Income Tax: ಇನ್ಮೇಲೆ ಯಾವಾಗ ಆದಾಯ ತೆರಿಗೆ ರೇಡ್ ನಿಮ್ಮ ಮೇಲೆ ಆಗಲಿದೆ ಗೊತ್ತಾ? ಹೊಸ ರೂಲ್ಸ್
Income Tax Raid in India: ಸಿನಿಮಾಗಳಲ್ಲಿ ಹಾಗೂ ಪೇಪರ್ಗಳಲ್ಲಿ ಮಾತ್ರ ನಾವೆಲ್ಲರೂ ಇನ್ಕಮ್ ಟ್ಯಾಕ್ಸ್ ರೈಡ್ಗಳ ವಿಚಾರದ ಬಗ್ಗೆ ನೋಡಿರುತ್ತೇವೆ ಅಥವಾ ತಿಳಿದುಕೊಂಡಿರುತ್ತೇವೆ ಆದರೆ ಯಾಕಾಗಿ ಈ ಪ್ರಕ್ರಿಯೆಯನ್ನು ಇನ್ಕಮ್ ಟ್ಯಾಕ್ಸ್ ಇಲಾಖೆಯವರು(Income Tax Department) ಮಾಡುತ್ತಾರೆ ಕಷ್ಟ ಸಾಧ್ಯ ಎಂದು ಹೇಳಬಹುದಾಗಿದೆ. ಇಂತಹ ಪ್ರಕ್ರಿಯೆಗಳನ್ನು ನಾವು ಹೆಚ್ಚಿನದಾಗಿ ಶ್ರೀಮಂತರ ಮನೆ ಇಲ್ಲವೇ ಸೆಲೆಬ್ರಿಟಿಗಳ ಮನೆಯಲ್ಲಿ ಆಗುವುದನ್ನು ನೋಡಿರುತ್ತೇವೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ.
ಮೊದಲಿಗೆ ಇನ್ಕಮ್ ಟ್ಯಾಕ್ಸ್ ರೈಡ್(Income Tax Raid) ಅಂದ್ರೆ ಏನು ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ. ಆದಾಯ ಇಲಾಖೆಯ ಸೆಕ್ಷನ್ 132ರ ಪ್ರಕಾರ ಇನ್ಕಮ್ ಟ್ಯಾಕ್ಸ್ ಅಧಿಕಾರಿ ಯಾರ ಮನೆಯ ಮೇಲೆ ಬೇಕಾದರೂ ಕೂಡ ಇನ್ಕಮ್ ಟ್ಯಾಕ್ಸ್ ರೈಡ್ ಮಾಡಬಹುದಾಗಿದ್ದು ಇದು ಎಷ್ಟು ಸಮಯದವರೆಗೂ ಕೂಡ ಹೋಗಬಹುದಾಗಿದೆ. ಕೇವಲ ಇಷ್ಟು ಮಾತ್ರವಲ್ಲದೆ ಈ ಸಂದರ್ಭದಲ್ಲಿ ಅಧಿಕಾರಿಗಳು ಪೊಲೀಸ್(Police Officers) ಅವರನ್ನು ಕೂಡ ಬಳಸಿಕೊಳ್ಳಬಹುದಾಗಿದ್ದು ಒಂದು ವೇಳೆ ಏನಾದರೂ ತಪ್ಪು ಸಿಕ್ಕಿದ್ದಲ್ಲಿ ಆತನ ಆಸ್ತಿಯನ್ನು(Property) ಅಧಿಕಾರವನ್ನು ಕೂಡ ಹೊಂದಿರುತ್ತಾರೆ. ಇನ್ಕಮ್ ಟ್ಯಾಕ್ಸ್ ರೈಡ್ ಅನ್ನು ಯಾಕಾಗಿ ಮಾಡುತ್ತಾರೆ ಅನ್ನೋದನ್ನ ಕೂಡ ನೋಡೋದಾದ್ರೆ ಆರ್ಥಿಕ ಸಚಿವಾಲಯದ ED ಸೇರಿದಂತೆ ಸಾಕಷ್ಟು ಸಂಸ್ಥೆಗಳು ಯಾರೆಲ್ಲಾ ಟ್ಯಾಕ್ಸ್ ಕಟ್ಟೋದಿಲ್ವೋ ಅವರ ಮೇಲೆ ನಿಗಾ ಇಟ್ಟಿರುತ್ತಾರೆ.
ಸಾಕಷ್ಟು ಏಜೆನ್ಸಿಗಳಿಂದ ಆ ವ್ಯಕ್ತಿ ಟ್ಯಾಕ್ಸ್ ಕಟ್ಟುತ್ತಿಲ್ಲ ಹಾಗೂ ಕಪ್ಪು ಹಣವನ್ನು ಇಟ್ಟುಕೊಂಡಿದ್ದಾನೆ ಎನ್ನುವ ಮಾಹಿತಿ ಸಿಕ್ಕ ನಂತರ ಸರಿಯಾದ ಅವಕಾಶ ನೋಡಿ ಆತನ ಮೇಲೆ ಇನ್ಕಮ್ ಟ್ಯಾಕ್ಸ್ ರೈಡ್ ಮಾಡಲಾಗುತ್ತದೆ. ಹೆಚ್ಚಾಗಿ ಇನ್ಕಮ್ ಟ್ಯಾಕ್ಸ್ ರೈಡ್ ಅನ್ನು ಬೆಳಗಿನ ಮುಂಜಾವಿನಲ್ಲಿ ಹಾಗೂ ತಡ ರಾತ್ರಿಯಲ್ಲಿ ಮಾಡಲಾಗುತ್ತದೆ. ಯಾಕೆಂದರೆ ಆ ವ್ಯಕ್ತಿಗೆ ಅನಿರೀಕ್ಷಿತವಾಗಿರಬೇಕು ಹಾಗೂ ಎದುರಿಸಲು ಸಮಯ ಅವಕಾಶ ಕೂಡ ನೀಡಬಾರದು ಎನ್ನುವ ಕಾರಣಕ್ಕಾಗಿ. ಇದು ಎರಡರಿಂದ ಮೂರು ದಿನಗಳ ಕಾಲ ಕೂಡ ನಡೆಯಬಹುದಾಗಿದ್ದು ಈ ಸಂದರ್ಭದಲ್ಲಿ ಅಧಿಕಾರಿಗಳ ಒಪ್ಪಿಗೆ ಹೊರತಾಗಿ ಯಾರು ಕೂಡ ಮನೆಯಿಂದ ಹೊರ ಹೋಗುವ ಹಾಗಿಲ್ಲ.
ಈ ಸಂದರ್ಭದಲ್ಲಿ ಕೆಲವೊಂದು ಕೆಲಸಗಳನ್ನು ಅಧಿಕಾರಿಗಳು ಮಾಡುವ ಹಾಗಿರುವುದಿಲ್ಲ. ಯಾವುದಾದರೂ ಅಂಗಡಿ ಅಥವಾ ಶೋರೂಂಗೆ ಅಧಿಕಾರಿಗಳು ರೈಡ್ ಮಾಡಿದ್ರಾ ಆ ಸಂದರ್ಭದಲ್ಲಿ ಅವರು ಕೇವಲ ದಾಖಲೆ ಪತ್ರಗಳನ್ನು ಮಾತ್ರ ಪರಿಶೀಲಿಸುವಂತಹ ಅಧಿಕಾರವನ್ನು ಹೊಂದುತ್ತಾರೆ ಹೀಗಾಗಿ ಯಾವುದೇ ಕಾರಣಕ್ಕೂ ಅವರು ಮಾರಾಟಕ್ಕೆ ಇಟ್ಟಿರುವಂತಹ ಯಾವುದೇ ವಸ್ತುಗಳನ್ನು ಕೂಡ ಅಧಿಕಾರಿಗಳು ಪರೀಕ್ಷಿಸುವ ಹಾಗಿಲ್ಲ. ಇನ್ನು ITR ಸಲ್ಲಿಸಿರುವ ಅಂತಹ ಹಣವನ್ನು ಕೂಡ ಅಧಿಕಾರಿಗಳು ಮುಟ್ಟುವ ಹಾಗಿಲ್ಲ.
ಈ ಸಂದರ್ಭದಲ್ಲಿ ಇರುವಂತಹ ಅಧಿಕಾರಗಳನ್ನು ನೋಡುವುದಾದರೆ ಮೊದಲಿಗೆ ರೈಡ್ ಮಾಡಲು ಬಂದಿರುವ ಅಧಿಕಾರಿಗಳ ಬಳಿ ನೋಟಿಸ್ ಅನ್ನು ನೀವು ಕೇಳಬಹುದಾಗಿದೆ ಹಾಗೂ ಅವರ ಐಡಿ ಪ್ರೂಫ್(I’d Proof) ಅನ್ನು ಕೂಡ ಅವರಿಂದ ಕೇಳಿ ಪಡೆದುಕೊಳ್ಳಬಹುದಾಗಿದೆ. ಮಹಿಳೆಯರ ತಪಾಸಣೆ ಮಾಡಿಸಬೇಕು ಎಂದರೆ ಕೇವಲ ಮಹಿಳಾ ಅಧಿಕಾರಿಗಳು ಇದ್ದರೆ ಮಾತ್ರ ಸಾಧ್ಯ ಎಂಬುದನ್ನು ಕೂಡ ಅರ್ಥಮಾಡಿಕೊಳ್ಳಬೇಕು. ಮನೆಯ ಮಕ್ಕಳನ್ನು ಶಾಲೆಗೆ ಹೋಗುವುದನ್ನು ತಪ್ಪಿಸಲು ಅಧಿಕಾರಿಗಳಿಂದಲೂ ಕೂಡ ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು.