Home Loan: ಈ ಸರಳ ಉಪಾಯ ಮಾಡಿದರೆ ಹೋಮ್ ಲೋನ್ ಬಹುಬೇಗ ತೀರಿಸಬಹುದು.

Advertisement
ನೀವು ಈ ಒಂದು ವಿಧಾನವನ್ನು ಅಳವಡಿಸಿಕೊಳ್ಳುವುದರ ಮೂಲಕ ಗೃಹಸಾಲದ ಹೊರೆಯನ್ನು ಇಳಿಸಿಕೊಳ್ಳಬಹುದು! ತನ್ನದೇ ಆದ ಒಂದು ಸೂರು ಕಟ್ಟಿಕೊಳ್ಳಬೇಕು ಎನ್ನುವುದು ಹಲವರ ಕನಸು. ಹಾಗಾಗಿ ಬ್ಯಾಂಕ್ ಗಳಲ್ಲಿ ಸಾಲವನ್ನು ತೆಗೆದುಕೊಂಡಾದರೂ, ಮನೆ ಕಟ್ಟುತ್ತಾರೆ ಅಥವಾ ಮನೆಯನ್ನು ಸ್ವಂತಕ್ಕೆ ಖರೀದಿ ಮಾಡುತ್ತಾರೆ.
ದೊಡ್ಡ ಮೊತ್ತದ ಗೃಹ ಸಾಲ ತೆಗೆದುಕೊಂಡರೆ ಮಾಸಿಕ ಆದಾಯದ ದೊಡ್ಡ ಖರ್ಚು ಈ ಸಾಲದ ಕಂತುಗಳನ್ನು ಭರಿಸುವುದು. ಇತ್ತೀಚಿಗೆ ಸಾಲದ ಮೇಲಿನ ಬಡ್ಡಿ ದರ ಕೂಡ ಹೆಚ್ಚಾಗಿದ್ದು ಜನರ ಮೇಲಿನ EMI ಹೊರೆಯು ಕೂಡ ಹೆಚ್ಚಿದೆ. ದೀರ್ಘಕಾಲದ ಅವಧಿಯ ಗೃಹ ಸಾಲವನ್ನು ತೀರಿಸುವುದು ಹಲವರಿಗೆ ಆಗದೇಇರಹುದು. ನೀವು ಈ ಒಂದು ಯೋಜನೆಯನ್ನು ಮಾಡಿದರೆ ಸಾಧ್ಯವಾದಷ್ಟು ಬೇಗ ಗೃಹ ಸಾಲವನ್ನು ತೀರಿಸಬಹುದು ಹೇಗೆ ಗೊತ್ತಾ! ಹೇಳ್ತಿವಿ ಮುಂದೆ ಓದಿ.
ವರ್ಷಕ್ಕೊಮ್ಮೆ ಹಣ ಪಾವತಿ ಮಾಡುವುದು:
ಸಾಲದ ಬಾಧೆಯನ್ನು ತಪ್ಪಿಸಿಕೊಳ್ಳಲು ಹಾಗೂ ತ್ವರಿತವಾಗಿ ಸಾಲವನ್ನು ಪಾವತಿಸಲು ಉತ್ತಮವಾದ ಮಾರ್ಗ ಅಂದ್ರೆ ಒಂದು ವರ್ಷಕ್ಕೆ ಒಮ್ಮೆ ಹೆಚ್ಚಿನ ಮೊತ್ತವನ್ನು ಪಾವತಿ ಮಾಡುವುದು. ಈ ರೀತಿ ಮಾಡಿದರೆ ನಿಮ್ಮ EMI ಕೂಡ ಕಡಿಮೆ ಆಗುತ್ತದೆ. ನಿಮ್ಮ ಸಾಲದ ಮೊತ್ತದ 20 ರಿಂದ 25% ನಷ್ಟು ಪಾವತಿ ಮಾಡಬಹುದು. ಈ ರೀತಿ ಮಾಡೋದ್ರಿಂದ ವಾರ್ಷಿಕ ಬೋನಸ್ ಮೊದಲಾದವುಗಳನ್ನು ಕೂಡ ಪಡೆಯಬಹುದು ಇದರಿಂದ ಸಾಲದ ಬಡ್ಡಿಯೂ ಕೂಡ ಕಡಿಮೆ ಆಗುತ್ತದೆ.
ಸಾಲದ ವರ್ಗಾವಣೆ:
Advertisement
ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳುವಲ್ಲಿ ಇದು ಕೂಡ ಸಹಾಯ ಮಾಡುತ್ತದೆ. ನೀವು ಯಾವ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂಡಿದ್ದೀರೋ ಅದರ ಬಡ್ಡಿದರ ಹೆಚ್ಚಾಗಿದ್ದರೆ ಬೇರೆ ಯಾವುದಾದರೂ ಬ್ಯಾಂಕ್ ನಲ್ಲಿ ಬಡ್ಡಿ ದರವನ್ನು ಕಡಿಮೆ ಮಾಡಿದ್ದರೆ ಅಲ್ಲಿಗೆ ನಿಮ್ಮ ಲೋನ್ ನ್ನು ವರ್ಗಾಯಿಸಿಕೊಳ್ಳಿ. ಆಗ EMI ಹೊರೆಯೂ ಕಡಿಮೆ ಆಗುತ್ತದೆ.
ಅಧಿಕ EMI:
ಇನ್ನು ನೀವು ಎಷ್ಟು ಅಧಿಕವಾಗಿ ಪಾವತಿಸಲು ಸಾಧ್ಯವೋ ಅಷ್ಟು ಹೆಚ್ಚಿನ ಮೊತ್ತದ ಈಎಂಐ ಹಾಕಿಸಿಕೊಂಡರೆ ತ್ವರಿತವಾಗಿ ಸಾಲವನ್ನು ಪಾವತಿ ಮಾಡಬಹುದು. ಇದಕ್ಕಾಗಿ ವರ್ಷದಿಂದ ವರ್ಷಕ್ಕೆ ಇಎಂಐ ಹೆಚ್ಚಿಸಿಕೊಳ್ಳಬೇಕು ಸಾಮಾನ್ಯವಾಗಿ ಕೆಲಸದಲ್ಲಿ ಇದ್ದರೆ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ. ಹಾಗಾಗಿ ಈಎಂಐ ಮೊತ್ತವನ್ನೂ ಹೆಚ್ಚಿಸಿಕೊಂಡರೆ ಬೇಗ ಸಾಲ ಮರುಪಾವತಿ ಮಾಡಬಹುದು.
ಅಲ್ಪಾವಧಿಯ ಸಾಲ:
ಸಾಲ ಮಾಡುವಾಗ ನೀವು ಎಷ್ಟು ಅವಧಿಗೆ ಅದನ್ನ ತೆಗೆದುಕೊಳ್ಳುತ್ತೀರಿ ಎಂಬುದು ಬಹಳ ಮುಖ್ಯ. ನೀವು ಸಾಲವನ್ನು ಅಧಿಕ ಅವಧಿಗೆ ತೆಗೆದುಕೊಂಡರೆ ಪಾವತಿಸಬೇಕಾದ ಬಡ್ಡಿ ಕೂಡ ಹೆಚ್ಚು. ಅದೇ ಕಡಿಮೆ ಅವಧಿಯ ಸಾಲ ತೆಗೆದುಕೊಂಡರೆ ಬಡ್ಡಿಯನ್ನು ಕಡಿಮೆ ಪಾವತಿಸಬಹುದು. ಅದಕ್ಕಾಗಿ ನೀವು ಸಾಲದ ಬಾಧೆಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಶೀರ್ಘವಾಗಿ ಮುಗಿಯುವಂತಹ ಲೋನ್ ತೆಗೆದುಕೊಳ್ಳಿ.
Advertisement