Karnataka Times
Trending Stories, Viral News, Gossips & Everything in Kannada

Bank New Rules: ಬ್ಯಾಂಕ್ ಖಾತೆ ಇದ್ದವರು ಮಾರ್ಚ್ 24 ರ ಒಳಗೆ ಈ ಕೆಲಸ ಮಾಡಿ, ಮುಖ್ಯ ಸೂಚನೆ.

ಈ ಹಿಂದೆ, ಬ್ಯಾಂಕುಗಳು ಹಲವಾರು ಬಾರಿ KYC ಪೂರ್ಣಗೊಳಿಸಲು ಗ್ರಾಹಕರಿಗೆ ಕೇಳುತ್ತಿದ್ದವು. ಆದರೂ ಕೆಲವು ಗ್ರಾಹಕರು ಎಚ್ಚೆತ್ತುಕೊಂಡಿಲ್ಲ, ಈಗಾಗಲೇ ಬ್ಯಾಂಕ್ ಆಫ್ ಬರೋಡಾ (BOB) ತನ್ನ ಖಾತೆದಾರರಿಗೆ ಕೇಂದ್ರ ಕೆವೈಸಿ (C-KYC)‌ ಮಾಡಲು ಸೂಚನೆಗಳನ್ನು ನೀಡಿದೆ. ಗ್ರಾಹಕರು ಬ್ಯಾಂಕ್ ಶಾಖೆಗೆ ಹೋಗಿ ಮನೆಯ ವಿಳಾಸದ ಮಾಹಿತಿ‌, ಇತ್ತೀಚಿನ ಭಾವಚಿತ್ರ, ಪ್ಯಾನ್ ಕಾರ್ಡ್, ಮೊಬೈಲ್ ಸಂಖ್ಯೆ, ಆದಾಯ ಪುರಾವೆ ಇತ್ಯಾದಿಗಳನ್ನು ಒದಗಿಸುವ ಮೂಲಕ KYC ಅನ್ನು ಮಾಡಬಹುದು.

ಬ್ಯಾಂಕ್ ಟ್ವೀಟ್ ಮೂಲಕ ಮಾಹಿತಿ

Join WhatsApp
Google News
Join Telegram
Join Instagram

ಬ್ಯಾಂಕ್‌ ತನ್ನ ಅಧಿಕೃತ ಟ್ವಿಟರ್(Twiter) ಮೂಲಕ ಬ್ಯಾಂಕ್ ಟ್ವೀಟ್ ಮಾಡಿದ್ದು, ಬ್ಯಾಂಕ್ ನೋಟಿಸ್, ಎಸ್‌ಎಂಎಸ್ ಅಥವಾ ಸಿ ಕೆವೈಸಿಗಾಗಿ ಕರೆ ಮಾಡಿದ ಗ್ರಾಹಕರು ಬ್ಯಾಂಕ್‌ಗೆ ಹೋಗಿ ತಮ್ಮ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕು ಎಂದು ಬ್ಯಾಂಕ್ ತಿಳಿಸಿದೆ.ಮಾರ್ಚ್ 24ರೊಳಗೆ ಈ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ತಿಳಿದುಬಂದಿದೆ.‌ ಇನ್ನು ಈಗಾಗಲೇ ಕೆವೈಸಿ ಮುಗಿಸಿದವರು ಇದ್ದರೆ ತೊಂದರೆ ಇಲ್ಲ. ಮತ್ತೆ ಮಾಡಬೇಕಾಗಿಲ್ಲ ಎಂದು ತಿಳಿಸಿದೆ.

ಬ್ಯಾಂಕ್ ಆಫ್ ಬರೋಡಾದಿಂದ ಸೂಚನೆ

ಬ್ಯಾಂಕ್ ಆಫ್ ಬರೋಡಾ(Bank Of Baroda) ಖಾತೆದಾರರಿಗೆ ಕೇಂದ್ರ ಕೆವೈಸಿ (C-KYC) ಮಾಡಲು ಸೂಚನೆಗಳನ್ನು ನೀಡಿದೆ. ಈಗಾಗಲೇ ನೋಟಿಸ್ ಮತ್ತು ಎಸ್‌ಎಂಎಸ್(SMS) ಮೂಲಕ ಕೆವೈಸಿ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿದೆ. ಬ್ಯಾಂಕ್‌ನಿಂದ ಕೆವೈಸಿಗೆ ಸಂಬಂಧಿಸಿದಂತೆ ನೋಟಿಸ್‌ಗಳು ಅಥವಾ ಎಸ್‌ಎಂಎಸ್ ಅಥವಾ ಕರೆಗಳನ್ನ ಸ್ವೀಕರಿಸಿದ ಗ್ರಾಹಕರು ತಕ್ಷಣವೇ ಬ್ಯಾಂಕ್ ಶಾಖೆಗೆ ಹೋಗಿ ಕೆವೈಸಿ ದಾಖಲೆಗಳನ್ನ ಸಲ್ಲಿಸಬೇಕು. ಎಂದಿದೆ.

ಕೆವೈಸಿ ಅಪ್​ಡೇಟ್ ಕಡ್ಡಾಯ

ಗ್ರಾಹಕರು ಈ ಬಾರಿ ಕಡ್ಡಾಯವಾಗಿ KYC ನವೀಕರಿಸಬೇಕು. ನೀವು ಕೇಂದ್ರ ಕೆವೈಸಿ ಅನ್ನು ಪೂರ್ಣಗೊಳಿಸದಿದ್ದರೆ, ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಬಹುದು, ಬ್ಯಾಂಕ್ ಖಾತೆ ಹೊಂದಿರುವವರು ಸೆಂಟ್ರಲ್ ಕೆವೈಸಿ ಪೂರ್ಣಗೊಳಿಸಬೇಕು ಎಂದು ಹೇಳಲಾಗಿದೆ.

Leave A Reply

Your email address will not be published.