Income Tax Rules: ಏಪ್ರಿಲ್ ನಿಂದ ಬದಲಾಗಲಿರುವ ಆದಾಯ ತೆರಿಗೆ ನಿಯಮಗಳು; ಇಲ್ಲಿದೆ ನೋಡಿ ಡೀಟೇಲ್ಸ್!
ಮಾರ್ಚ್ ಅರ್ಧ ತಿಂಗಳು ಮುಗಿಯಿತು. ಹಾಗಾಗಿ ಹಣಕಾಸು ವರ್ಷ ಕೊನೆಯಾಗಲಿದೆ ಮುಂದಿನ ತಿಂಗಳಿನಿಂದ ಹೊಸ ಹಣಕಾಸು ವರ್ಷ ಆರಂಭವಾಗಲಿದ್ದು ಸರ್ಕಾರ ಅನೇಕ ವಿಷಯಗಳಲ್ಲಿನ ನಿಯಮಗಳನ್ನು ಬದಲಾಯಿಸಿದೆ. ಅದರಲ್ಲೂ ಬ್ಯಾಂಕಿಂಗ್, ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ದೊಡ್ಡ ಬದಲಾವಣೆಗಳು ಆಗಲಿವೆ.
ಅದರಲ್ಲೂ ಆದಾಯ ತೆರಿಗೆಗೆ ಸಂಬಂಧಿಸಿದ ಹಾಗೆ ಕೆಲವು ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಇದೇ ಬರುವ ಏಪ್ರಿಲ್ ನಲ್ಲಿ ಈ ನಿಯಮಗಳು ಜಾರಿಗೆ ಬರಲಿವೆ. Union Budget 2023 ರಲ್ಲಿ ಇಂತಹ ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ ಹಾಗಾಗಿ ಮುಂದಿನ ಕೆಲವೇ ದಿನಗಳಲ್ಲಿ Income Tax ಯಲ್ಲಿ ಕೆಲವು ಬದಲಾವಣೆಗಳು ಆಗಲಿದ್ದು ಅವುಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಸಂಬಳ ಪಡೆಯುವವರಿಗೆ TDS ನಲ್ಲಿ ಕಡಿತ:
ಹೊಸ ತೆರಿಗೆ ಪದ್ಧತಿಯ ಪ್ರಕಾರ ಸಂಬಳ ಪಡೆಯುವ ನೌಕರರಿಗೆ ಹೆಚ್ಚು ಪ್ರಯೋಜನ ಆಗಲಿದೆ ಏಕೆಂದರೆ ಟಿ ಡಿ ಎಸ್ ಕಡಿತಗೊಳಿಸಬಹುದು. ಇದು 7 ಲಕ್ಷಕ್ಕಿಂತ ಕಡಿಮೆ ತೆರಿಗೆ ಆದಾಯ ಹೊಂದಿದ ನೌಕರರಿಗೆ ಲಭ್ಯವಾಗುತ್ತದೆ. ಹೊಸ ತೆರಿಗೆ ಪದ್ಧತಿಯನ್ನು ಇಲ್ಲಿ ಆಯ್ಕೆ ಮಾಡಿಕೊಂಡರೆ ಯಾವುದೇ ಟಿಡಿಎಸ್ ವಿಧಿಸಲಾಗುವುದಿಲ್ಲ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 87 ಎ ಅಡಿಯಲ್ಲಿ ಹೆಚ್ಚುವರಿ ವಿನಾಯಿತಿ ಯನ್ನು ಸಾರ್ವಜನಿಕರಿಗೆ ನೀಡಲಾಗಿದೆ.
ಪಟ್ಟಿ ಮಾಡಲಾದ ಡಿಬೆಂಚರ್ ಗಳ ಮೇಲೆ TDS:
ಟಿಡಿಎಸ್ ವಿನಾಯಿತಿಯನ್ನು ಭದ್ರತೆಗೆ ಸಂಬಂಧಪಟ್ಟ ಹಾಗೆ ಪಾವತಿಸಿದ ಬಡ್ಡಿಯ ಮೇಲೆಯೂ ಪಡೆಯಬಹುದು. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 193ರ ಅಡಿಯಲ್ಲಿ ಮಾನ್ಯತೆ ಪಡೆದ ಸ್ಟಾಕ್ ಎಕ್ಸ್ಚೇಂಜ್ ಹಾಗೂ ಭದ್ರತೆಯ ಡಿ-ಮೆಟಿರಿಯಲೈಸ್ಡ್ ರೂಪದಲ್ಲಿ ಭದ್ರತೆಗಾಗಿ ಪಾವತಿಸಿದ ಬಡ್ಡಿಯ ಮೇಲೆ ಟಿಡಿಎಸ್ ಕಡಿತಗೊಳಿಸಲಾಗುವುದಿಲ್ಲ. ಆದರೆ ಇದನ್ನು ಹೊರತುಪಡಿಸಿ ಇದರ ಪೇಮೆಂಟ್ ಮೇಲೆ 10% ಟಿಡಿಎಸ್ ಕಡಿತಗೊಳಿಸಲಾಗುವುದು.
ಆನ್ಲೈನ್ ಗೇಮಿಂಗ್ ಮೇಲೆ Tax:
ಇತ್ತೀಚಿಗೆ ಆನ್ಲೈನ್ ಗೇಮಿಂಗ್ ಗಳು ಕೂಡ ಹೆಚ್ಚಾಗಿದೆ. ಹಾಗಾಗಿ ನೀವು ಆನ್ಲೈನ್ ಆಟಗಳಲ್ಲಿ ಆಡಿ ಹಣವನ್ನು ಗೆದ್ದಿದ್ದರೆ ಅದರ ಮೇಲೆ ಹೆಚ್ಚಿನ ತೆರಿಗೆ ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ಕಾಯ್ದೆ ಹೊಸ ಸೆಕ್ಷನ್ 115 ಬಿಬಿಜೆ ಅಡಿಯಲ್ಲಿ ಆನ್ಲೈನ್ ಆಟದ ಗೆಲುವಿನ ಮೇಲೆ 30% ತೆರಿಗೆ ಪಾವತಿಸಬೇಕಾಗಿದ್ದು ಇದು ಟಿಡಿಎಸ್ ರೂಪದಲ್ಲಿ ವಿಧಿಸಲಾಗುವುದು.
ಈ ವಿಭಾಗದಲ್ಲಿ ಇನ್ನು ಪ್ರಯೋಜನಗಳು ಕಡಿಮೆ;
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 54 ಮತ್ತು 54 ಎಫ್ ಇದರ ಅಡಿಯಲ್ಲಿ ಲಭ್ಯವಿರುವ ಎಲ್ಲಾ ಪ್ರಯೋಜನಗಳನ್ನು ಹೊಸ ಹಣಕಾಸು ವರ್ಷದಲ್ಲಿಯೂ ಕೂಡ ಅಷ್ಟೇ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಅಂದರೆ 10 ಕೋಟಿ ವರೆಗಿನ ಬಂಡವಾಳ ಲಾಭಕ್ಕೆ ಮಾತ್ರ ವಿನಾಯಿತಿ ಸಿಗುತ್ತದೆ ಇದಕ್ಕಿಂತ ಹೆಚ್ಚಿನ ಬಂಡವಾಳದ ಲಾಭಕ್ಕೆ ಶೇಕಡ 20ರವರೆಗೆ ತೆರಿಗೆ ವಿಧಿಸಲಾಗುತ್ತದೆ ನಿಯಮ ಜಾರಿಕೊಳ್ಳುತ್ತದೆ.
ಬಂಡವಾಳದ ಮೇಲೆಯೂ ಹೆಚ್ಚಿದ Tax:
ಯಾವುದೇ ಆಸ್ತಿ ಮಾರಾಟದಿಂದ ಲಾಭಗಳಿಸಿದರೆ ಹೆಚ್ಚಿನ ಬಂಡವಾಳ ಲಾಭದ ತೆರಿಗೆ ಅದಕ್ಕೆ ಅಪ್ಲೈ ಆಗುತ್ತದೆ. ಸೆಕ್ಷನ್ 24ರ ಅಡಿಯಲ್ಲಿ ಬಡ್ಡಿ ಕ್ಲೈಮ್ ಮಾಡುವುದಾದರೆ ಖರೀದಿಸುವ ಅಥವಾ ದುರಸ್ತಿ ಮಾಡುವ ವೆಚ್ಚದಲ್ಲಿ ಅವು ಸೇರ್ಪಡೆಗೊಳ್ಳುವುದಿಲ್ಲ. ಇನ್ನು ಮಾರುಕಟ್ಟೆ ಸಂಯೋಜಿತ ಡಿಬೆಂಚರ್ ಗಳ ಮೆಚುರಿಟಿ, ಕಡಿತ, ವರ್ಗಾವಣೆ ಇವುಗಳಿಗೆ ಅಲ್ಪಾವಧಿಯ ಬಂಡವಾಳದ ಲಾಭದ ತೆರಿಗೆ ಅನ್ವಯವಾಗುತ್ತದೆ.
ಚಿನ್ನದ ವ್ಯವಹಾರದಲ್ಲಿಯೂ ಬದಲಾವಣೆ:
ನೀವು ಭೌತಿಕ ಚಿನ್ನವನ್ನು ಈಜಿಆರ್ ಅಥವಾ ಎಲೆಕ್ಟ್ರಾನಿಕ್ ಚಿನ್ನದ ರಶೀದಿಯನ್ನು ಭೌತಿಕ ಚಿನ್ನವಾಗಿ ಪರಿವರ್ತಿಸುವುದಾದರೆ ಅದರ ಮೇಲೆ ಬಂಡವಾಳ ಲಾಭ ತೆರಿಗೆ ವಿಧಿಸಲಾಗುವುದಿಲ್ಲ. ಆದರೆ ನೀವು ಈ ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕಾಗಿ ಎಸ್ಎಬಿಐ ನೊಂದಾಯಿತ ವೊಲ್ಟ್ ಮ್ಯಾನೇಜರ್ ನಿಂದ ಕನ್ವರ್ಟ್ ಮಾಡಿಕೊಳ್ಳಬೇಕು. ಈ ನಿಯಮವೂ ಕೂಡ ಏಪ್ರಿಲ್ ಒಂದರಿಂದ ಜಾರಿಗೊಳ್ಳಲಿದೆ.