Karnataka Times
Trending Stories, Viral News, Gossips & Everything in Kannada

SBI: ಬಡವ ಶ್ರೀಮಂತ ಎನ್ನದೆ ತನ್ನ ಎಲ್ಲಾ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟ ಸ್ಟೇಟ್ ಬ್ಯಾಂಕ್ !

advertisement

ಇಂದು ಪ್ರತಿಯೊಬ್ಬ ವ್ಯಕ್ತಿ ಕೂಡ ಸೆವಿಂಗ್ ಬಗ್ಗೆ ಹೆಚ್ಚಿನ ಆಸಕ್ತಿ ಯನ್ನು ನೀಡುತ್ತಾನೆ. ಹೌದು ದುಡಿದ ಸ್ವಲ್ಪ ಭಾಗ ವಾದರೂ ಇಂದು ಸೇವಿಂಗ್ ಮಾಡಿದರೆ ಮಾತ್ರ ಮುಂದಿನ ದಿನಕ್ಕೆ ಸುಲಭ ವಾಗಬಹುದು‌. ಹೌದು ಇಂದು ಹಣ ಸೇವಿಂಗ್ ಮಾಡಲು ಹಲವು ರೀತಿಯ ಅವಕಾಶ ಇದೆ. ಬ್ಯಾಂಕ್, Post Office , LIC ಹೀಗೆ ವಿವಿಧ ಸಂಸ್ಥೆ ಗಳಲ್ಲಿ ಸೇವಿಂಗ್ ಮಾಡಲು ಅವಕಾಶ ಕೂಡ ಇರಲಿದೆ. ಆದರೆ ಬ್ಯಾಂಕ್ ಗಳಲ್ಲಿ ಎಫ್ ಡಿ ಇಡುವವರ ಸಂಖ್ಯೆ ಇಂದು ಹೆಚ್ಚಾಗಿದೆ.ಆದರಲ್ಲೂ ದೇಶದ ಪ್ರಮುಖ ಬ್ಯಾಂಕ್ ಪ್ರತಿಷ್ಠಿತ ಬ್ಯಾಂಕ್ ಎಂದೆನಿಸಿರುವ ಸ್ಟೇಟ್ ಬ್ಯಾಂಕ್ ಇದೀಗ ಗ್ರಾಹಕರಿಗೆ ಎಫ್ ಇಡಲು ಖುಷಿ ಸುದ್ದಿ ಯೊಂದನ್ನು ನೀಡಿದೆ. ಹೌದು ಎಫ್ ಡಿ ಮೇಲೆ ಬಡ್ಡಿದರ ಹೆಚ್ಚು ಮಾಡಿದ್ದು ಈ ಬಗ್ಗೆ ಮಾಹಿತಿ‌ ಇಲ್ಲಿದೆ.

ಇಂದು SBI ಬ್ಯಾಂಕ್ ಗ್ರಾಹಕರಿಗಾಗಿ ಹಲವು ರೀತಿಯ ಆಕರ್ಷಿತ ಸ್ಕೀಮ್ ಗಳನ್ನು ಪರಿಚಯಿಸುತ್ತ, ಹೆಚ್ಚಿನ ಸೇವೆಗಳನ್ನು ಗ್ರಾಹಕರಿಗಾಗಿ ನೀಡುತ್ತ ಜನರನ್ನು ಸೆಳೆಯುತ್ತಲೇ ಬಂದಿದೆ. ಅದೇ ರೀತಿ ಎಸ್ಬಿಐ ತನ್ನ ಗ್ರಾಹಕರಿಗೆ ಇದೀಗ ಭರ್ಜರಿ ಗುಡ್ ನ್ಯೂಸ್ ನೀಡಿದ್ದು 180 ದಿನಗಳ ಮುಕ್ತಾಯದ ಎಫ್ಡಿಗಳ ಮೇಲಿನ ಬಡ್ಡಿಯನ್ನು 211 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆಯ ಅವಧಿಗೆ ಹೆಚ್ಚು ಮಾಡಿದ್ದು ಈ ಎಫ್ಡಿಗಳ ಮೇಲಿನ ಬಡ್ಡಿಯನ್ನು ಕೂಡ ಹೆಚ್ಚು ಮಾಡಿದೆ. ಹೌದು ಸುಮಾರು ಶೇಕಡಾ 0.25ರಷ್ಟು ಹೆಚ್ಚು ಮಾಡಿದೆ.

 

Image Source: Naidunia

 

advertisement

ಈಗಾಗಲೇ RBI ಕೂಡ ಈ ಬಗ್ಗೆ ಹೊಸ ನಿಯಮ ಜಾರಿ ಗೊಳಿಸಿದೆ. ಅಂದರೆ ಎಫ್ ಡಿ ಇಡುವ ಮಿತಿ ಕೂಡ ಹೆಚ್ಚಿಸಿದೆ. ಬ್ಯಾಂಕುಗಳು ಈಗ 2 ಕೋಟಿ ರೂ.ಗಳಿಂದ 3 ಕೋಟಿ ರೂ.ಗೆ ಮಿತಿಯನ್ನು ಹೆಚ್ಚಿಸಲು ಅವಕಾಶ ನೀಡಿದೆ. ಎಸ್ಬಿಐ ಬ್ಯಾಂಕಿನ ಈ ಹೊಸ ದರ 3 ಕೋಟಿ ರೂ.ವರೆಗಿನ ಎಫ್ಡಿಗಳಿಗೆ ಮಾತ್ರ ಇರಲಿದ್ದು ಈ ಹೊಸ ದರ 15 ಜೂನ್ 2024 ರಿಂದ ಜಾರಿಗೆ ಕೂಡ ಬರಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಎಫ್ ಡಿ ದರ ಹೆಚ್ಚಾಗಿದ್ದು 7 ದಿನಗಳಿಂದ 45 ದಿನದ ವರೆಗೆ ಸಾಮಾನ್ಯ ಜನರಿಗೆ 3.50% ಬಡ್ಡಿ, ಹಿರಿಯ ನಾಗರಿಕರಿಗೆ 4%, ಹಾಗೆಯೇ 46 ದಿನಗಳಿಂದ 179 ದಿನಗಳ ವರೆಗೆ , ಸಾಮಾನ್ಯ ಜನರಿಗೆ 5.50% ಹಿರಿಯ ನಾಗರಿಕರಿಗೆ 6%, 180 ದಿನಗಳಿಂದ 210 ದಿನಗಳ ವರೆಗೆ ಸಾಮಾನ್ಯ ಜನರಿಗೆ 6.25% ಹಿರಿಯ ನಾಗರಿಕರಿಗೆ , 6.75% ಬಡ್ಡಿ ನೀಡಲಿದೆ. ಹಾಗೆಯೇ 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಹೂಡಿಕೆಗೆ ಸಾಮಾನ್ಯ ಜನರಿಗೆ 6.50% ಹಿರಿಯ ನಾಗರಿಕರಿಗೆ 7% ಬಡ್ಡಿ ನೀಡಲಿದೆ.

ಅದೇ ರೀತಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2 ಕೋಟಿ ರೂಪಾಯಿವರೆಗಿನ ಚಿಲ್ಲರೆ ಠೇವಣಿಗಳ ಮೇಲಿನ ಸ್ಥಿರ ಠೇವಣಿ ಬಡ್ಡಿ ದರಗಳನ್ನು ಕೂಡ ಹೆಚ್ಚು ಮಾಡಿದ್ದು ನಿಶ್ಚಿತ ಠೇವಣಿ ಖಾತೆಗಳ ಮೇಲಿನ ಬಡ್ಡಿ ದರಗಳನ್ನು ಬ್ಯಾಂಕ್ 25 ರಿಂದ 75 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚು ಕೂಡ ಮಾಡಿದೆ, ಹಿರಿಯ ನಾಗರಿಕರು ತಮ್ಮ ಸ್ಥಿರ ಠೇವಣಿಗಳ ಮೇಲೆ 50 ಅಂಶಗಳ ಹೆಚ್ಚುವರಿ ಬಡ್ಡಿ ಪಡೆಯಲು ಅವಕಾಶ ಇರಲಿದ್ದು ಈ ಸೌಲಭ್ಯವು 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಯ ಎಲ್ಲಾ ಎಫ್‌ಡಿಗಳಿಗೆ ಅನ್ವಯ ಕೂಡ ಆಗಲಿದೆ.

advertisement

Leave A Reply

Your email address will not be published.