Karnataka Times
Trending Stories, Viral News, Gossips & Everything in Kannada

Home Loan: ಈ ಬ್ಯಾಂಕ್ ಗಳಲ್ಲಿ ಗೃಹ ಸಾಲದ ಮೇಲಿನ ಬಡ್ಡಿ 8.60% ಮಾತ್ರ!

ಕರೋನಾದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಹಿಂದೆ ಬಿದ್ದಿತ್ತು. ಆದರೆ ಇದೀಗ ಮತ್ತೆ ಒಂದು ಹಂತಕ್ಕೆ ಬಂದು ತಲುಪಿರುವ ರಿಯಲ್ ಎಸ್ಟೇಟ್ ಉದ್ಯಮದಿಂದಾಗಿ ಮನೆ ಹಾಗೂ ವಾಣಿಜ್ಯ ಆಸ್ತಿ ಮೇಲಿನ ಬೇಡಿಕೆಗಳು ಹೆಚ್ಚಿವೆ. ಅದೇ ಸಮಯದಲ್ಲಿ ಗೃಹ ಸಾಲಗಳ ಬಡ್ಡಿದರವೂ ಕೂಡ ದುಬಾರಿಯಾಗಿವೆ. ಆರ್ ಬಿ ಐ (RBI) ದೇಶದಲ್ಲಿ ಸತತ ಆರು ಬಾರಿ ರೇಪೋ ದರವನ್ನು ಹೆಚ್ಚಿಸಿದ್ದು, ದೇಶದ ದೊಡ್ಡ ಬ್ಯಾಂಕ್ ಗಳಾಗಿರುವ ಎಸ್ ಬಿ ಐ, ಎಚ್ ಡಿ ಎಫ್ ಸಿ, ಆಕ್ಸಿಸ್ ಬ್ಯಾಂಕ್ ಮೊದಲಾದವುಗಳು ಬಡ್ಡಿ ದರವನ್ನು ಕೂಡ ಹೆಚ್ಚಿಸಿವೆ. ಗೃಹ ಸಾಲದ ಮೇಲಿನ ಬಡ್ಡಿದರ ಹೆಚ್ಚಾದರೆ ಮನೆ ನಿರ್ಮಾಣದ ವೆಚ್ಚವೂ ಕೂಡ ದುಬಾರಿಯಾಗುತ್ತದೆ. ಹಾಗಾಗಿ ಜನರು ಚಿಂತೆಗೆ ಒಳಗಾಗುವುದು ಸಹಜ. ಆದರೆ ಕೆಲವು ಬ್ಯಾಂಕ್ಗಳು ಮಾತ್ರ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ(Home Loan) ನೀಡುತ್ತಿವೆ. ಯಾವ ಬ್ಯಾಂಕ್ ಗಳು ನೋಡೋಣ.

Advertisement

ಈ ಬ್ಯಾಂಕ್ ಗಳಲ್ಲಿ ಗೃಹ ಸಾಲದ ಮೇಲಿನ ಬಡ್ಡಿದರ ಹೀಗಿವೆ:

Advertisement

  • Axis Bank: 8.75%
  • Aditya Birla Housing Finance: 8.75%
  • Union Bank of India: 8.6%
  • Indian Overseas Bank: 8.6%
  • Bajaj Finserv: 8.6%
  • LIC Housing Finance: 8.6%
  • Kotak Mahindra Bank: 8.65%
  • Bank of Maharashtra:8.6%
  • Central Bank of India: 8.55%

Advertisement

ಗೃಹ ಸಾಲದ ಬಡ್ಡಿ ದರಗಳು ಗ್ರಾಹಕರ ಕ್ರೆಡಿಟ್ ಸ್ಕೋರ್ (Credit Score) ಮೇಲೆ ಅವಲಂಬಿತವಾಗಿರುತ್ತದೆ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾಗಿರುತ್ತವೆ. ಸಿಬಿಲ್ ಸ್ಕೋರ್ (CIBIL Score) ಉತ್ತಮವಾಗಿದ್ದರೆ, ಕಡಿಮೆ ಬಡ್ಡಿದರದಲ್ಲಿ ಬೇಗ ಲೋನ್ ಸಿಗುತ್ತದೆ. ಅದೇ ಸ್ಕೋರ್ ಕಡಿಮೆಇದ್ದರೆ ಅಂತವರಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವೂ ಅಧಿಕವಾಗಿರುತ್ತದೆ.

Advertisement

ದೇಶದಲ್ಲಿ ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಆರ್ ಬಿ ಐ (RBI) ತನ್ನ ರೆಪೋ ದರವನ್ನು ಹೆಚ್ಚಿಸುವ ಅನಿವಾರ್ಯತೆ ಇತ್ತು. ಹಾಗಾಗಿ ಸತತ ಆರು ಬಾರಿ ರೆಪೋ ದರವನ್ನು ಹೆಚ್ಚಿಸಿತ್ತು. 250 ಬೇಸಿಸ್ ಪಾಯಿಂಟ್ ಗಳ ಮೇಲೆ ರೆಪೋ ದರ ಹೆಚ್ಚಿಸಲಾಗಿದೆ. ಮೇ 2022 ರಿಂದ ಆರ್‌ಬಿಐ (RBI) ರೆಪೊ ದರವನ್ನು ಆರು ಬಾರಿ ಹೆಚ್ಚಿಸಿದೆ. ಶೇಕಡಾ 2.50 ರಷ್ಟು ಹೆಚ್ಚಳವಾಗಿದೆ. ಈಗ ರೆಪೋ ದರವು 6.50% ಗೆ ತಲುಪಿದೆ. ರೆಪೋ ದರ ಹೆಚ್ಚಳದಿಂದ ಬ್ಯಾಂಕ್‌ಗಳ ಸಾಲದ ಬಡ್ಡಿ ದರವೂ ಕೂಡ ಹೆಚ್ಚಾಗಿದೆ.

Leave A Reply

Your email address will not be published.