ಒಂದು ವೇಳೆ ನಿಮಗೂ ಕೂಡ ಯಾವುದಾದರೂ ವಸ್ತುವನ್ನು ಖರೀದಿಸುವುದಕ್ಕೆ ಅಥವಾ ಯಾವುದೇ ಕೆಲಸಕ್ಕೆ ಹಣಕಾಸಿನ ಅಗತ್ಯತೆ ಇದ್ರೆ ಆ ಸಂದರ್ಭದಲ್ಲಿ ಬಹುತೇಕ ಹೆಚ್ಚಿನ ಜನರು ಪರ್ಸನಲ್ ಲೋನ್ ಪಡೆದುಕೊಳ್ಳುವಂತಹ ಆಯ್ಕೆಯನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಈ ಲೇಖನದ ಮೂಲಕ ಯಾವ ರೀತಿಯಲ್ಲಿ ಹದಿನೈದು ಸಾವಿರ ರೂಪಾಯಿ ತಿಂಗಳ ಸಂಬಳದಲ್ಲಿ ಕೂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಂತಹ ಪ್ರತಿಷ್ಠಿತ ಬ್ಯಾಂಕಿನಲ್ಲಿ 50,000 ದಿಂದ 20 ಲಕ್ಷ ರೂಪಾಯಿಗಳವರೆಗೆ ಪರ್ಸನಲ್ ಲೋನ್ (Personal Loan) ಪಡೆದುಕೊಳ್ಳಬಹುದು ಎನ್ನುವುದನ್ನ ಹೇಳಲಿದ್ದೇವೆ.
ಲೋನ್ ಪಡೆದುಕೊಳ್ಳಲು ಬೇಕಾಗಿರುವಂತಹ ಅರ್ಹತೆಗಳು!
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ ನಿಮ್ಮ ಸೇವಿಂಗ್ ಅಕೌಂಟ್ ಇರಬೇಕು ಹಾಗೂ ಕನಿಷ್ಠ ಪಕ್ಷ ನಿಮಗೆ 21ರಿಂದ 60 ವರ್ಷ ನಡುವೆ ವಯಸ್ಸಾಗಿರಬೇಕು.
- ಸರ್ಕಾರಿ ಕೆಲಸಗಾರ, ಪಬ್ಲಿಕ್ ಸೆಕ್ಟರ್ ನ ಉದ್ಯೋಗಿ, ಸ್ವಂತ ಆದಾಯವನ್ನು ಹೊಂದಿರುವಂತಹ ಜನರು ಮಾತ್ರ ಲೋನ್ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
- ಮಿನಿಮಮ್ 15 ಸಾವಿರ ರೂಪಾಯಿಗಳ ತಿಂಗಳ ಸಂಬಳವನ್ನು ಹೊಂದಿರುವವರಿಗೆ ಮಾತ್ರ ಲೋನ್ ಸಿಗುತ್ತೆ. ಇದರ ಜೊತೆಗೆ ಅವರು ಮಾಡುತ್ತಿರುವ ಕೆಲಸದಲ್ಲಿ ಕನಿಷ್ಠ ಪಕ್ಷ ಒಂದು ವರ್ಷದ ಅನುಭವ ಇರಬೇಕು.
ಪ್ರಮುಖ ಡಾಕ್ಯುಮೆಂಟ್ಸ್ ಗಳು!
- ಐಡಿ ರೂಪದಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್ ಪೋರ್ಟ್ ಅಥವಾ ವೋಟರ್ ಐಡಿಗಳಲ್ಲಿ ಯಾವುದೂ ಕೂಡ ನಡೆಯುತ್ತೆ.
- ನಿವಾಸ ಪ್ರಮಾಣ ಪತ್ರವನ್ನು ನೀಡಬೇಕಾಗಿದೆ.
- ಆದಾಯ ಪ್ರಮಾಣ ಪತ್ರದ ರೂಪದಲ್ಲಿ ಮೂರು ತಿಂಗಳುಗಳ ಸ್ಯಾಲರಿ ಸ್ಲಿಪ್, ಕಳೆದ ಆರು ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಹಾಗೂ ಐಟಿಆರ್ ಸಲಿಕೆ ಮಾಡಿರುವಂತಹ ಡಾಕ್ಯುಮೆಂಟ್ಸ್ ಅನ್ನು ಒದಗಿಸ ಬೇಕಾಗಿರುತ್ತದೆ.
- ಪಾಸ್ಪೋರ್ಟ್ ಸೈಜ್ ಫೋಟೋ ಕಡ್ಡಾಯ.
ಲೋನ್ ಗೆ ಅರ್ಜಿ ಸಲ್ಲಿಸುವ ವಿಧಾನ!
- ಮೊದಲಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ ಗೆ ನೀವು ಹೋಗಬೇಕಾಗಿರುತ್ತದೆ.
- ಇದಾದ ನಂತರ ಪರ್ಸನಲ್ ಲೋನ್ (Personal Loan) ಆಪ್ಷನ್ ಮೇಲೆ ಕ್ಲಿಕ್ ಮಾಡಿ ಅಪ್ಲೈ ನೌ ಬಟನ್ ಅನ್ನು ಪ್ರೆಸ್ ಮಾಡಿ.
- ಮುಂದಿನ ಪುಟದಲ್ಲಿ ಕಾಣಿಸುವಂತಹ ಫಾರ್ಮ್ ಅನ್ನು ಭರ್ತಿ ಮಾಡಿ ಹಾಗೂ ಅದಕ್ಕೆ ಕೇಳಲಾಗುವಂತಹ ಡಾಕ್ಯುಮೆಂಟ್ ಗಳನ್ನು ಅಟಾಚ್ ಮಾಡಿ.
- ಸರಿಯಾದ ರೀತಿಯಲ್ಲಿ ಭರ್ತಿ ಮಾಡಿದ ನಂತರ ಹಾಗೂ ಸರಿಯಾದ ಡಾಕ್ಯುಮೆಂಟ್ ಗಳನ್ನ ಅಟ್ಯಾಚ್ ಮಾಡಿದ ನಂತರ ಸಬ್ಮಿಟ್ ಕೊಟ್ರೆ ಸಾಕು ಬ್ಯಾಂಕಿನ ಲೋನ್ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಪರಿಶೀಲಿಸಿ ಲೋನ್ ಅನ್ನು ಮಂಜೂರು ಮಾಡಿ ಹಣವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡ್ತಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ ಕೇವಲ 10.49 ಪ್ರತಿಶತ ವಾರ್ಷಿಕ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ (Personal Loan) ಪ್ರಾರಂಭವಾಗುತ್ತದೆ. ಯಾವುದೇ ರೀತಿಯ ಗ್ಯಾರಂಟಿ ನೀಡಬೇಕಾದ ಅಗತ್ಯ ಇರೋದಿಲ್ಲ. ಸುಲಭ ಪ್ರಕ್ರಿಯೆ ಮೂಲಕ 50,000 ದಿಂದ 20 ಲಕ್ಷ ರೂಪಾಯಿಗಳವರೆಗೆ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.