಿ ಬ್ಯಾಂಕ್ ನಲ್ಲಿ ಡಿಪೋಸಿಟ್ ಇಟ್ಟ ಹಣಕ್ಕೆ ಡೆಪಾಸಿಟ್ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ವಿಮೆ ನೀಡುತ್ತದೆ. ಅಂದರೆ ಯಾವುದಾದರೂ ಬ್ಯಾಂಕ್ ಮುಳುಗಿದರೆ ಈ ಕಂಪನಿಯು 5 ಲಕ್ಷದವರೆಗೆ ಠೇವಣಿದಾರರ ಮೊತ್ತವನ್ನ ಠೇವಣಿ ಧಾರಣೆಗೆ ನೀಡುತ್ತದೆ. ಉಳಿತಾಯ ಖಾತೆ ಚಾಲ್ತಿ ಖಾತೆ ಮರುಕಳಿಸುವ ಖಾತೆ ಈ ರೀತಿಯ ಎಲ್ಲಾ ಬಗೆಯ ಠೇವಣಿಗಳಿಗೆ ಈ ನಿಯಮ ಅಪ್ಲೈ ಆಗಲಿದೆ. ಇನ್ನು ಒಬ್ಬ ವ್ಯಕ್ತಿ ಬ್ಯಾಂಕಿನಲ್ಲಿ ಬಹು ಖಾತೆ ಹೊಂದಿದ್ದರೆ ಅಥವಾ ವಿವಿಧ ರೀತಿಯ ಖಾತೆಯನ್ನು ಹೊಂದಿದ್ದರೆ ಬ್ಯಾಂಕ್ ಕೊಲ್ಯಾಪ್ಸ್ /ಮುಳುಗಡೆ ಆದಲ್ಲಿ, ಆಗಲು ಪರಿಹಾರವಾಗಿ ರೂ.5 ಲಕ್ಷ ಮಾತ್ರ ಸಿಗುತ್ತದೆ.
ಒಂದು ಉದಾಹರಣೆಯನ್ನು ನೋಡುವುದಾದರೆ ಒಬ್ಬ ವ್ಯಕ್ತಿ ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯನ್ನು ಆರಂಭಿಸಿ ಅದರಲ್ಲಿ 3 ಲಕ್ಷ ಇಟ್ಟಿದ್ದಾನೆ. ಅದೇ ರೀತಿ ಅದೇ ಬ್ಯಾಂಕಿನಲ್ಲಿ ಎಫ್ಡಿ ಠೇವಣಿಯಾಗಿ ಮೂರು ಲಕ್ಷ ಇಟ್ಟಿದ್ದಾನೆ ಎಂದು ಭಾವಿಸಿ. ಆಗ ಬ್ಯಾಂಕ್ ಮುಳುಗಡೆಯಾದರೆ ಆತನಿಗೆ ಪರಿಹಾರವಾಗಿ ಸಿಗುವುದು ಕೇವಲ ಐದು ಲಕ್ಷ ರೂಪಾಯಿಗಳು ಮಾತ್ರ. ಇನ್ನು ಒಬ್ಬ ವ್ಯಕ್ತಿ ಒಂದು ಬ್ಯಾಂಕ್ ನಲ್ಲಿ ಒಂದು ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದರೆ ಬ್ಯಾಂಕ್ ಮುಳುಗಡೆಯಾದರೆ ಆತನಿಗೆ ಕೇವಲ ಒಂದು ಲಕ್ಷ ರೂಪಾಯಿ ಪರಿಹಾರ ಸಿಗುತ್ತದೆಯೇ ಹೊರತು 5 ಲಕ್ಷಗಳನ್ನು ನಿರೀಕ್ಷಿಸುವ ಹಾಗಿಲ್ಲ.
ಬ್ಯಾಂಕ್ ನಲ್ಲಿ, ಠೇವಣಿ ಇಟ್ಟ ಹಣ 98%ರಷ್ಟು ಸುರಕ್ಷಿತ. ಸರ್ಕಾರ 27 ವರ್ಷಗಳ ನಂತರ 2021 ಡಿಸೆಂಬರ್ ಒಂದರಲ್ಲಿ ಈ ಹೊಸ ನಿಯಮದ ಘೋಷಣೆಯನ್ನು ಮಾಡಿತು. 1 ಲಕ್ಷದಿಂದ 5 ಲಕ್ಷಕ್ಕೆ ಠೇವಣಿ ವಿಮೆಯನ್ನು ಹೆಚ್ಚಿಸಿತ್ತು. ಆರ್ ಬಿ ಐ ಬ್ಯಾಂಕಿನ ಮೇಲೆ ನಿಷೇಧ ಹೇರಿದರೆ ಹೇರಿದ 90 ದಿನಗಳಲ್ಲಿ ಠೇವಣಿದಾರನಿಗೆ ಆತನ ಹಣ ಮರಳಿ ಸಿಗುತ್ತದೆ ಎಂದು ಸರ್ಕಾರ ತಿಳಿಸಿದೆ ಅಲ್ಲಿಗೆ ಭಾರತದಲ್ಲಿ 98 ರಷ್ಟು ಬ್ಯಾಂಕುಗಳ ಠೇವಣಿದಾರರು ವಿಮೆಯ ರಕ್ಷಣೆಯನ್ನು ಪಡೆಯುತ್ತಾರೆ
Advertisement