Bank Loans: 25 ಲಕ್ಷಕ್ಕೂ ಹೆಚ್ಚು ಬ್ಯಾಂಕ್ ಲೋನ್ ಇದ್ದವರಿಗೆ ಹಬ್ಬದ ದಿನವೇ ಸಿಹಿಸುದ್ದಿ.
Bank Loan India: ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಒಮ್ಮೆಯಾದರೂ ತಮ್ಮ ಸ್ವಂತ ಮನೆಯನ್ನು ಕಟ್ಟಬೇಕು ಎನ್ನುವ ಕಾರಣಕ್ಕಾಗಿ ನಮ್ಮ ಭಾರತ ದೇಶದ ಹೆಚ್ಚಿನವರು ಮನೆ ಕಟ್ಟುವುದಕ್ಕಿಂತ ಮುಂಚೆ ಹೋಂ ಲೋನ್(Home Loan) ಅನ್ನು ಪಡೆದುಕೊಳ್ಳುತ್ತಾರೆ ಇದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಕೆಲವರು ಹೋಂ ಲೋನ್ ನಿಂದ ಕಟ್ಟಿರುವಂತಹ ಮನೆಯನ್ನು ಬಾಡಿಗೆಗೆ ನೀಡಿ ಆ ಬಾಡಿಗೆಯಿಂದಲೇ ಹೋಂ ಲೋನ್ ಕಂತುಗಳನ್ನು(Home Loan EMI) ಕಟ್ಟುತ್ತಾರೆ. ಇನ್ನು ಕೆಲವರು ತಮಗೆ ಸಿಗುವಂತಹ ತಮ್ಮ ಕೆಲಸದ ಅಥವಾ ವ್ಯಾಪಾರದ(Business Income) ಆದಾಯದಿಂದ ಹೋಮ್ ಲೋನ್ ಕಂತುಗಳನ್ನು ಕೂಡ ಕಟ್ಟುವವರು ಕೂಡ ಇದ್ದಾರೆ. ಬೇರೆಯೆಲ್ಲ ಸಾಲ ಗಳಿಗಿಂತ ಹೆಚ್ಚಾಗಿ ಹೋಂ ಲೋನ್ ಮೇಲೆ ಬಡ್ಡಿದರ ಹೆಚ್ಚಾಗಿರುತ್ತದೆ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿರುತ್ತದೆ.
ಇಲ್ಲಿ ಒಂದು ನಾವು ಕ್ಯಾಲ್ಕ್ಯುಲೇಷನ್ ಹೇಳಲು ಹೊರಟಿದ್ದು ಅದರಿಂದಾಗಿ ನೀವು ಹೋಂ ಲೋನ್ ನಲ್ಲಿ ಸಿಕ್ಕಿ ಬೀಳುವುದನ್ನು ತಪ್ಪಿಸಿಕೊಳ್ಳುತ್ತೀರಿ ಎಂದು ಹೇಳಬಹುದಾಗಿದೆ. 25 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಲೋನ್ ಪಡೆದುಕೊಂಡಿದ್ದರೆ ಆ ಸಂದರ್ಭದಲ್ಲಿ ನೀವು 16 ಲಕ್ಷ ರೂಪಾಯಿಗಳ ವರೆಗೂ ಕೂಡ ಬಡ್ಡಿಯನ್ನು ಉಳಿತಾಯ ಮಾಡಬಹುದಾಗಿದೆ ಎಂಬುದಾಗಿ ತಿಳಿದು ಬರುತ್ತದೆ. ಅದೇ ರೀತಿಯಲ್ಲಿ ಐವತ್ತು ಲಕ್ಷ ರೂಪಾಯಿಗಳು ಹೋಂ ಲೋನ್ ಪಡೆದುಕೊಂಡಿದ್ದರೆ 32 ಲಕ್ಷ ರೂಪಾಯಿಗಳ ವರೆಗೂ ಕೂಡ ಬಡ್ಡಿಯನ್ನು(Interest Savings) ಉಳಿತಾಯ ಮಾಡಬಹುದಾಗಿದೆ.
ಉದಾಹರಣೆಗೆ ನೀವು 25 ಲಕ್ಷ 2020ರಲ್ಲಿ ಪಡೆದುಕೊಂಡಿರುತ್ತೀರಿ. ಇದರ ಏಳು ಪ್ರತಿಶತ ಆಗಿರುತ್ತದೆ ಹಾಗೂ ಸಾಲ ಕಟ್ಟುವ ಅವಧಿ 20 ವರ್ಷ ಆಗಿರುತ್ತದೆ. ಪ್ರತಿ ತಿಂಗಳ ಕಂತು 19382 ರೂಪಾಯಿ ಆಗಿರುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ನೀವು 20 ವರ್ಷಗಳ ಕಾಲ ಅಂದರೆ 2040 ತಿಂಗಳುಗಳ ಕಾಲ ಪ್ರತಿ ತಿಂಗಳು ಇದೇ ರೀತಿ ಮಾಸಿಕ ಕಂತನ್ನು ಕಟ್ಟುತ್ತಾ ಹೋದರೆ ಒಟ್ಟಾರೆಯಾಗಿ ನೀವು 46,51,680 ರೂಪಾಯಿಗಳನ್ನು ಕಟ್ಟಬೇಕಾಗುತ್ತದೆ. ಒಂದು ವೇಳೆ ಮೂರು ವರ್ಷಗಳ ನಂತರ ನಿಮ್ಮ ಬಡ್ಡಿ ದರ ಏರಿಕೆಯಾಗಿ 9.25 ಪ್ರತಿಶತ ಹೆಚ್ಚಿಗೆ ಆದರೆ ಆ ಸಂದರ್ಭದಲ್ಲಿ ಬ್ಯಾಂಕ್ ನಿಮ್ಮ ಮುಂದೆ ಎರಡು ಆಯ್ಕೆಗಳನ್ನು ನೀಡಲಿದೆ.
ಮೊದಲನೆಯದು ನೀವು ಪ್ರತಿ ತಿಂಗಳು ಕಟ್ಟುವಂತಹ ಕಂತಿನ ಮೊತ್ತವನ್ನು ಹೆಚ್ಚಿಸಲು ಹೇಳುತ್ತದೆ, ಎರಡನೇದಾಗಿ ನಿಮ್ಮ ಹೋಂ ಲೋನ್ ಅವಧಿಯನ್ನು ಹೆಚ್ಚು ಮಾಡಿಸಲು ಹೇಳುತ್ತದೆ. ಒಂದು ವೇಳೆ ನೀವು ಅದೇ ಲೋನ್ ಕಂತನ್ನು ಕಟ್ಟಿದ ಹೋದಲ್ಲಿ 240 ತಿಂಗಳ ಬದಲಾಗಿ 316 ತಿಂಗಳುಗಳಿಗೆ ನಿಮ್ಮ ಲೋನ್ ಅವಧಿ ವಿಸ್ತರಣೆಯಾಗುತ್ತದೆ. ಸಾಮಾನ್ಯವಾಗಿ ಬ್ಯಾಂಕುಗಳು ಇರಲಿ ಅಥವಾ ಯಾವುದೇ ಫೈನಾನ್ಸಿಯಲ್ ಸಂಸ್ಥೆ (Financial Companies)ಆಗಿರಲಿ ಈ ಸಂದರ್ಭದಲ್ಲಿ ನಿಮ್ಮ ಅವಧಿಯನ್ನು ಹೆಚ್ಚಿಸುವುದಕ್ಕಾಗಿ ನಿಮಗೆ ಕುಶಲಾಯಿಸುತ್ತಾರೆ ಯಾಕೆಂದರೆ ಹೆಚ್ಚಿನ ಹಣ ಬೇಕಾದ ಪರಿಸ್ಥಿತಿ ಬರುವುದಿಲ್ಲ ಅದೇ ರೀತಿಯ ಹಣವನ್ನು ನೀವು ಹೆಚ್ಚಿನ ಅವಧಿಗೆ ಕಟ್ಟಬಹುದು ನಿಮಗೆ ಯಾವುದು ಸಮಸ್ಯೆಗಳು ಕೂಡ ಬರುವುದಿಲ್ಲ ಎಂಬುದಾಗಿ ಹೇಳುತ್ತಾರೆ ಆದರೆ ಈ ಸಂದರ್ಭದಲ್ಲಿ ನೀವು ಸ್ವಲ್ಪ ಮಟ್ಟಿಗೆ ಬುದ್ಧಿವಂತಿಕೆಯನ್ನು ತೋರಿಸಬೇಕು.
ನೀವು ಅವರು ಹೇಳಿರುವಂತಹ ಉಪಾಯವನ್ನು ನಿಮ್ಮ ಲೋನ್ ಕಟ್ಟಲು ಒಪ್ಪಿಕೊಂಡರೆ ಆ ಸಂದರ್ಭದಲ್ಲಿ ನೀವು 44.7 ಲಕ್ಷಗಳ ಹಣವನ್ನು ಕಟ್ಟಬೇಕಾಗುತ್ತದೆ ಆದರೆ ನೀವು ಪ್ರತಿ ತಿಂಗಳ ಕಂತಿನಲ್ಲಿ ಹೆಚ್ಚಿನ ಹಣವನ್ನು ಕಟ್ಟಲು ಹೋದರೆ, ತಿಂಗಳಿಗೆ ಕಟ್ಟ ಬೇಕಾಗಿರುವಂತಹ EMI ಹೆಚ್ಚಿಸಲು ಹೋದರೆ 22489 ರೂಪಾಯಿಗಳನ್ನು ಕಟ್ಟಬೇಕಾಗಿ ಬರುತ್ತದೆ. ಈ ಸಂದರ್ಭದಲ್ಲಿ 27.85 ಲಕ್ಷ ರೂಪಾಯಿಗಳ ಬಡ್ಡಿದರವನ್ನು ನೀಡಬೇಕಾಗುತ್ತದೆ. ಈ ಸಂದರ್ಭದಲ್ಲಿ ನೀವು ಒಟ್ಟಾರೆಯಾಗಿ 16.42 ಲಕ್ಷ ರೂಪಾಯಿಗಳ ಉಳಿತಾಯವನ್ನು ಮಾಡಿದಂತಾಗುತ್ತದೆ. ಖಂಡಿತವಾಗಿ ಬಡ್ಡಿ ದರವನ್ನು ಉಳಿತಾಯ ಮಾಡುವುದಕ್ಕೆ ಇದೊಂದು ಅತ್ಯಂತ ಪ್ರಯೋಜನಕಾರಿ ಉಪಾಯವಾಗಿದೆ ಎಂದು ಹೇಳಬಹುದಾಗಿದೆ ಆದರೆ ಈ ಸಂದರ್ಭದಲ್ಲಿ ನೀವು ಪ್ರತಿ ತಿಂಗಳ ಕಂತನ್ನು ಹೆಚ್ಚು ಮಾಡುವಂತಹ ಸಾಮರ್ಥ್ಯವನ್ನು ಹೊಂದಿರಬೇಕು ಅಷ್ಟೇ