Bank News: ದೇಶದ ಈ 3 ಬ್ಯಾಂಕ್ ಗಳಲ್ಲಿ ಇಟ್ಟ ಹಣ ಯಾವತ್ತೂ ಸೇಫ್! ಇಲ್ಲಿದೆ ವರದಿ.

Advertisement
ದೇಶದ ಆರ್ಥಿಕತೆಯಲ್ಲಿ ಬ್ಯಾಂಕಿಂಗ್ ಸೆಕ್ಟರ್ ಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಅದರಲ್ಲೂ ಕೆಲವು ಬ್ಯಾಂಕ್ ಗಳು(Bank) ದೇಶದ ಹೆಚ್ಚು ನಂಬಿಕಸ್ಥ ಬ್ಯಾಂಕ್ ಎಂದೂ ಕೂಡ ಅನ್ನಿಸಿಕೊಂಡಿವೆ. ಅವುಗಳಲ್ಲಿ ಎಸ್‌ಬಿಐ(SBI), ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ಅತೀ ಮುಖ್ಯವಾದ ಬ್ಯಾಂಕ್ ಗಳು.ಕಳೆದ ಕೆಲವು ದಿನಗಳ ಹಿಂದೆ ಯು ಎಸ್ ನ ಸಿಲಿಕಾನ್ ವ್ಯಾಲಿ ಬ್ಯಾಂಕ್ ಹಾಗೂ ಸಿಗ್ನೇಚರ್ ಬ್ಯಾಂಕ್ ಮುಳುಗಿದೆ ಈ ಕಾರಣಕ್ಕಾಗಿ ಈ ಮೂರು ಬ್ಯಾಂಕ್ಗಳನ್ನು ಡಿ ಎಸ್ ಬಿ ಪಟ್ಟಿಯಲ್ಲಿ ಇರಿಸಿರುವ ಆರ್‌ಪಿಐ ಈ ಬ್ಯಾಂಕುಗಳಿಗೆ ಕಟ್ಟುನಿಟ್ಟಾದ ನಿಯಮಗಳನ್ನು ಕೂಡ ಮಾಡಿದೆ.
ಯು ಎಸ್ ನ ಮೂರನೇ ಬ್ಯಾಂಕ್ ಫಸ್ಟ್ ರಿಪಬ್ಲಿಕ್ ಬ್ಯಾಂಕ್(Republic Bank) ಕೂಡ ಮುಳುಗಡೆಯ ಹಂತದಲ್ಲಿತ್ತು ಆದರೆ ಇತರ ಬ್ಯಾಂಕುಗಳು 30 ಬಿಲಿಯನ್ ಹಣವನ್ನು ಸಹಾಯ ಮಾಡುವುದರ ಮೂಲಕ ಈ ಬ್ಯಾಂಕ್ ಉಳಿದುಕೊಂಡಿದೆ. ಅಮೆರಿಕದಲ್ಲಿ ಬ್ಯಾಂಕುಗಳು ಮುಳುಗಡೆ ಆದರೆ ಅದು ಭಾರತದ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ನೇರವಾದ ಪರಿಣಾಮವೇನು ಬೀರುವುದಿಲ್ಲ ಆದರೆ ಒಂದರ ಹಿಂದೆ ಒಂದರಂತೆ ಹೀಗೆ ಬ್ಯಾಂಕ್ ಮುಳುಗಡೆ ಆಗುತ್ತಿರುವುದು ಭಾರತೀಯ ಗ್ರಾಹಕರಿಗೆ ಆತಂಕ ಮೂಡಿಸಿದೆ.
ತಮ್ಮ ಬ್ಯಾಂಕ್ ಕೂಡ ಮುಳುಗಡೆಯಾದರೆ ಅದರಲ್ಲಿ ನಾವು ಇಟ್ಟ ಹಣ ಏನಾಗುತ್ತದೆ ಎನ್ನುವ ಯೋಚನೆ ಜನರಿಗೆ ಬರುವುದು ಸಹಜ. ಭಾರತದಲ್ಲಿ ಐಸಿಐಸಿಐ(ICICI) ಬ್ಯಾಂಕ್, ಎಸ್‌ಬಿಐ ಹಾಗೂ ಹೆಚ್ ಡಿ ಎಫ್ ಸಿ ಬ್ಯಾಂಕ್ ಅನ್ನು ಡಿ -ಎಸ್ ಐ ಬಿ ಎಸ್ ಎಂದು ಪರಿಗಣಿಸಲಾಗಿದ್ದು ದೇಶದ ಹೆಚ್ಚು ವ್ಯವಸ್ಥಿತವಾದ ಬ್ಯಾಂಕ್ ಎಂದು ಪರಿಗಣಿಸಲ್ಪಟ್ಟಿದೆ.ಈ ಬ್ಯಾಂಕ್ ಗಳ ದೇಶದ ಆರ್ಥಿಕತೆಯಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಈ ಬ್ಯಾಂಕ್ ಮುಳುಗಡೆ ಆಗಲು ಸರ್ಕಾರ ಬಿಡುವುದಿಲ್ಲ.
Advertisement
ಈ ಬ್ಯಾಂಕ್ ಗಳೇನಾದರೂ ಕುಸಿದರೆ ದೇಶದ ಆರ್ಥಿಕತೆಯ ಮೇಲೆ ಬಹು ದೊಡ್ಡ ಪರಿಣಾಮ ಬೀರಬಹುದು ಆರ್ಥಿಕ ಬಿಕ್ಕಟ್ಟು ಎದುರಾಗಬಹುದು. Too big to Fail ಎನ್ನುವ ಒಂದು ಮಾತಿದೆ. ಅಂದರೆ ದೊಡ್ಡದಾಗಿರುವುದರ ಪರಿಣಾಮವೂ ದೊಡ್ಡದಾಗಿಯೇ ಇರುತ್ತದೆ. ಅಂದರೆ ಇಷ್ಟು ದೊಡ್ಡ ಬ್ಯಾಂಕ್ ಗಳು ಮುಳುಗಡೆ ಆದರೆ ದೇಶದ ಆರ್ಥಿಕತೆಯ ಮೇಲೆ ದೊಡ್ಡ ಪೆಟ್ಟು ಬೀಳುತ್ತದೆ.
ಆರ್ಥಿಕ ಹಿಂಜರಿತ ಬಳಿಕ ಬ್ಯಾಂಕ್ಗಳನ್ನು ರಿಸರ್ವ್ ಬ್ಯಾಂಕ್ (Reserve Bank)ಘೋಷಿಸಿದೆ. ಇದರಿಂದ ಆರ್ಥಿಕ ಬಿಕ್ಕಟಿನ ಪರಿಸ್ಥಿತಿ ಬೇಗ ಸುಧಾರಿಸುವಂತೆ ಮಾಡಲು ಸಾಧ್ಯ. 2018ರಿಂದ ಆರ್ ಬಿ ಐ ಪ್ರತಿವರ್ಷ ಡಿ-ಎಸ್ ಐ ಬಿ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದು, 2015 -16ರಲ್ಲಿ ಎಸ್‌ಬಿಐ ಮತ್ತು ಐ ಸಿ ಐ ಸಿ ಐ ಬ್ಯಾಂಕ್ ಎಂದು ಘೋಷಿತವಾಗಿದೆ. ಅದೇ ರೀತಿ 2017ರಲ್ಲಿ ಎಚ್ ಡಿ ಎಫ್ ಸಿ ಡಿ-ಎಸ್ಐಬಿ ಎಂದು ಕರೆಯಲ್ಪಟ್ಟಿದೆ.
ಆರ್ ಬಿ ಐ ಬ್ಯಾಂಕ್ ಗಳನ್ನು ಡಿ-ಎಸ್ಐಬಿ ಎಂದು ಹೇಗೆ ಆಯ್ಕೆ ಮಾಡುತ್ತೆ!
ದೇಶದ ಬ್ಯಾಂಕುಗಳ ಕಾರ್ಯಕ್ಷಮತೆ ಗ್ರಾಹಕರನ್ನ ಇಟ್ಟುಕೊಂಡಿರುವ ರೀತಿ, ಸೇವೆ, ವ್ಯವಸ್ಥೆ ಇವುಗಳ ಮೇಲೆ ಸ್ಕೋರ್ ನೀಡಿ ನಂತರ ಡಿ-ಎಸ್ ಐಬಿ ಪಟ್ಟಿಗೆ ಬ್ಯಾಂಕ್ ಅನ್ನು ಆಯ್ಕೆ ಮಾಡುತ್ತದೆ, ರಿಸರ್ವ್ ಬ್ಯಾಂಕ್. ರಾಷ್ಟ್ರೀಯ ಜೆಡಿಪಿಯ ಎರಡು ಪ್ರತಿಶತ ಮೀರಿದ ಬ್ಯಾಂಕ್ ಅನ್ನು ಡಿ ಎಸ್ ಐ ಬಿ ಲಿಸ್ಟ್ ಗೆ ಸೇರಿಸಲಾಗುತ್ತದೆ.
Advertisement